October 27, 2026
;
suddi-2 (1)

 

 

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಕೆಲ ಗಂಟೆಗಳ ಕಾಲ ದೈಹಿಕ ಕಸರತ್ತು ನಡೆಸುವುದು ಅತ್ಯಗತ್ಯ. ಜೀವನದ ಕ್ಷಣಗಳನ್ನು ಸಂತೋಷದಿಂದ ಆನಂದಿಸಲು ಹೃದಯ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಸರ್ಜನ್ ಡಾ|| ದೇವರಾಜ್ ಹೇಳಿದರು.

ಚಿಕ್ಕಮಗಳೂರು ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಸಹ ಯೋಗದಲ್ಲಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ಧ ವಿಶ್ವ ಹೃದಯ, ರೇಬಿಸ್ ದಿನ ಹಾಗೂ ಮಕ್ಕಳ ಕ್ಯಾ ನ್ಸರ್ ಕುರಿತ ಜಾಗೃತಿ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೈನಂದಿನ ಬದುಕಿನಲ್ಲಿ ಮನುಷ್ಯ ಯೋಗಾಭ್ಯಾಸ, ಪ್ರಾಣಯಾಮದಂಥ ಆರೋಗ್ಯಕರ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳಬೇಕು. ಶರೀರಕ್ಕೆ ಅನುಕೂಲವಾಗುವ ಆಹಾರ ಪದಾರ್ಥಗಳನ್ನು ಸೇವಿಸುವ ಪದ್ಧತಿ ರೂಢಿ ಸಿಕೊಳ್ಳಬೇಕು. ಆಗ ಮಾತ್ರ ಅಂಗಾಂಗಳನ್ನು ಹತೋಟಿಯಲ್ಲಿಡಲು ಸಾಧ್ಯ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ನಾರಾಯಣಸ್ವಾಮಿ ಮಾತನಾಡಿ ದೇಹದಲ್ಲಿ ಹೃದಯ ಅತ್ಯಂತ ಪ್ರಮುಖ ಅಂಗ. ಹೃದಯದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದ ಅವರು ಇಂದಿನ ವೇಗದ ಜೀವನ ಶೈಲಿಯಲ್ಲಿ ಶಾರೀರಿಕವಾಗಿ ದೇಹವನ್ನು ಕಾಪಾಡಲು ವ್ಯಾಯಾಮ ಅವಶ್ಯಕ ಎಂದು ಹೇಳಿದರು.

ಇಂದಿನ ಕಾಲಮಾನದಲ್ಲಿ ಅಸಮರ್ಪಕ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಒತ್ತಡ ಹಾಗೂ ನಿದ್ರಾಹಿನತೆ ಸೇರಿದಂತೆ ಮುಂತಾದವುಗಳು ಅನಾರೋಗ್ಯವನ್ನು ತಂದೊಡ್ಡಲಿದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ನಿಗಧಿತ ಸಮಯ ನಿದ್ರೆಗೆ ಆದ್ಯತೆ ನೀಡಬೇಕು ಎಂದರು.

ಡಿ.ಎಸ್.ಓ. ಡಾ|| ಮಧುಸೂದನ್ ಮಾತನಾಡಿ ರೇಬಿಸ್ ಅತ್ಯಂತ ಮಾರಕ ಕಾಯಿಲೆಯಾಗಿದೆ. ನಾಯಿ ಕಡಿದ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದುಕೊಳ್ಳುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಬೇಕು. ರೇಬಿಸ್ ಕಾಯಿಲೆ ತಡೆಗೆ ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯುವುದು ಅಗತ್ಯವಾಗಿ ದ್ದು ಆ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದೆ ಎಂದರು.

ಜಾಗೃತಿ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಕಚೇರಿಯಿಂದ ಆಜಾದ್‍ಪಾರ್ಕ್ ವೃತ್ತದವರೆಗೂ ದಾದಿಯರು, ವೈದ್ಯರು ಹಾಗೂ ವಿವಿಧ-ಸಂಘಸಂಸ್ಥೆ ಪದಾಧಿಕಾರಿಗಳು ಕಾಲ್ನಡಿಗೆ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಭಗವತಿ ಹರೀಶ್, ಉಪಾಧ್ಯಕ್ಷ ಕವಿತಾ ರಮೇಶ್, ಪ್ರಾಂತ ರಾಯಬಾರಿ ವೆಂಕಟೇಶ್, ಸಹಕಾರ್ಯದರ್ಶಿ ರತ್ನಾಕರ್, ಮುಖಂಡರಾದ ಡಾ|| ಜೆ.ಪಿ.ಕೃಷ್ಣೇಗೌಡ, ಜಗದೀಶ್, ಮೆಡಿಕಲ್ ಕಾಲೇಜು ಡೀನ್ ಶ್ರೀನಿವಾಸ್‍ದೇಶಪಾಂಡೆ, ಎನ್‍ಸಿಓ ಕೋ-ಆರ್ಡಿನೇ ಟರ್ ಡಾ. ಮಹಾಂತೇಶ್ ಪೂಜಾರ್, ಜಿಲ್ಲಾ ಡೇಟಾ ಮ್ಯಾನೇಜರ್ ರೆಹಮತ್‍ಉಲ್ಲಾಖಾನ್, ಡಾ|| ಶುಭಾ ಶ್, ಬಿಹೆಚ್ ಇಓ ಲಲಿತ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *