October 13, 2026
;
suddi-2 (2)

 

 

ಕ್ರೀಡಾಕೂಟಗಳು ಶರೀರವನ್ನು ಸದೃಢ, ಆರೋಗ್ಯ ಹಾಗೂ ಮಾನಸಿಕವಾ ಗಿ ಗಟ್ಟಿಗೊಳಿಸಲು ಸಾಧನ. ದೈನಂದಿನ ಬದುಕಿನಲ್ಲಿ ಮನುಷ್ಯ ಕೆಲವು ಸಮಯವನ್ನು ಕ್ರೀಡಾಕೂಟಕ್ಕೆ ಮೀ ಲಿಡಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಚಿಕ್ಕಮಗಳೂರು  ನಗರದ ಜಿಲ್ಲಾ ಸುಭಾಶ್‍ಚಂದ್ರ ಆಟದ ಮೈದಾನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತ ರ ಜಿಲ್ಲಾ ಸಂಘದಿಂದ ಪ್ರಪ್ರಥಮ ಬಾರಿಗೆ ಸರ್ಕಾರಿ ನೌಕರರಿಗಾಗಿ ಆಯೋಜಿಸಿದ್ಧ ಕ್ರಿಕೇಟ್ ಪಂದ್ಯಾವಳಿ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು ಹಾಗೂ ಪತ್ರಕರ್ತರು ಒತ್ತಡದ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಾ ಜಮುಖಿ ಕಾರ್ಯನಿರ್ವಹಿಸುವ ಜೊತೆಗೆ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಲು ಆಸಕ್ತಿವಿರುವ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಧುನಿಕ ಜಗತ್ತಿನಲ್ಲಿ ಮನುಷ್ಯ ವೃತ್ತಿ, ಸಂಸಾರ, ಉದ್ಯಮ ಹಾಗೂ ಇನ್ನಿತರೆ ಕಾರ್ಯಒತ್ತಡದಿಂದ ಬ ಳಲುತ್ತಿದ್ದಾನೆ. ದೈನಂದಿನ ಆರೋಗ್ಯ ಚಟುವಟಿಕೆಗಳಿಗೂ ಒತ್ತು ನೀಡುತ್ತಿಲ್ಲ. ಈ ದಿಸೆಯಲ್ಲಿ ಆರೋಗ್ಯವನ್ನು ಹೆಚ್ಚು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಹೀಗಾಗಿ ದಿನದ ಕನಿಷ್ಟ ಕೆಲ ಗಂಟೆಗಳನ್ನು ದೇಹ ದಂಡಿಸುವ ವ್ಯಾಯಮಕ್ಕೆ ಸಮಯ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಭಂವರ್‍ಸಿಂಗ್ ಮೀನಾ ಮಾತನಾಡಿ ಪತ್ರಕರ್ತರ ಮಿತ್ರರ ಸಹಯೋಗದಲ್ಲಿ ಸರ್ಕಾರಿ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟ ತುಂಬಾ ಯಶಸ್ವಿಯಾಗಲಿ. ಎರಡು ದಿನದ ಕ್ರೀಡಾಕೂಟದಲ್ಲಿ ಮನಸ್ಥಾಪವಿಲ್ಲದೇ ಸಂತೋಷದಿಂದ ಕಳೆಯಬೇಕು. ಆಗ ಮಾತ್ರ ಈ ಕ್ರೀಡಾಕೂಟ ಸಂಪೂರ್ಣ ಯಶಸ್ವಿ ಗೊಳ್ಳಲು ಪೂರಕ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಮಾತನಾಡಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪತ್ರಿಕೋದ್ಯಮ ವೃತ್ತಿದಾರರಲ್ಲಿ ಸ್ನೇಹಸಮ್ಮೀಲನ ಮೂಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಏರ್ಪಡಿಸಿದೆ. ಭಾಗವಹಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಕ್ರೀಡಾಸ್ಪೂರ್ತಿಯ ಅಪರೂಪದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಅನಿಲ್‍ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಮಲ್ಲೇಶ್, ರಾಜ್ಯ ಸಮಿತಿ ಸದಸ್ಯ ವಿಜಯ್‍ಕುಮಾರ್, ಜಿಲ್ಲಾ ಕಾರ್ಯದರ್ಶಿ ಚೇತನ್‍ಬೇಲೇನಹಳ್ಳಿ, ಖಜಾಂಚಿ ಅಕ್ಷಯ್, ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಎ.ಎನ್.ಮೂರ್ತಿ, ನಗರಸಭೆ ಮಾಜಿ ಸದಸ್ಯ ದಿನೇಶ್ ಸೇರಿ ದಂತೆ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *