ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಿ.ಹೊಸಳ್ಳಿ, ಪಲ್ಗುಣಿ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಗುರುವಾರ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಹೆಚ್.ಟಿ. ಪ್ರಸನ್ನ ಅವರು ಮಾತನಾಡಿ ;
ಸಂಘದ ವ್ಯಾಪ್ತಿಯಲ್ಲಿ 10 ಗ್ರಾಮಗಳನ್ನು ಹೊಂದಿರುತ್ತದೆ. 3020 ಜನ ಸದಸ್ಯರು ಸದಸ್ಯತ್ವವನ್ನು ಹೊಂದಿರುತ್ತಾರೆ. ಸಂಘದ ವರದಿ ಸಾಲಿನಲ್ಲಿ ರೂ 225.60 ಲಕ್ಷ ಷೇರು ಬಂಡವಾಳವನ್ನು ಹೊಂದಿದ್ದು, ರೂ 719.60 ಲಕ್ಷ ಆಪದ್ಧನ ಮತ್ತು ಇತರೆ ನಿಧಿ ಹಾಗೂ ಸವಕಳಿ ನಿಧಿ ಮತ್ತು ವೈದ್ಯನಾಥನ್ ವರದಿ ಸಹಾಯ ಧನಗಳನ್ನು ಹೊಂದಿರುತ್ತದೆ. ಇದನ್ನು ಪ್ರತ್ಯೇಕವಾಗಿ ಜಿಲ್ಲಾ ಬ್ಯಾಂಕಿನಲ್ಲಿ ತೊಡಗಿಸಲಾಗಿರುತ್ತದೆ.
ಸಂಘದ ವರದಿ ಸಾಲಿನಲ್ಲಿ ಕೆ.ಸಿ.ಸಿ ಸಾಲವಾಗಿ ರೂ 1564.32ಲಕ್ಷ ತಂದಿದ್ದು ಹಾಗೂ ಠೇವಣಿ ಆಧಾರ ಸಾಲವಾಗಿ 89.34ಲಕ್ಷ ತಂದಿದ್ದು ಚಾಲ್ತಿಯಲ್ಲಿರುತ್ತದೆ.ಹಾಗೂ ನಬಾರ್ಡ್ ಎಂ.ಎಸ್.ಸಿ ಯೋಜನೆ ದೀರ್ಘಾವಧಿ ಸಾಲವಾಗಿ 19.78 ಲಕ್ಷ ತಂದಿದ್ದು 11.11 ಲಕ್ಷ ರೂ ಬಾಕಿ ಇದ್ದು ಚಾಲ್ತಿಯಲ್ಲಿರುತ್ತದೆ.
ಸಂಘದ ವರದಿ ಸಾಲಿನಲ್ಲಿ ರೂ 1442.99 ಲಕ್ಷ ಠೇವಣಿಯನ್ನು ಹೊಂದಿದ್ದು, ಸಂಘದ ವರದಿ ಸಾಲಿನಲ್ಲಿ ರೂ 125.99 ಲಕ್ಷಗಳನ್ನು ಜಿಲ್ಲಾ ಬ್ಯಾಂಕ್ ಸಾಲಗಳ ಬಡ್ಡಿಗಾಗಿ, ಸದಸ್ಯರ ಠೇವಣಿ ಬಡ್ಡಿಗಾಗಿ, ಕಂಪ್ಯೂಟರ್ ಖರೀದಿಗಾಗಿ ಮತ್ತು ಸಾಫ್ಟ್‌ವೇರ್ ಅಳವಡಿಕೆಗಾಗಿ ಮತ್ತು ಕಟ್ಟಡಗಳ ದುರಸ್ಥಿಗಾಗಿ, ಅನುತ್ಪಾದಕ ಆಸ್ತಿಗಾಗಿ ಮತ್ತು ಆಡಿಟ್ ಶುಲ್ಕಕ್ಕಾಗಿ ಕಾಯ್ದಿರಿಸಲಾಗಿದೆ.
ಸಂಘದ ವರದಿ ಸಾಲಿನಲ್ಲಿ ರೂ 954.30 ಲಕ್ಷಗಳನ್ನು ಜಿಲ್ಲಾ ಬ್ಯಾಂಕ್ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಷೇರು ಮತ್ತು ನಿಧಿಗಳು ಹಾಗೂ ಠೇವಣಿಗಳ ರೂಪದಲ್ಲಿ ಬಂಡವಳಿಸಿರುತ್ತದೆ.
