October 17, 2026
;
suddi7

 

 

ಜನಪ್ರತಿನಿಧಿಗಳು, ಅಧಿಕಾರಿ ಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿ ಗಳಿಂದ ಕನ್ನಡ ಭಾಷೆಯನ್ನು ರಕ್ಷಣೆ ಮಾಡುವ ಪರಿಸ್ಥಿತಿ ಅತ್ಯಂತ ನೋವಿಕರ ಸಂಗತಿ ಎಂದು ಕರ್ನಾಟಕ ವಿಕಾಸ ರಂಗ ಅಧ್ಯಕ್ಷ ವ.ಚ.ಚನ್ನೇಗೌಡ ವಿಷಾಧ ವ್ಯಕ್ತಪಡಿಸಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ವಿಕಾಸ ರಂಗ ಜಿಲ್ಲಾ ಘಟಕ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ಧ ಕನ್ನಡ ನಾಡು-ನುಡಿ ವಿಚಾರ ಸಂಕಿರಣ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವೇರಿ ನದಿಯಿಂದ ಗೋದಾವರಿವರೆಗೂ ಕನ್ನಡ ನಾಡು ಹಬ್ಬಿದೆ. ಇತಿಹಾಸದ ಪುಟ ತೆರೆದರೆ ಕನ್ನಡಿ ಗರ ಸಾಮ್ರಾಜ್ಯ ವಿಶಾಲವಾದದು. ಏಳು ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ, ಸುಮಾರು ಎರ ಡು ಕೋಟಿಯಷ್ಟು ಮಂದಿ ಹೊರರಾಜ್ಯದಲ್ಲೆ ನೆಲೆಸಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರ, ಬೆಳಗಾವಿ ತಮ್ಮದೆಂ ದು ಕೋರ್ಟ್ ಮೆಟ್ಟಿಲೇರಿದೆ ಎಂದು ಹೇಳಿದರು.

ಬಹುರಾಷ್ಟೀಯ ಕಂಪನಿಗಳಿಗೆ ರಾಜ್ಯಸರ್ಕಾರ ಕೆಂಪುಹಾಸಿಗೆ ಹಾಕಿ, ರಿಯಾಯಿತಿ ದರದಲ್ಲಿ ಎಲ್ಲವನ್ನು ಕೊಟ್ಟಿದೆ. ಆದರೆ ಉದ್ಯೋಗ ಮಾತ್ರ ಕನ್ನಡಿಗರ ಪಾಲಿಗೆ ಇಲ್ಲದಂತಾಗಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸು ವ ಸಂಬಂಧ ಸರ್ಕಾರಗಳು ಕೊಡಲಿಲ್ಲ. ಆದರೆ ಸರ್ಕಾರವನ್ನೇ ಕಂಪನಿಗಳು ಹಿಡಿತದಲ್ಲಿಟ್ಟುಕೊಂಡಿವೆ ಎಂ ದರು.

ಕರ್ನಾಟಕ ಮತ್ತು ದೇಶದ ವಾರಸುದಾರರು ಇಂದಿನ ಯುವಪೀಳಿಗೆ. ಭಾರತದಲ್ಲೇ ಕನ್ನಡ ಭಾಷೆಗೆ ಮೊದಲ ನಿಘಂಟು ಬಂದಿದೆ. ದೀರ್ಘ ಇತಿಹಾಸವುಳ್ಳ ಭಾಷೆ ಇದಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಆಂಗ್ಲಭಾ ಷೆ ಅವಶ್ಯಕವಿದ್ದರೂ, ಮಾತೃಭಾಷೆಯನ್ನು ಮರೆಯದೇ ಉಳಿಸುವ ಜವಾಬ್ದಾರಿ ನಮ್ಮದು ಎಂದರು.

ಕರ್ನಾಟಕ ವಿಕಾಸ ರಂಗ ಜಿಲ್ಲಾ ಅಧ್ಯಕ್ಷ ಕುಂದೂರು ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ದಿನಮಾನದಲ್ಲಿ ಕನ್ನಡ ಭಾಷೆ ಆತಂಕ ಸ್ಥಿತಿ ಎದುರಿಸುತ್ತಿದೆ. ಪ್ರತಿ ಭಾರಿ ಜನಗಣತಿ ನಡೆಸಿದ ಸಂದರ್ಭಗಳಲ್ಲಿ ಭಾಷೆ ಬಳಸುವ ಸಂಖ್ಯೆ ಕ್ಷೀಣಿಸುತ್ತಿದ್ದು ಈ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಭಾಷೆಯನ್ನು ಹುಡುಕಬೇ ಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನಗಳು ಎಲ್ಲಾ ಕ್ಷೇತ್ರದಲ್ಲೂ ಆವರಿಸಿದೆ. ಇತ್ತೀಚಿನ ಎಐ ತಂತ್ರಜ್ಞಾ ನ ಭಾಷೆ ಉನ್ನತೀಕರಿಸುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳಿವೆ. ಕಂಪನಿಗಳಲ್ಲಿ ಕನ್ನಡಿ ಗರ ಬದುಕು, ಜೀವನ, ವಸ್ತ್ರವಿನ್ಯಾಸದ ಮೂಲ ಸಂಪ್ರದಾಯ ಒತ್ತೆಯಿಟ್ಟು, ವಿದೇಶಿ ಸಂಸ್ಕಾರ ಅನುಸರಿಸುವ ಸ್ಥಿತಿಯಿದೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ ಅಧಿಕಾರ ಮತ್ತು ಅವಕಾಶ ಲಭಿಸಿದಾ ಗ ನಾಡಿನ ಸತ್ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು. ಕನ್ನಡ ಬೆಳೆಸುವ ಮನಸ್ಸು ಚಿಗುರೊಡೆದಾಗ ಮಾತ್ರ ಕನ್ನಡ ಭಾಷಾಭಿಮಾನ ಎಂಬ ಸಸಿ, ಹೆಮ್ಮೆರವಾಗಿ ಬೆಳೆಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ನಂಜೇಶ್ ಬೆಣ್ಣೂರು ವಹಿಸಿದ್ದರು. ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ  ಕೆ.ಆರ್.ಅನಿಲ್‍ಕುಮಾರ್, ಸಿಪಿಐ ಪಕ್ಷದ ಹಿರಿಯ ಮುಖಂಡ ಬಿ.ಅಮ್ಜದ್, ಒಕ್ಕಲಿಗರ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಮಾಡ್ಲ ಪ್ರ ಕಾಶ್, ಪತ್ರಕರ್ತ ಹಾರ್ಜಿಹಳ್ಳಿ ನಾಗರಾಜ್ ಉಪಸ್ಥಿತರಿದ್ದರು. ವಿರೂಪಾಕ್ಷ ನಿರೂಪಿಸಿದರು. ಚಂದ್ರಯ್ಯ ಜಾ ವಳಿ ಸ್ವಾಗತಿಸಿದರು. ಮಲ್ಲಿಗೆ ಸುಧೀರ್ ಪ್ರಾರ್ಥಿಸಿದರು. ಪ್ರದೀಪ್ ಕುಂದೂರು ವಂದಿಸಿದರು.

 

 

Leave a Reply

Your email address will not be published. Required fields are marked *