September 22, 2026
;
ganapathi1

 

 

ದೇಶದ ಪ್ರತಿಯೊಂದು  ಗಲ್ಲಿ  ಗಲ್ಲಿಗಳಲ್ಲೂ ಗಣೇಶೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ನಿರ್ಬಂಧ ಇಲ್ಲದೆ ಆಚರಿಸುತ್ತೆವೋ ಅಂದೇ ನಮಗೆ ನಿಜವಾದ ಸ್ವತಂತ್ರ ಸಿಕ್ಕಿದಂಗೆ ಎಂದು  ಶ್ರೀ ತೊಂಟದಾರ್ಯ ಮಠದ ಶ್ರೀ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿ ಹೇಳಿದರು

ಅವರು ಶುಕ್ರವಾರ ಮೂಡಿಗೆರೆ ಅಡ್ಯಾತಾಯ ರಂಗಮಂದಿರದಲ್ಲಿ ಸಾರ್ವಜನಿಕ ಶ್ರೀ ಹಿಂದೂ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 108 ತೆಂಗಿನಕಾಯಿ ಗಣ ಹೋಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿಗೆ ಶಾಂತಿಯನ್ನು ಸಂಸ್ಕಾರವನ್ನು ಸಂಸ್ಕುತಿಯನ್ನು ಕಲಿಸಿಕೊಟ್ಟ ಧರ್ಮ  ನಮ್ಮ ಹಿಂದೂ ಧರ್ಮ  ಮುಸ್ಲಿಂ ಸಮಾಜದ ಹಬ್ಬ ಕ್ರೈಸ್ತ  ಸಮಾಜದ ಹಬ್ಬಗಳಲ್ಲಿ  ದೇಶದ ಯಾವುದೇ ಒಂದು ಭಾಗದಲ್ಲಿ ಹಿಂದೂ ಧರ್ಮದವರು ಕಲ್ಲು ಬಿಸಾಡಿರುವ ಒಂದು ಘಟನೆ ಇಲ್ಲ  ನಮ್ಮ ಗಣಪತಿ ಮೆರವಣಿಗೆಯಲ್ಲಿ ಮಸೀದಿಯಿಂದ  ಕಲ್ಲು ಚಪ್ಪಲಿ ಬರುತ್ತೆ ಯಾಕೆ  ಸ್ವತಂತ್ರ ಪೂರ್ವದಲ್ಲಿ ನಮ್ಮ ಧರ್ಮದ ಮೇಲೆ ನಿರಂತರವಾಗಿ ಬೇರೆ ಧರ್ಮಿಯರಿಂದ ದಾಳಿ ಆದರೂ ಸಹಿಸಿಕೊಂಡ್ವಿ ಆದರೆ ಈಗ ನಮ್ಮವರಿಂದಲೇ ಕಾನೂನು ಎಂದು ಧಾರ್ಮಿಕ ನಮ್ಮ ಭಾವನೆಗೆ ದಕ್ಕೆ ತರುತಿದ್ದಾರೆ

ನಮ್ಮದೇ ನೆಲದಲ್ಲಿ ಆ ರಸ್ತೆಯಲ್ಲಿ ಈ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದು ತಾಕಿತ್ತು ಮಾಡುತ್ತಾರೆ ರಾಜಕೀಯ ಬಂದು ಕೇವಲ 80 ವರ್ಷ ಆಗಿರುವುದು ಹಿಂದೂ ಧರ್ಮದ ಹಬ್ಬಗಳು ಆಚರಣೆಗಳು ಅನಾಧಿಕಾಲದಿಂದಲೂ ಇರುವಂತದ್ದು  ಇನ್ ಮೇಲೆ ಹಿಂದೂ ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ  ರಾಜಕೀಯ  ನಾಯಕರು ಯಾವುದೇ ಪಕ್ಷದಲ್ಲಿ ಇರಲಿ ಧರ್ಮವಾಗಿ ಅಧಿಕಾರ ನಡೆಸಿ ಇಲ್ಲವಾದಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ಕೊಡುತ್ತೆ ಎಂದು ಎಂದು ಹೇಳಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ  ಈ ಹಿಂದೆ ಗಣಪತಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ದೊಡ್ಡ ಅಪರಾಧ ಅನ್ನುವಂತೆ ನಮ್ಮ ಪಕ್ಷದವರು ಚರ್ಚೆ ಮಾಡಿದ್ರು ಸಚಿವ ಸ್ಥಾನ ತಪ್ಪಲು ಅದೇ ಕಾರಣ ಎಂದು ದೊಡ್ಡ ದೊಡ್ಡವರೆಲ್ಲ ಮಾತಾಡಿದರು ನಾನು ಮೊದಲು ಹಿಂದೂ ನಂತರ ರಾಜಕಾರಣಿ ನನ್ನ ಆಚರಣೆ ಬಗ್ಗೆ ನನಗೆ ಗೊತ್ತಿದೆ  ಅದನ್ನು ಯಾರಿಗೂ ತಿಳಿಸುವ ಅಗತ್ಯ ಇಲ್ಲ

ನಾನು ಬಾಲ್ಯದಿಂದಲೂ ಪೂಜಿಸಿ ಕೊಂಡು ಬರುತ್ತಿರುವ ಗಣೇಶೋತ್ಸವ  ಇದಕ್ಕೆ ಹೋಗೋದು ತಪ್ಪು ಅನ್ನುವಂತದ್ದು ನಾನು ಒಪ್ಪಿಕೊಳೋಕೆ ಸಾಧ್ಯವಿಲ್ಲ  ನನ್ನ ರಾಜಕೀಯ ಕಾಂಗ್ರೆಸ್ ಪಕ್ಷದಲ್ಲಿಯೇ ಹೊರತು ಬೇರೆ ಪಕ್ಷದಲ್ಲಿ ಅಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ  ತಾಲೂಕಿನಲ್ಲಿ ವಿವಿಧ ದೇವಸ್ಥಾನ ದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಚಕರನ್ನು ಸನ್ಮಾನಿಸಿ ಗೌರವಿಸಲಾಯಿತು,

ವೇದಿಕೆಯಲ್ಲಿ ಮಾಜಿ ಉಪ ಸಭಾಪತಿ ಎಂ ಕೆ ಪ್ರಾಣೇಶ್, ಸಮಿತಿ ಅಧ್ಯಕ್ಷ ಪಿ.ಜಿ. ಅನುಕುಮಾರ್  ಜೆ ಎಸ್ ರಘು, ದೇವರಮನೆ ದೇವಸ್ಥಾನದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *