September 25, 2026
;
suddi-5 (1)

 

 

ದಲಿತ ಸಮುದಾಯದ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪೂನಾ ಒಪ್ಪಂದ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ನಗರದ ಆಜಾದ್‍ಪಾರ್ಕ್ ವೃತ್ತದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಮರ್ಲೆ ಅಣ್ಣಯ್ಯ 1932ರ ಪೂನಾ ಒಪ್ಪಂದದ ಮೂಲಕ ಅಂಬೇಡ್ಕರ್ ಅವರು ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ರಾಜಕೀಯ ಮೀಸಲಾತಿ, ಹಕ್ಕು ಗಳು ಮತ್ತು ಸಾಮಾಜಿಕ ನ್ಯಾಯದ ಆಶಯಗಳಾಗಿವೆ ಎಂದು ತಿಳಿಸಿದರು.

ಇಂದಿಗೂ ದೇಶದಲ್ಲಿ ಪೂನಾ ಒಪ್ಪಂದ ಪೂರ್ಣಗೊಂಡಿಲ್ಲ. ಬಹುತೇಕ ದಲಿತ ಸಮುದಾಯಕ್ಕೆ ಈ ಒಪ್ಪಂದ ಬಗ್ಗೆ ಅರಿವಿದಲ್ಲಂತಾಗಿದೆ ಎಂದ ಅವರು ರಾಜಕೀಯ ಮೀಸಲಾತಿ ಇದ್ದರೂ ಸಾಮಾಜಿಕ ಮೀಸ ಲಾತಿ ಧಕ್ಕಿಲ್ಲ. ಆದ್ದರಿಂದ ಸರ್ಕಾರ ಪೂನಾ ಒಪ್ಪಂದದ ಆಶಯವನ್ನು ಈಡೇರಿಬೇಕು ಎಂದರು.

ಪೂನಾ ಒಪ್ಪಂದ ಸಂಬಂಧ ಬಿ.ಆರ್.ಅಂಬೇಡ್ಕರ್ ಎರಡನೇ ದುಂಡುಮೇಜಿನ ಸಭೆಯಲ್ಲಿ ದಲಿತರಿಗೆ ಪ್ರತ್ಯೇಕ ಮತದಾನ ನೀಡಬೇಕು ಎಂದು ವಾದ ಮಂಡಿಸಿದ್ದರು. ಆ ಸಮಯದಲ್ಲಿ ಗಾಂಧಿಜೀಯವರು ಒಪ್ಪಂದದ ವಿರುದ್ಧ ಅನೇಕ ದಿನಗಳ ಉಪವಾಸ ಚಳುವಳಿ ನಡೆಸಿ ದಲಿತ ಸಮುದಾಯಕ್ಕೆ ಅನ್ಯಾಯಮಾ ಡಿದ್ದರು ಎಂದರು.

ಈ ನಡುವೆ ಗಾಂಧೀಜಿ ಸಾವು-ಬದುಕಿನ ಕೊನೆಗಳಿಗೆಯಲ್ಲಿ ಪೂನಾದ ಯೆರವಾಡಾ ಜೈಲಿನಲ್ಲಿ ಗಾಂ ಧೀಜಿ ಮತ್ತು ಅಂಭೇಡ್ಕರ್ ಅವರ ನಡುವೆ ಈ ಐತಿಹಾಸಿಕ ಒಪ್ಪಂದ ನಡೆಯಿತು. ಆದರೆ ಪೂನಾ ಒಪ್ಪಂದ ವು ಕೇವಲ ಒಂದು ಒಪ್ಪಂದವಾಗಿರದೇ, ದಲಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂಕೇತವಾ ಗಿತ್ತು ಎಂದು ತಿಳಿಸಿದರು.

ಆದ್ದರಿಂದ ರಾಜ್ಯಾದ್ಯಂತ ಪೂನಾ ಒಪ್ಪಂದ ಜಾರಿಗೆ ಆಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಕಾರ್ಯ ಕರ್ತರು ಪ್ರತಿಭಟನೆ ಹಮ್ಮಿಕೊಂಡು ದಲಿತ ಸಮುದಾಯದ ಪರವಾಗಿ ಕೈಜೋಡಿಸುತ್ತಿದೆ ಎಂದರು.

ದಸಂಸ ನಗರ ಸಂಚಾಲಕ ಚೌಡಪ್ಪ ಮಾತನಾಡಿ ಪೂನಾ ಒಪ್ಪಂದ ಕಳೆದು ಶತಮಾನೋತ್ಸವ ಪೂರೈ ಸಿದರೂ ದಲಿತರಿಗೆ ಸಾಮಾಜಿಕ ಹಾಗೂ ರಾಜಕೀಯದ ಅಧಿಕಾರ ಸಿಕ್ಕಿಲ್ಲ. ಕೇವಲ ರಾಜಕಾರಣಿಗಳ ಮತ ಬ್ಯಾಂಕ್‍ಗಳಾಗಿ ಬಳಸಿಕೊಂಡು ಮೂಲೆಗೆ ತಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ರಾಕೇಶ್, ಮೂಡಿಗೆರೆ ಸಂಚಾಲಕ ಗಿರೀಶ್, ಮುಖಂಡರು ಗಳಾದ ಆರ್.ಶೇಖರ್, ಮಂಜಯ್ಯ ಬಾಚಿಗನಹಳ್ಳಿ, ಚಂದ್ರು, ಶೇಷಮ್ಮ, ಯಶೋಧಮ್ಮ, ಹೊನ್ನಪ್ಪ, ಗಿರೀ ಶ್, ಆನಂದ್ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *