October 14, 2026
;
suddi-4(B)

 

 

ರೈತರ ಜೀವನಾಡಿ ಅರಸರ ನಾಲೆ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ನೇತೃ ತ್ವದಲ್ಲಿ ನೂರಾರು ರೈತ ಸಮೂಹ ಮಂಗಳವಾರ ಚಿಕ್ಕಮಗಳೂರು ನಗರದ ಸಣ್ಣ ನೀರಾವರಿ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಮಳಲೂರು ಗ್ರಾಮದಿಂದ ಬೈಕ್, ಟ್ರ್ಯಾಕ್ಟರ್,  ವಾಹನಗಳ ಮೂಲಕ ರೈತರು ಕದ್ರಿಮಿ ದ್ರಿ, ರಾಂಪುರ, ಗವನಹಳ್ಳಿ, ಐ.ಜಿ.ರಸ್ತೆ ಮಾರ್ಗವಾಗಿ ಮಧುವನ ಲೇಔಟ್‍ನಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಚೇರಿ ಸಮೀಪ ಸಮಾವೇಶಗೊಂಡು ಅವೈಜ್ಞಾನಿಕ ಕಾಮಗಾರಿಗೆ ಕಾರಣರಾದ ಎಇಇ ಹಾಗೂ ರೈತರಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ರೈತ ಸಂಘ ಮತ್ತು ಹಸಿರುಸೇನೆ ಸದಸ್ಯ ವೈ.ಸಿ.ಸುನೀಲ್‍ಕುಮಾರ್ ಮಾತನಾಡಿ ಸಾವಿರಾರು ಕುಟುಂಬ ಗಳಿಗೆ ಅರಸರ ನಾಲೆ ಜೀವನಾಡಿಯಾಗಿದೆ. ರಾಜ-ಮಹಾರಾಜರ ಕಾಲದಲ್ಲಿ ನಿರ್ಮಿಸಿದ ನಾಲೆಯನ್ನು ಇದುವರೆಗೂ ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಹಾಳು ಬೀಳುವಂತೆ ಸಣ್ಣ ನೀರಾವರಿ ಇಲಾಖೆ ಮಾಡಿದೆ ಎಂದು ದೂರಿದರು.

ಈ ನಾಲೆಯನ್ನು ನಂಬಿಕೊಂಡಿರುವ ಅನೇಕ ರೈತ ಕುಟುಂಬಗಳು ನೀರಿಗಾಗಿ ಕಾದುಕುಳಿತಿವೆ. ಬೆಳೆದಿ ರುವ ಬೆಳೆÀಗಳು ಬೇಸಿಗೆ ಬೇಗೆಯಲ್ಲಿ ನೆಲಕಚ್ಚುತ್ತಿದೆ. ಸಾಲಸೋಲ ಮಾಡಿಕೊಂಡ ರೈತರು ಉತ್ತ ಮ ಬೆಳೆಯಿ ಲ್ಲದ ಕಾರಣ ಕುಟುಂಬವು ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ದೂಡಿದ್ದು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಾಗೂ ಇತರೆ ಸಾಲಗಳನ್ನು ತೀರಿಸಲಾಗದೇ ಕಂಗಾಲಾಗಿದ್ದಾರೆ ಎಂದರು.

ಅನೇಕ ವರ್ಷಗಳಿಂದ ಜಾವಣಿಗೆ ನಾಡಿನ ರೈತಾಪಿ ವರ್ಗ ನಾಲೆ ಕಾಮಗಾರಿ ಅವೈಜ್ಞಾನಿಕ ಸಂಬಂಧ ಅನೇಕ ದೂರುಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಗಮನ ಕ್ಕೂ ತಂದರೂ ಗಮನಹರಿಸುತ್ತಿಲ್ಲ. ಇಲ್ಲಿನ ರೈತರು ಬದುಕು ಮೂರಾಬಟ್ಟೆಯಾಗಿದೆ. ಜಾನುವಾರುಗಳು ಮೇವಿನ ಕೊರತೆಯಿಂದ ಹಸುನೀಗುತ್ತಿವೆ ಎಂದು ಹೇಳಿದರು.

ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಕೂಡಲೇ ಹೆಚ್ಚುವರಿ ಇಟಾಚಿ, ಜೆಸಿಬಿ ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ನಿಯೋಜಿಸಿ ತುರ್ತು ಕಾಮಗಾರಿಯನ್ನು ವೇಗಗೊಳಿಸಬೇಕು ಮತ್ತು ಗುಣಮಟ್ಟ ಕಾಯ್ದುಕೊಳ್ಳಬೇಕು. ಪ್ರಸ್ತುತ ಕೈಗೊಂಡಿರುವ ಕಾಮಗಾರಿಯನ್ನು ಅಂತಿಮ ನಾಲೆಯವರೆಗೂ ಪೂರ್ಣಗೊ ಳಿಸಿ, ಕಟ್ಟಕಡೆಯ ಕೆರೆಯವರೆಗೂ ರೈತನ ಜಮೀನಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ನಾಲೆಯಲ್ಲಿರುವ ಹೂಳು, ಗಿಡಮರಗಳು, ಪೊದೆಗಳು, ಕಸ ಮಣ್ಣು ಮತ್ತು ಇತರೆ ಅಚಡಣೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ನಾಲೆಯ ಸರ್ವೀಸ್ ರಸ್ತೆ ಮತ್ತು ಸಾರ್ವಜನಿಕರು ಓಡಾಡುವ ಮಾರ್ಗದಲ್ಲಿ ತಮ್ಮ ತುರ್ತು ಕಾಮಗಾರಿಯಿಂದ ಉಂಟಾಗಿರುವ ಅಡಚಣೆಗಳನ್ನು ತಕ್ಷಣ ತೆರವುಗೊಳಿಸಿ ಸು ಗಮ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದ ಸದಸ್ಯ ಡಿ.ರಾಮೇಗೌಡ ಮಾತನಾಡಿ ನಾಲೆಯ ಲ್ಲಿರುವ ಟ್ಯೂಬ್ ಮತ್ತು ಸ್ಲೂಯಿಸ್ ಹಾಗೂ ಇತರ ಸೋರಿಕೆಗಳನ್ನು ತಕ್ಷಣ ಸರಿಪಡಿಸಿ, ಲಭ್ಯವಿರುವ ನೀರು ಮಧ್ಯದಲ್ಲೇ ವ್ಯರ್ಥವಾಗದಂತೆ ಅಂತಿಮ ಹಂತಕ್ಕೆ ಹರಿಯುವಂತೆ ಮಾಡಬೇಕು ಎಂದು ಹೇಳಿದರು.

ಹಾದಿಹಳ್ಳಿ ಗ್ರಾಮದಲ್ಲಿ ರೈಲ್ವೆ ಇಲಾಖೆಯವರು ನಾಲೆಯ ಮೂಲ ಸ್ವರೂಪದ ದಿಕ್ಕನ್ನು ಬದಲಾಯಿಸಿ ಸುಮಾರು 400 ಅಡಿಗಳಷ್ಟು ದೂರ ಕಿರಿದಾದ ಪೈಪ್ ಅಳವಡಿಸಿ, ನಾಲೆಯನ್ನು ಮುಚ್ಚಿರುವ ಅವೈಜ್ಞಾನಿಕ ಕಾಮಗಾರಿಯ ವ್ಯವಸ್ಥೆಯನ್ನು ತಕ್ಷಣ ತೆರವುಗೊಳಿಸಿ ನೀರು ಅಂತಿಮ ನಾಲೆಯವರೆಗೂ ಹರಿಯುವಂತೆ ವೈಜ್ಞಾನಿಕ ಹರಿವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಕೆ.ಕೆ.ಕೃಷ್ಣೇಗೌಡ, ಪರ್ವತೇಗೌಡ, ಡಿ.ಕೆ.ಕಾಂ ತರಾಜು, ನಜ್ಮಾಆಲಿ, ಎಂ.ಸಿ.ಗಣೇಶಗೌಡ, ಮಾಲುಂಡಪ್ಪ, ಚಂದ್ರಶೇಖರ್ ಅರಸರ ನಾಲೆಗೆ ಹೊಂದಿರುವ ರೈತಾಪಿ ವರ್ಗ ದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *