October 26, 2026
;
hagga

 

 

ರಾಜ್ಯದಲ್ಲಿ ಇತ್ತೀಚೆಗೆ ಗಾಳಿಪಟಕ್ಕೆ ಕಟ್ಟಿದ್ದ ಮಾಂಜಾ ದಾರ ಸಿಲುಕಿ ಸಾವುಗಳು ಸಂಭವಿಸುತ್ತಿರುವ ನಡುವೆ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ನಗರ ಸಮೀಪ ನಡೆದಿದೆ.

ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಸಿಲುಕಿ ಸ್ಕೂಟರ್ ಸವಾರರೋರ್ವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಟ್ರಾಕ್ಟರ್ ಗೆ ಟಿಂಬರ್ ಮರಗಳನ್ನ ಎಳೆದು ಲೋಡ್ ಮಾಡಲು ಕಟ್ಟಲಾಗಿದ್ದ ಹಗ್ಗ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್ ಸವಾರನಿಗೆ ತಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ನಗರದ ತೇಗೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹೆಂಡತಿ ಜೊತೆ ಸ್ಕೂಟರ್ ನಲ್ಲಿ ಬರುವಾಗ ಹಗ್ಗ ಸಿಲುಕಿ ಮಹಮ್ಮದ್ ಗೌಸ್ ಖಾನ್ (36 ) ಎಂಬುವವರು ಸಾವನ್ನಪ್ಪಿದ್ದಾರೆ.

ಮೃತ ಮಹಮ್ಮದ್ ಗೌಸ್ ಖಾನ್ ಚಿಕ್ಕಮಗಳೂರು ನಗರದ ಸೈಯದ್ ಗಲ್ಲಿ ನಿವಾಸಿ ಎಂದು ತಿಳಿದುಬಂದಿದೆ.

ತೇಗೂರು ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ.

ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *