October 14, 2026
;
jenu

 

 

2026-27 ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಕೊಡಗು ಜಿಲ್ಲೆಯ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ 18 ವರ್ಷದಿಂದ 35 ವರ್ಷಗಳ ವಯೋಮಿತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ವರ್ಗದ 18 ವರ್ಷದಿಂದ 30 ವರ್ಷಗಳ ವಯೋಮಿತಿ ಹೊಂದಿರುವ ಅರ್ಹ ರೈತರ ಮಕ್ಕಳಿಗೆ 2026  ನವೆಂಬರ್ 04 ರಿಂದ 2027 ಫೆಬ್ರವರಿ 03 ರವರೆಗೆ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅರ್ಹ ರೈತ ಮಕ್ಕಳನ್ನು ತರಬೇತಿ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಅಕ್ಟೋಬರ್ 15 ರಿಂದ 28 ರವರೆಗೆ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ), , ಬೋಳರಾಮೇಶ್ವರ ದೇವಸ್ಥಾನದ ಹತ್ತಿರ, ಚಿಕ್ಕಮಗಳೂರು ಇಲ್ಲಿ ಪಡೆದುಕೊಳ್ಳಬಹುದು ಅಥವಾ ಇಲಾಖಾ ವೆಬ್‍ಸೈಟ್ (https://horticulturedir.karnataka.gov.in) ನಲ್ಲಿ.. ಡೌನ್ ಲೋಡ್ ಮಾಡಿಕೊಳ್ಳಬಹುದು, ಅರ್ಜಿ ಶುಲ್ಕದ ಬಾಪ್ತು, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.20/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.10/-ಗಳ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್   ಅಥವಾ ಡಿಮಾಂಡ್ ಡ್ರಾಫ್ಟ್ (ಡಿಡಿ) ಅನ್ನು ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ), ಚಿಕ್ಕಮಗಳೂರು ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.

ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿರುತ್ತದೆ ಹಾಗೂ ಸಂದರ್ಶನ ಮಾಡಿ ಆಯ್ಕೆ ಪಟ್ಟಿಯನ್ನು ಅಕ್ಟೋಬರ್ 31 ರಂದು ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ (ಜಿ.ಪಂ), ಚಿಕ್ಕಮಗಳೂರು ಅಥವಾ ಸಂಬಂಧಿಸಿದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

 

 

Leave a Reply

Your email address will not be published. Required fields are marked *