ಶಿಕ್ಷಕರು ಮನುಕುಲದ ದೇವರು, ಮಕ್ಕಳ ಭವಿಷ್ಯದ ನಿರ್ಮಾತೃ ಎಂದು ಹೇಳಲಾಗುತ್ತದೆ. ಈ ಮಾತಿಗೆ ಪೂರಕವಾಗಿ ನಡೆದುಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಹಗಲು-ರಾತ್ರಿ ಎನ್ನದೆ ಶ್ರಮಿಸಿದ ಪ್ರಾಮಾಣಿಕ ಹಾಗೂ ಕ್ರಿಯಾಶೀಲ ಶಿಕ್ಷಕರಲ್ಲಿ * ವಯೋಲೆಟ್ ವಿಲ್ಮಾ ಗೊನ್ಸಾಲ್ವಿಸ್ * ಅವರು ಪ್ರಮುಖರು. ಪ್ರಸ್ತುತ ಚಿಕ್ಕಮಗಳೂರು ನಗರದ ಹಿರೇಮಗಳೂ ರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ** ಸೇವೆ ಸಲ್ಲಿಸುತ್ತಿರುವ ಅವರು, ತಮ್ಮ 28 ವರ್ಷಗಳ ಸುದೀರ್ಘ ಸೇವೆಯಲ್ಲಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಶಾಲೆ ಎಂಬುದು ಕೇವಲ ಕಟ್ಟಡವಲ್ಲ; ಅದು ಮಕ್ಕಳ ಭವಿಷ್ಯ ರೂಪಿಸುವ ಜ್ಞಾನ ದೇಗುಲ. ಮಕ್ಕಳೇ ಆದರೆ ಮೊಗ್ಗುಗಳಾದರೆ, ಜ್ಞಾನವೆಂಬ ನೀರೆರೆದು, ಶಿಸ್ತು, ಸಂಯಮ, ಮೌಲ್ಯಗಳು ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಅವರ ಬದುಕಿನಲ್ಲಿ ಜ್ಞಾನದೆ ಸುವಾಸನೆ ಹರಡುವ ಕಾರ್ಯ ಶಿಕ್ಷಕರದ್ದಾಗಿದೆ. ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದವರು ವಿಲ್ಮಾ ಮೇಡಂ.

ವಿಲ್ಮಾ ಗೊನ್ಸಾಲ್ವಿಸ್ ಅವರು *1998ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಬ್ಬಿಣ ಸೇತುವೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ **ಇಂದಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ* ಸೇವೆ ಸಲ್ಲಿಸಿ, ಅಲ್ಲಿಯೂ ಸೃಜನಶೀಲ ಹಾಗೂ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡರು. ನಂತರ ಹಿರೇಮಗಳೂರು ಶಾಲೆಗೆ ವರ್ಗಾವಣೆಯಾದ ಬಳಿಕ, ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವುದು ಅವರ ಮೊದಲ ಆದ್ಯತೆಯಾಗಿತ್ತು, ಶಾಲೆಯ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಪೋಷಕರನ್ನು ಭೇಟಿ ಮಾಡಿ, ಸರ್ಕಾರಿ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣದ ಕುರಿತು ಅರಿವು ಮೂಡಿಸಿದರು. ಇದರ ಪರಿಣಾಮವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಕಂಡಿತು.
ಕಲಿಕೋಪಕರಣಗಳ ಬಳಕೆ, ಚಟುವಟಿಕೆ ಆದ-ಇರಿತ ಬೋಧನೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸ ಮಾಡಿದರು. ಕಲಿಕಾ ಫಲಗಳ ಪ್ರಗತಿ, ಶಾಲಾ ಪರಿಸರದ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಆದ್ಯತೆ ನೀಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು.
ದಾನಿಗಳ ಸಹಕಾರದಿಂದ ಶಾಲೆಗೆ ಹೊಸ ರೂಪಃ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿಯೂ ವಿಲ್ಮಾ ಅವರ ಪಾತ್ರ ಮಹತ್ವದ್ದಾಗಿದೆ. ದಾನಿಗಳ ಸಹಕಾರ ಪಡೆದು ಶಾಲೆಯಲ್ಲಿ ಆವಾಟರ್ ಪ್ಯೂರಿಫೈಯರ್*, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ವಿಶಾಲವಾದ ಆಟದ ಮೈದಾನದಲ್ಲಿ ಮಕ್ಕಳಿಗಾಗಿ *ಉಯ್ಯಾಲೆ, ಚಾರುಬಂಡಿ, ಸೀಸಾ ಸೇರಿದಂತೆ ವಿವಿಧ ಆಟೋಪಕರಣಗಳನ್ನು ಗಳನ್ನು దానిగళ ನೆರವಿನಿಂದ ಅಳವಡಿಸಲಾಗಿದೆ. ಈ ಸೌಲಭ್ಯಗಳನ್ನು ಒದಗಿಸಲು ಸಹಕರಿಸಿದ ಡಾ. ಸುನಿತಾ ಮಹೇಶ್ವರಿ* ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ.ತರಗತಿ ಕೊಠಡಿಗಳಲ್ಲಿ 9 ಮಕ್ಕಳು ಆರಾಮವಾಗಿ ಕುಳಿತು ಕಲಿಯಲು ಅನುಕೂಲವಾಗುವಂತೆ **ಸುಮಾರು ಐದು ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ಎಸ್ ಬಿಐ ಯಶಸ್ವಿಯಾಗಿದ್ದಾರೆ.ಶಾಲೆಯ ಮುಂಭಾಗದಲ್ಲಿ ಬಣ್ಣ-ಬಣ್ಣದ ಹೂದೋಟ, ಹಿಂಭಾಗದಲ್ಲಿ ಹಣ್ಣು-ಹಂಪಲುಗಳ ತೋಟ ನಿರ್ಮಿಸಿ, ಶಾಲಾ ಪರಿಸರವನ್ನು ಆಕರ್ಷಕವಾಗಿಸಿದ್ದಾರೆ. ಇದಲ್ಲದೆ ಕಂಪ್ಯೂಟರ್, ಪ್ರಿಂಟರ್, ಟ್ರ್ಯಾಕ್ ಸೂಟ್‌ಗಳು, ಸೈಟರ್‌ಗಳು, ಮೈಕ್ ಸೆಟ್, ಕುರ್ಚಿಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ
ಸುಸಜ್ಜಿತ ಶಾಲಾ ಕಟ್ಟಡದ ಅಗತ್ಯವನ್ನು ಮನಗಂಡು, ಶಾಸಕರ ಸಹಕಾರ ಪಡೆಯಲು ಮುಂದಾದ ವಿ ವಿಲ್ಮಾ ಅವರು ಈ ಪ್ರಯತ್ನದಲ್ಲಿಯೂ ಯಶಸ್ವಿಯಾಗಿದ್ದಾರೆ. ತಮ್ಮಯ್ಯ ಅವರ ಸಹಕಾರದೊಂದಿಗೆ ಟೆಡೆಂಟ್ ಸಂಸ್ಥೆಯನ್ನು ಸಂಪರ್ಕಿಸಿ, ಶಾಲೆಯ ಸಂಪೂರ್ಣ ನವೀಕರಣ ಹಾಗೂ ಹೊಸ ಕಟ್ಟಡ ನಿರ್ಮಾಣ-ಕೈ ಸಹಕಾರ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅವರ ಸೇವಾ ಅವಧಿಯ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗುವಂತೆ ಪ್ರತಿ ವರ್ಷ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಿ, ವಿವಿಧ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು **? ನೋಡಿ ಕಲಿಯುವ? ಅನುಭವಾತ್ಮಕ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದಾರೆ.
ಶಾಲೆಯ ಮೇಲಿನ ತಮ್ಮ ಬದತೆಗೆ ಮತ್ತೊಂದು ಉದಾಹರಣೆಯಾಗಿ, ಈ ವರ್ಷದ ಆಗಸ್ಟ್‌ನಲ್ಲಿ ತಮ್ಮ ಸ್ವಂತ ಹಣದಲ್ಲಿ ಸುಮಾರು 1.10 ಲಕ್ಷ ರೂ. ವೆಚ್ಚ ಮಾಡಿ ಆಕರ್ಷಕ ಧ್ವಜಕಟ್ಟೆಯನ್ನು ನಿರ್ಮಿಸಿ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಇದು ಶಾಲೆಯ ಮೇಲಿನ ಅವರ ಆತ್ಮೀಯತೆ ಹಾಗೂ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಪ್ರತಿಭಾ ಕಾರಂಜಿ, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಮಕ್ಕಳನ್ನು ಸಿದ್ದಪಡಿಸಿ, ಹಲವು ಬಹುಮಾನಗಳನ್ನು ಗಳಿಸುವಂತೆ ಮಾಡಿದ್ದಾರೆ. ಕ್ರೀಡಾಕೂಟಗಳಲ್ಲಿಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಶಾಲೆಯ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಜಯ ಸಾಧಿಸುವಂತೆ ಪ್ರೋತ್ಸಾಹಿಸಿದ್ದಾರೆ.
ಅಭಿವೃದ್ಧಿಯ ಜೊತೆಗೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೂ ವಿಲ್ಕಾ ಅವರು ಧ್ವನಿಯಾಗಿದ್ದಾರೆ. *1999ರಲ್ಲಿ ನಡೆದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ* ಗೆಲುವು ಸಾಧಿಸಿ ನಿರ್ದೇಶಕಿಯಾಗಿ ಆಯ್ಕೆಯಾದರು. * 2009ರ ಚುನಾವಣೆಯಲ್ಲಿ* ಮತ್ತೊಮ್ಮೆ ಸ್ಪರ್ಧಿಸಿ ಜಯಗಳಿಸಿದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. ಬಳಿಕ 2020ರಲ್ಲಿ ನಡೆದ ಚುನಾವಣೆಯಲ್ಲಿಯೂ ವಿಜಯ ಸಾಧಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆಯಾಗಿ* ಆಯ್ಕೆಯಾಗಿ ಜಿಲ್ಲೆಯ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದರು.
