September 25, 2026
;
suddi-1 (1)

 

 

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ  ಬಸರವಳ್ಳಿ ಗ್ರಾಮದ ಬಳಿ ಮುಂಜಾನೆ ಸಲಗವೊಂದು ಕಾಣಿಸಿಕೊಂಡಿದ್ದು, ಸವಾರರಲ್ಲಿ ಕೆಲ ಸಮಯ ಆತಂಕ ಮನೆ ಮಾಡಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಪ್ರಮೋದ್, ಸಲಗವು ಭುವನೇಶ್ವರಿ, ಬೀಟಮ್ಮ ಇನ್ನಿತರ ಗುಂಪುಗಳಿಗೆ ಸೇರಿದ್ದಲ್ಲ, 50 ರಿಂದ 60 ವರ್ಷದ ಪ್ರಾಯದ ಕಾಡಾನೆ ಇದಾಗಿದ್ದು, ಈಗಾಗಲೇ ಆನೆ ಕ್ರಿಯಾಪಡೆ ಸಿಬ್ಬಂದಿ ಮೂಲಕ ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಲಾಗಿದ್ದು ಬಸವನಕೋಟೆ ಕಾಡಿಗೆ ಆನೆ ತೆರಳಿದೆ.

ಕಾಡಾನೆಗಳು ಜನರ ವಸತಿ ಪ್ರದೇಶ, ಕಾಫಿ ತೋಟ, ರಸ್ತೆಗಳಲ್ಲಿ ಕಾಣಿಸಿಕೊಂಡಾಗ ಸಾರ್ವಜನಿಕರು ಅವುಗಳನ್ನು ತಮ್ಮ ಅತಿರೇಕದ ವರ್ತನೆಗಳಿಂದ ಕೆರಳಿಸದೆ 1926 ಆನೆ ಕ್ರಿಯಾಪಡೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ಒದಗಿಸಿ ಸಹಕಾರ ನೀಡಬೇಕು.

ವನ್ಯಜೀವಿಗಳು ಬಹು ಸೂಕ್ಷ್ಮವಾಗಿರುವುದರಿಂದ ಅವುಗಳು ಕೋಪಗೊಂಡರೆ ಜೀವ ಹಾನಿ ಆಗುವಂತೆ ಸಂಭವವಿರುತ್ತದೆ ಆದ್ದರಿಂದ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾಹಿತಿಯನ್ನು ಕೂಡಲೇ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

 

 

Leave a Reply

Your email address will not be published. Required fields are marked *