ಮೂಡಿಗೆರೆ ತಾಲ್ಲೂಕು ಬಣಕಲ್‍ನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 2025 26ನೇ ಸಾಲಿನಲ್ಲಿ 194 ಕೋಟಿಯ ವ್ಯವಹಾರವನ್ನು ನಡೆಸಿದ್ದು 65 ಲಕ್ಷದ 28 ಸಾವಿರ ನಿವ್ವಳ ಲಾಭ ಗಳಿಸಿದೆ ಮತ್ತು ಎಂದು ಸಂಘದ ಅಧ್ಯಕ್ಷ ಬಿ.ಎಸ್. ನಾರಾಯಣಗೌಡ ಹೇಳಿದರು.
ಬಣಕಲ್ ಚರ್ಚ್ ಹಾಲ್‍ನಲ್ಲಿ ನಡೆದ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
23 ಲಕ್ಷದ 27 ಸಾವಿರ ರೂಗಳ ಷೇರು ಡಿವಿಡೆಂಟ್ ಪೋಷಿಸಲಾಗಿದೆ. ಸಹಕಾರ ಸಂಘದಲ್ಲಿ 163 ಸ್ವಸಹಾಯ ಸಂಘಗಳಿದ್ದು 1 ಕೋಟಿ 65 ಲಕ್ಷದ ಉಳಿತಾಯ ಠೇವಣಿ ಸಂಗ್ರಹಿಸಿ ಸ್ವಸಹಾಯ ಸಂಘಗಳಿಗೆ 1 ಕೋಟಿ 20 ಲಕ್ಷ ಸಾಲ ನೀಡಲಾಗಿದೆ. ಬಣಕಲ್ ಸಹಕಾರ ಸಂಘವು ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ವಸಹಾಯ ಸಂಘವನ್ನು ಹೊಂದಿರುವ ಸಂಘವಾಗಿದೆ. ಸಂಘದ ನೂತನ ಸಭಾಂಗಣ ಮತ್ತು ಭೋಜನಶಾಲೆಯ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಕೆಸಿಸಿ ಬೆಳೆ ಸಾಲ ವಸೂಲಾತಿಯಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ ದಿನೇಶ್ ಮಾತನಾಡಿ, ಕಾಫಿಯ ಗುಣಮಟ್ಟವನ್ನು ಕಾಪಾಡಿಕೊಂಡು ಬಂದರೇ ಬೆಲೆ ಮತ್ತು ಬೇಡಿಕೆ ಸಿಗುತ್ತದೆ. ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮತ್ತು ಸಂಸ್ಕರಣೆ ಮಾಡುವುದನ್ನು ಕಲಿತರೆ ಗುಣಮಟ್ಟದ ಕಾಫಿ ಉತ್ಪಾದಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗಳಾದ ಟಿ.ಎಂ ನಾಗೇಶ್ ಮತ್ತು ಜಾಕಿರ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರಂಗನಾಥ್, ಬಿ.ಎಸ್.ಕಲ್ಲೇಶ್, ಬಿ.ಎಂ.ಭರತ್, ಟಿ.ಎಂ.ಗಜೇಂದ್ರ, ಬಿ.ಎಸ್.ವಿಕ್ರಂ, ಎ.ಆರ್.ಅಭಿಲಾಷ್, ಕೆ.ಕೆ.ಯತೀಶ್, ಜಿ.ಬಿ.ಲಕ್ಷ್ಮಿ, ಹೆಚ್.ಕೆ ಮಮತ, ಬಿ.ಎಂ ರವೀಂದ್ರ, ಬಿ.ಬಿ.ಶರತ್, ಎ.ಬಿ.ನಾಗೇಶಗೌಡ, ಬಿ.ಕೆ.ಚಂದ್ರೇಗೌಡ, ಮೇಲ್ಚಿಚಾರಕರಾದ ಯು.ಸಿ.ಪ್ರಯಾಗ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಜಿ.ಪಿ.ನಿಶಾಂತ್, ಸದಸ್ಯರಾದ ಶಿವರಾಮಶೆಟ್ಟಿ, ಬಾಲಕೃಷ್ಣ, ಬಿ.ಕೆ.ಪೃಥ್ವಿ, ರಮೇಶ್ ಬಿ.ಬಿ. ಸಿಬ್ಬಂದಿಗಳಾದ ಸುಬ್ರಾಯ, ಶ್ರೀನಾಥ್, ನೇತ್ರಾವತಿ, ಸುನೀಲ, ಶ್ರೀನಿಧಿ, ಸಮ್ಮೆದ್ ಜೈನ್, ಹರೀಶ್, ಪ್ರಾರ್ಥರಾಜ್, ಈಶ್ವರಿ, ಸ್ಥನು ಪಟೇಲ್ ಮುಂತಾದವರು ಇದ್ದರು.