ಸೇವೆಗೆ ಸಂದ ಪ್ರಶಸ್ತಿಗಳು: ವಿಲ್ಮಾ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ. * ಇನ್ನರ್ ವೀಲ್ ಸಂಸ್ಥೆ, ಚಿಕ್ಕಮಗಳೂರು, ಇವರ ಕಾರ್ಯವೈಖ-ರಿಯನ್ನು ಗುರುತಿಸಿ *2017ರಲ್ಲಿ ನೇಷನ್ ಬಿಲ್ಡರ್ ಪ್ರಶಸ್ತಿ* ನೀಡಿ ಗೌರವಿಸಿದೆ.ಅದೇ ರೀತಿ *2024-25ನೇ ಸಾಲಿನಲ್ಲಿ ಅಪ್ಪು ಯುವಕ ಸಂಘದಿಂದ ‘ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ* ನೀಡಿ ಗೌರವಿಸಲಾಗಿದೆ.ಈಗೆ ಸುದೀರ್ಘ 28 ವರ್ಷಗಳ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯ ವತಿಯಿಂದ ++ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಸೇವೆಗೆ ದೊರೆತ ಮತ್ತೊಂದು ಮಹತ್ವದ ಗೌರವವಾಗಿದೆ.
ನಮ್ರತೆ, ಗೌರವ ಮತ್ತು ಸದ್ಭಾವನೆಯಿಂದ ಮಕ್ಕಳ ಹಾಗೂ ಪೋಷಕರ ಮನಗೆದ್ದಿರುವ ಎಲ್ಲಾ ಅವರು ವಿದ್ಯಾರ್ಥಿಗಳ ನೆಚ್ಚಿನ ವಿಲ್ಲಾ ಟೀಚರ್? ಆಗಿದ್ದಾರೆ. ತಮ್ಮ ವೃತ್ತಿಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಂಡು, ಶಿಕ್ಷಕ ವೃತ್ತಿಯ ಗೌರವವನ್ನು ಹೆಚ್ಚಿಸಿದವರು. ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ ಸೀರೆ ಧರಿಸುವ ಅವರ ಸರಳ ಹಾಗೂ ಸಾಂಪ್ರದಾಯಿಕ ವ್ಯಕ್ತಿತ್ವವೂ ಅನೇಕ-ರಿಗೆ ಮಾದರಿಯಾಗಿದೆ. ಶಿಕ್ಷಕರು ಕೇವಲ ಪಾಠ ಮಾರ್ಗದರ್ಶಕರು ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ ಸೇವೆ: ಶಾಲೆಯ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಗಳನ್ನು ಕೈಗೊಂಡು, ಸುಮಾರು 28 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿರುವ ಎಲ್ಲಾ ಗೊನ್ಸಾಲ್ವಿಸ್ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ.
ಮಕ್ಕಳ ಪ್ರೀತಿ, ಪೋಷಕರ ಗೌರವ, ಸಹೋದ್ಯೋಗಿಗಳ ಮೆಚ್ಚುಗೆ ಹಾಗೂ ಸಮಾಜದ ಮನ್ನಣೆ ಗಳಿಸಿರುವ ಶಿಕ್ಷಕಿಗೆ ಈ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಗೌರವವನ್ನೇ ಹೆಚ್ಚಿಸಿದೆ. ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕು ಬಂಗಾರವಾಗಲು ಶ್ರಮಿಸಿರುವ ಅವರ ಸೇವೆಗೆ ದೊರೆತ ಈ ಗೌರವವು ನಿಜಕ್ಕೂ ಸಾರ್ಥಕ. ಶಿಕ್ಷಕಿಯೊಬ್ಬರು ಶಾಲೆಯನ್ನು ಬದಲಿಸಿದರೆ, ಆ ಶಾಲೆ ಹಲವು ತಲೆಮಾರುಗಳ ಬದುಕನ್ನು ಬದಲಾಯಿಸಬಲ್ಲದು. ಅಂತಹ ಬದಲಾವಣೆಯ ಹಿಂದೆ ನಿಂತಿರುವ ಎಲ್ಲಾ ಗೊನ್ಸಾಲ್ವಿಸ್ ಅವರ ಸೇವೆ ಚಿಕ್ಕಮಗಳೂರಿನ ಶಿಕ್ಷಣ ಕ್ಷೇತ್ರಕ್ಕೆ ಮಾದ-ರಿಯಾಗಲಿ ಎಂಬುದು ಆಶಯ.
ಲೇಖನ : ಮೋಹನಾಕ್ಷಿ.ಸಿ. ಉಪಾಧ್ಯಾಯಿನಿ,
ಸ.ಹಿ.ಪ್ರಾ.ಶಾಲೆ ಆದಿಶಕ್ತಿನಗರ, ಚಿಕ್ಕಮಗಳೂರು


