ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ಕ್ರಿಯೇಟಿವ್ ಮೈಂಡ್ಸ್ ಯೂತ್ ಅಸೋಸಿಯೇಷನ್ ಮೂಡಿಗೆರೆ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು, ತಾಲ್ಲೂಕು ಪಂಚಾಯಿತಿ ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಪತ್ರಕರ್ತ ರಾಘವೇಂದ್ರ ಕೆಸವಳಲು ಮಾತನಾಡಿ ; ಸ್ಪರ್ಧಾ ಮನೋಭಾವದಿಂದ ಕ್ರೀಡಾಪಟುಗಳು ಆಟೋಟಗಳಲ್ಲಿ ಭಾಗವಹಿಸಬೇಕು. ತೀರ್ಪುಗಾರರ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದರು.
ದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗಿದೆ. ಈ ಭಾಗದ ಕ್ರೀಡಾಪಟುಗಳು ಮೈಸೂರು ದಸರಾದಲ್ಲೂ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು, ಪ್ರಯತ್ನಿಸಿದರೆ ಅವಕಾಶ ಪಡೆಯಬಹುದಾಗಿದೆ ಎಂದ ಅವರು ಕಳೆದ ಹನ್ನೆರಡು ವರ್ಷಗಳಿದಂಲೂ ಕ್ರಿಯೇಟೀವ್ ಮೈಂಡ್ಸ್ ಯೂತ್ ಅಸೋಸಿಯೇಷನ್ ಕ್ರೀಡಾಕೂಟಗಳಲ್ಲಿ ತೊಡಗಿಕೊಂಡು ಮಾಡಿಕೊಂಡು ಬರುತ್ತಿದ್ದು ಅಧ್ಯಕ್ಚ ಮನೋಜ್ ಮತ್ತು ಸದಸ್ಯರುಗಳು ಶ್ರಮವಹಿಸುತಿತರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕೆಡಿಪಿ ನಾಮನಿರ್ದೆಶಕ ಕೆ.ಎ.ರವಿ ಕುನ್ನಳ್ಳಿ ಮಾತನಾಡಿ. ದಸರಾ ಕ್ರೀಡಾಕೂಟ ಈ ಸಾಲಿನಲ್ಲಿ ಸರಳ ಕ್ರೀಡಾಕೂಟವಾಗಿ ನಡೆಯುತ್ತಿದ್ದರು, ಗ್ರಾಮಾಂತರ ಪ್ರದೇಶದ ಕ್ರೀಡಾಕೂಟ ಗಳು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿ ಯಾಗುವುದು. ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಅನುಕೂಲ ವಾಗುತ್ತವೆ ಎಂದರು.
ಕಸಾಪ ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ. ಕ್ರೀಡೆಯಿಂದ ಆರೋಗ್ಯವಾಗಿರು ಸಾಧ್ಯ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆಯಬೇಕು, ಪಟ್ಟಣದ ಡಾ.ಪಿ.ಎ.ಅಡ್ಯಂತಾಯ ರಂಗ ಮಂದಿರದ ಪಕ್ಕದಲ್ಲೇ ಇರುವ ಬಾಲ್ ಬ್ಯಾಂಡ್ಮಿಟನ್ ಕ್ರೀಡಾಂಗಣವಿದ್ದು ಯುವಕರು ಮತ್ತು ವಯಸ್ಸಾದವರೂ ದಿನಂ ಪ್ರತಿ ಬಾಲ್ ಬ್ಯಾಂಡ್ಮಿಟನ್ ಆಡುತ್ತಿದ್ದೇವೆ. ಕ್ರೀಡೆ ಬರಿ ಒಂದು ದಿನಕ್ಕೆ ಸ್ಥಿಮಿತವಾಗಿರದೆ ಜೀವನ ದುದ್ದಕ್ಕೂ ಅಳವಡಿಸಿಕೊಂಡಲ್ಲಿ ಮಾನಸಿಕ ಮತ್ತು ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಕ್ರಿಯೇಟಿವ್ ಮೈಂಡ್ಸ್ ಯೂತ್ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತ ಬಾಷಣ ಮಾಡಿ ಕಳೆದ 12 ವರ್ಷಗಳಿಂದಲೂ ನಮ್ಮ ಯೂತ್ ಅಸೋಸಿಯನ್ ಸದಸ್ಯರುಗಳು ಕ್ರೀಡೆಗೆ ಸಹಕರಿಸುತ್ತಿದ್ದು ಮುಂದಿನ ದಿನಗಳಲ್ಲೂ ತಮ್ಮ ಸಹಕಾರ ವಿರುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ಮ್ನ ವಹಿಸಿದ್ದ ಶಿಕ್ಷಣ ಇಲಾಖೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಲವೀನ ಸಿಲ್ವಿಯ ಲೋಬೋ ಕ್ರೀಡಾಕೂಟವನ್ಮ್ನ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಜಿಲ್ಲಾ ವಾಲಿಬಾಲ್ ತರಬೇತುದಾರರು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಕೆಯ ಸಿ.ಎಸ್.ವಿನುತ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಂಜಾ, ಜೆಎಸ್ ಶಾಲೆಯ ಅಧ್ಯಕ್ಷ ಮೊಹಮ್ಮದ್ ಇಮ್ರಾನ್, ಸಚೇತನಾ ಯುವ ಸಂಘದ ಅಧ್ಯಕ್ಷ ರವಿರಾಝ್ ಅರಸ್, ಶಶಾಂಕ್ ಸಾಲೀಯಾನ, ವೇದಿಕೆಯಲ್ಲಿ ಉಪಸ್ಥಿತÀರಿದ್ದರು. ಬಾಲ್ ತ್ರೋ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೇ ನೀಡಲಾಯಿತು.


