October 7, 2026
;
5kls1

 

 

ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಸಮಾಜದ ಹಿರಿಯ ಮಾತೆಯರಿಗೆ ಸೀರೆ ವಿತರಿಸುವಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಹಿರಿಯ ಮಹಿಳೆಯರು ಭಾಗವಹಿಸಿ ಸೀರೆಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಳಸ ಕೃಷಿ ಪತ್ತಿನ ಸಹಕಾರ ಸಂಗದಅಧ್ಯಕ್ಷಜಿ.ಕೆ. ಮಂಜಪ್ಪಯ್ಯ, ಹಿರಿಯ ಮಹಿಳೆಯರನ್ನು ಗೌರವಿಸುವ ಈ ಕಾರ್ಯಅತ್ಯಂತಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಹಿರಿಯರಅನುಭವ, ಮಾರ್ಗದರ್ಶನ ಹಾಗೂ ಆಶೀರ್ವಾದಕ್ಕೆ ವಿಶೇಷ ಸ್ಥಾನವಿದೆ. ಅವರಿಗೆಗೌರವ ನೀಡುವಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ಮಾನವೀಯತೆಯನ್ನು ಬೆಳೆಸುತ್ತವೆ. ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಪ್ರತಿವರ್ಷಇಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷೆ ಕಿರಣ ಬ್ರಹ್ಮದೇವ್ ಮಾತನಾಡಿ, ಹಿರಿಯ ಮಾತೆಯರು ನಮ್ಮಕುಟುಂಬ ಹಾಗೂ ಸಮಾಜದಅಮೂಲ್ಯ ಆಸ್ತಿ. ಅವರುತಮ್ಮಜೀವನವನ್ನುಕುಟುಂಬದ ಒಳಿತಿಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತಹ ಹಿರಿಯ ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರಕರ್ತವ್ಯ. ಪ್ರತಿವರ್ಷ ಸೀರೆ ವಿತರಿಸುವ ಮೂಲಕ ಅವರೊಂದಿಗೆ ಸಂತೋಷ ಹಂಚಿಕೊಳ್ಳುತ್ತಿರುವುದು ನಮಗೆ ತೃಪ್ತಿ ನೀಡುತ್ತದೆ. ಮುಂದಿನ ವರ್ಷಗಳಲ್ಲಿಯೂ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗುವುದುಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿವೈದ್ಯರಾದ ಡಾ. ಕಾರ್ತಿಕ್ ಶೆಟ್ಟಿ, ಮಂಡಳಿಯ ಸ್ಥಾಪಕ ಸದಸ್ಯೆ ಚಂಪಾ ಎಂ. ರಾವ್, ಕಾರ್ಯದರ್ಶಿ ಆಶಾ ಗುರುಶೇಟ್, ಖಜಾಂಚಿಕಲ್ಪನಾಅಜಿತ್, ಮಂಡಳಿಯ ನಿರ್ದೇಶಕರಾದ ಶೋಭಾ ದೇಸಾಯಿ, ಜಾನಕಿ ಸುಂದರೇಶ್, ಮೇನಕಾ ಪ್ರಸನ್ನ, ಫಾತಿಮಾ ರೆಹಮಾನ್, ಉಷಾಕುಮಾರ್, ಅನ್ನಪೂರ್ಣ ವೆಂಕಟೇಶ್, ಮನೋರಾಧಿನಿ ಧರಣೇಂದ್ರಮತ್ತು ಮಂಡಳಿಯ ಸದಸ್ಯೆಯರು ಕಾರ್ಯಕ್ರಮದಲ್ಲಿಇದ್ದರು.

 

 

Leave a Reply

Your email address will not be published. Required fields are marked *