ಸಂಘದ ವರದಿ ಸಾಲಿನಲ್ಲಿ 782 ಸದಸ್ಯರಿಗೆ ಕೆ.ಸಿ.ಸಿ ಸಾಲವಾಗಿ ರೂ.1569.21 ಲಕ್ಷ ಮತ್ತು ಸ್ವಂತ ಬಂಡವಾಳ ಕೆ.ಸಿ.ಸಿ ಸಾಲವಾಗಿ 48 ಸದಸ್ಯರಿಗೆ 226.08 ಲಕ್ಷ ಸಾಲ ನೀಡಿದ್ದು ರೂ 1779 1779.27 ಲಕ್ಷ ಸಾಲವು ಚಾಲ್ತಿಯಲ್ಲಿರುತ್ತದೆ. 6 ಸದಸ್ಯರಿಂದ ರೂ 16.02 ಲಕ್ಷ ಸುಸ್ತಿಯಾಗಿರುತ್ತದೆ.
ವರದಿ ಸಾಲಿನಲ್ಲಿ ಸಂಘವು 1082.24 ಲಕ್ಷ ರೂಗಳನ್ನು, ಸದಸ್ಯರಿಗೆ,ಗೊಬ್ಬರ ಖರೀದಿ ಸಾಲ, ವ್ಯಾಪಾರ ಸಾಲ, ವಾಹನ ಖರೀದಿ ಸಾಲ, ಸ್ವ-ಸಹಾಯ ಸಂಘಗಳ ಲಿಂಕೇಜ್ ಸಾಲ, ಠೇವಣಿ ಆಧಾರಸಾಲ ಮತ್ತು ಸಿಬ್ಬಂದಿ ಸಾಲವಾಗಿ ವಿತರಣೆ ಮಾಡಿದ್ದು, ಇದರಲ್ಲಿ 16 ಜನರಿಂದ 10.51 ಲಕ್ಷ ರೂ ಸುಸ್ತಿಯಾಗಿದ್ದು 1071.73 ಲಕ್ಷ ರೂ ಸಾಲವು ಚಾಲ್ತಿಯಲ್ಲಿರುತ್ತದೆ.
ಸಂಘವು ವರದಿ ಸಾಲಿಗೆ ವ್ಯಾಪಾರ ಲಾಭವಾಗಿ ರೂ 40.51 ಲಕ್ಷ ಲಾಭ ಗಳಿಸಿರುತ್ತದೆ ಹಾಗು ಸಂಘದ ಒಟ್ಟು ನಿವ್ವಳ ಲಾಭ ರೂ 69.19 ಲಕ್ಷಗಳಾಗಿರುತ್ತದೆ .
ಸದಸ್ಯರುಗಳು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯನ್ನು ಸದುಪಯೋಗಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಸಂಘವು ಲಾಭಗಳಿಸಿ ಉತ್ತಮ ಸೇವೆಯನ್ನು ಪಡೆಯಲು ಸಹಕರಿಸಬೇಕಾಗಿ ವಿನಂತಿಸಿದರು.

ಹಿರಿಯ ಸಹಕಾರಿ ಶ್ರೀಯುತ ಓ.ಎಸ್.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬಿ.ಎಂ.ರಮೇಶ್, ನಿರ್ದೇಶಕರುಗಳಾದ ಬಿ.ಎಂ. ರಮೇಶ್, ಓ.ಜಿ.ರವಿ, ಕೆ.ಎಸ್.ಗೋಪಾಲಗೌಡ, ಬಿ.ಎಸ್. ರಕ್ಷಿತ್, ಹೆಚ್.ಎಂ. ಅರ್ಜುನ್, ಜೆ.ಎಂ.ನಂದನ್, ಶ್ರೀಮತಿ ರಚನಾ ಅರುಣ್, ಶ್ರೀಮತಿ ಸಾವಿತ್ರಿ ಉಮೇಶ್, ಶೇಖರ್ ಪೂಜಾರಿ, ಎಸ್.ಸುಂದರ, ವೃತ್ತಿಪರ ನಿರ್ದೇಶಕರಾದ ಬಿ.ಎಲ್. ಉಪೇಂದ್ರ, ಹೆಚ್.ಎ. ದ್ಯಾವಣ್ಣಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಯು.ಸಿ. ಪ್ರಯಾಗ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ವೇಣುಗೋಪಾಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.


