October 25, 2026
;
tholuru

 

 

ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ತೋಳೂರು ಗುಡ್ಡದ ನಿವೇಶನ ರಹಿತರ ನಾಲ್ಕನೇ ದಿನ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಶನಿವಾರ ತಹಸಿಲ್ದಾರ್ ರೇಷ್ಮಾ ಭೇಟಿ ನೀಡಿದರು.

ಬಳಿಕ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದ ಅವರು ಈಗಾಗಲೇ 167 ರ ಸರ್ವೇ ನಂಬರ್ ನ ಜಮೀನಿನಲ್ಲಿ ಆಶ್ರಯ ನಿವೇಶನಕ್ಕೆಂದು ಮೀಸಲಿಟ್ಟಿರುವ ಜಮೀನಿನ ಜಂಟಿ ಸರ್ವೆಯನ್ನು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಶೀಘ್ರ ಪೂರ್ಣಗೊಳಿಸುವದಾಗಿ ಜನರಿಗೆ ತಿಳಿಸಿದ ಅವರು ಗುಡಿಸಲು ಹಾಕಿರುವ ಸ್ಥಳದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವ ಕಾರಣ ಮಳೆ ಗಾಳಿ ಪ್ರಾಕೃತಿಕ ವಿಕೋಪದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಗುಡಿಸಲನ್ನು ತೆರವುಗೊಳಿಸಿ ಈ ಹಿಂದೆ ಇದ್ದ ವಾಸ ಸ್ಥಳಕ್ಕೆ ವಾಪಸ್ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರು.

ನಿವೇಶನ ಹೋರಾಟ ಸಮಿತಿಯ ಅಧ್ಯಕ್ಷ ಗುರುವಪ್ಪ, ಪದಾಧಿಕಾರಿಗಳಾದ ರಮೇಶ್, ವಿನೋದ್,ವಿಶ್ವ ಹಾರ್ಲ ಗದ್ದೆ, ಕೃಪಾಕ್ಷ ಕೋಟ್ಯಾನ್, ರಜಾಕ್, ತಹಶೀಲ್ದಾರ್ ರೇಷ್ಮಾ ರಬಳಿ ಜಮೀನಿನಲ್ಲಿ ಗುಡಿಸಲು ಹಾಕಿರುವವರನ್ನು ತೆರವುಗೊಳಿಸಲು ಸಾಧ್ಯವಿಲ್ಲ ಹಲವಾರು ದಶಕಗಳಿಂದ ನಿವೇಶನಕ್ಕಾಗಿ ಗುಡಿಸಲು ಹಾಕಿರುವವರಿಗೆ ಯಾವುದೇ ರೀತಿಯ ಹಕ್ಕು ಪತ್ರ ದಾಖಲಾತಿಗಳು ದೊರಕಿಲ್ಲ, ಮತ್ತು ಈ ಜಮೀನಿನಲ್ಲಿ ಒತ್ತುವರಿ ಮಾಡಿ ಕಾಡು ಗಿಡ ಮರಗಳನ್ನು ಕಟಾವು ಮಾಡಿ ಕಾಫಿ ಗಿಡಗಳನ್ನು ನೆಟ್ಟವರ ಮಾಹಿತಿ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಏಕೆ ತಿಳಿದಿಲ್ಲ, ಅವರ ಆಂತರಿಕ ಸಹಕಾರವಿಲ್ಲದೆ ಹೇಗೆ ಅರಣ್ಯ ಇಲಾಖೆಯ ಜಮೀನನ್ನು ನೆಲಸಮ ಮಾಡಿ ತೋಟ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಕರ್ತವ್ಯ ನಿರ್ಲಕ್ಷ ತೋರಿದ ಅರಣ್ಯ ಅಧಿಕಾರಿ ಸಿಬ್ಬಂದಿಗಳನ್ನು ಕೂಡ ಸೂಕ್ತ ತನಿಖೆಗೆ ಒಳಪಡಿಸಬೇಕು. ಬಂದಿರುವಂತಹ ಅಧಿಕಾರಿಗಳು ಸೂಕ್ತ ಮತ್ತು ಸರಿಯಾದ ಭರವಸೆಯನ್ನು ನೀಡಿದರೆ ಮಾತ್ರ ನಾವು ಇಲ್ಲಿಂದ ತೆರಳಲು ಸಾಧ್ಯ ಸಂಬಂಧ ಪಟ್ಟ ಸ್ಥಳಕ್ಕೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪ ವಿಭಾಗ ಸಂರಕ್ಷಣಾಧಿಕಾರಿಗಳು ಭೇಟಿ ನೀಡಿ ನಿವೇಶನ ರಹಿತರ ನೋವನ್ನು ಆಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯೆ ನೀಡಿದ ತಹಸಿಲ್ದಾರ್ ರೇಷ್ಮಾ ನಮ್ಮ ಕರ್ತವ್ಯದ ವ್ಯಾಪ್ತಿಯಲ್ಲಿ ನಾವು ಜನರ ನಿವೇಶನದ ಬೇಡಿಕೆಯ ಕುರಿತು ವರದಿಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಬಹುದು. ಕೆ ಡಿ ಪಿ  ಸಭೆಯಲ್ಲಿಯೂ ನಿವೇಶನ ರಹಿತರ ಪರವಾಗಿ ಮೇಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿ ರಾಜ್ಯ ಸರ್ಕಾರ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಗೆ 50,000 ನಿವೇಶನ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಲು ಸೂಚಿಸಿದ್ದು, ಆ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್, ವಲಯ ಅರಣ್ಯ ಅಧಿಕಾರಿ ಪ್ರಮೋದ್, ಉಪವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು,ಗ್ರಾಮ ಲೆಕ್ಕಿಗ ಸಂದೀಪ್, ಭೂತನ ಕಾಡು ಹಾರ್ಲಗದ್ದೆ ತೋಳೂರು ಭಾಗಗಳಲ್ಲಿ 94 ಸಿ ಅರ್ಜಿಯ ಮೂಲಕ ಶೇಕಡ 90ಕ್ಕಿಂತಲೂ ಅಧಿಕ ಮಂದಿಗೆ ಹಕ್ಕುಪತ್ರ ದೊರೆತಿಲ್ಲ ಈ ಕುರಿತು ತಹಶೀಲ್ದಾರ್ ರವರು ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಒತ್ತಾಯಿಸಿದರು.

ಬಳಿಕ ತಹಶೀಲ್ದಾರ್ ರೇಷ್ಮಾ ರವರಿಗೆ ನಿವೇಶನ ರಹಿತರು ಸರ್ಕಾರಕ್ಕೆ ನಿವೇಶನ ಮಂಜೂರಾತಿ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು.

 

 

Leave a Reply

Your email address will not be published. Required fields are marked *