October 17, 2026
;
SANTHA 1

 

 

ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ 1978 ರಲ್ಲಿ ನಿರ್ಮಾಣವಾದ ಸಂತ ಪೇತ್ರರ ಚರ್ಚ್ 48ನೇ ವಾರ್ಷಿಕ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಚರ್ಚ್ ಕಟ್ಟಡವನ್ನು ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯುತ್ ದೀಪಗಳಿಂದಲೂ ಪುಷ್ಪಗಳಿಂದಲೂ ವಿಶೇಷವಾಗಿ ಅಲಂಕರಿಸಲಾಗಿತ್ತು.

ಹಬ್ಬದ ಬಲಿ ಪೂಜೆಯಲ್ಲಿ ಸುಂಡೆಕೆರೆ ಧರ್ಮ ಕೇಂದ್ರದ ಗುರುಗಳಾದ ಅನಿಲ್ ಲೋಬೋ ಮನುಷ್ಯನ ಜೀವನದಲ್ಲಿ ಒಳ್ಳೆಯದಕ್ಕಿಂತಲೂ ಶ್ರೇಷ್ಠವಾದುದರ ಆಯ್ಕೆ ನಮ್ಮದಾಗಬೇಕು ಸಂತ ಪೇತ್ರರು ಪ್ರಭು ಯೇಸುಕ್ರಿಸ್ತರು ಕರೆ ನೀಡಿದಾಗ ತನ್ನ ವೃತ್ತಿಯನ್ನು ತ್ಯಜಿಸಿ,ವಿಶ್ವಾಸವನ್ನು ಇಟ್ಟು ಅವರನ್ನು ಹಿಂಬಾಲಿಸಿದರು ಬಳಿಕ ತಪ್ಪು ಮಾಡಿದಾಗ ಅಹಂಕಾರ ಬದಿಗಿಟ್ಟು, ಪಶ್ಚಾತಾಪ ಪಟ್ಟರು, ಲೌಕಿಕ ಜೀವನಕ್ಕಿಂತ ಶಾಶ್ವತ ದೇವರ ಸಾನಿಧ್ಯವನ್ನು ಬಯಸಿದರು ಹಾಗಾಗಿಯೇ ಅವರು ನಮಗೆಲ್ಲರಿಗೂ ಆದರ್ಶ ಪುರುಷರು ಎಂದು ಸಂದೇಶವಿತ್ತರು.

ಫಾ.ಬಾಲ್ರಾಜ್ ರವರ 25ನೇ ವರ್ಷದ ಯಾಜಕ ದೀಕ್ಷೆಯ ಬೆಳ್ಳಿ ಮಹೋತ್ಸವ ಶುಭಾಶಯವನ್ನು ಕೋರಲಾಯಿತು.

ಧರ್ಮ ಕೇಂದ್ರ ಗುರು  ಫಾ.ಪೀಟರ್ ಬ್ರಾಂಕ್ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ ಗಳು ನೆರವೇರಿತು.

ಗುರು ಶ್ರೇಷ್ಠ ಫಾ. ಎಲಿಯಾಸ್ ಸಿಕ್ವೇರಾ, ವಿವಿಧ ಧರ್ಮ ಕೇಂದ್ರಗಳಿಂದ ಫಾ.ಲ್ಯಾನ್ಸಿ ಪಿಂಟೋ, ಧಾರ್ಮಿಕ ಸಭೆಗಳ ಮುಖ್ಯಸ್ಥರಾದ ಫಾ. ಜೋಸೆಫ್ ಪಿಂಟೋ,ಫಾ. ಹೆನ್ರಿ ಮಾಡ್ತಾ,ಫಾ.ಪೌಲ್ ಡಿಸೋಜ,

ಮೂಡಿಗೆರೆ ಸಂತ ಅಂತೋಣಿಯವರ ಧರ್ಮ ಕೇಂದ್ರ ಗುರು ಸುನಿಲ್ ರೋಡ್ರಿಗಸ್,

ಪಾಲನಾ ಸಮಿತಿ, ಆರ್ಥಿಕ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಬ್ಬದ ನೇತೃತ್ವ ವಹಿಸಿದ್ದರು.

ಕೋಗೋಡು,ಕಸ್ಕೆ ಬೈಲು, ಬೆಟ್ಟದ ಮನೆ, ಜನ್ನಾಪುರ, ಗೋಣಿಬೀಡು,ಉಗೇಹಳ್ಳಿ, ಕಣಚೂರು, ಗ್ರಾಮಗಳಿಂದ ಕ್ರೈಸ್ತ ಭಕ್ತಾದಿಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *