November 18, 2026
;
vimukthi 3

 

 

ದಿನಾಂಕ 16/11/2026 ರಂದು ವಿಮುಕ್ತಿ ಸಂಸ್ಥೆ ಬಣಕಲ್ ವತಿಯಿಂದ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭದ ಜೊತೆಗೆ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮವನ್ನು ಬೆಟ್ಟದಮನೆ ಶಾಂತಿ ನಿವಾಸದಲ್ಲಿ ನಡೆಸಲಾಯಿತು.

ವಿಮುಕ್ತಿ ಸಂಸ್ಥೆ  ವತಿಯಿಂದ ಮಹಿಳೆಯರ ಏಳಿಗೆ, ಹಾಗೂ ಮಹಿಳೆಯರು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲಿ ಎಂಬ ಉದ್ದೇಶದಿಂದ ಕಳೆದ ಆಗಸ್ಟ್ ತಿಂಗಳಲ್ಲಿ ಕಿರುಗುಂದ ಸಂಜೀವಿನಿ ಭವನದಲ್ಲಿ ಟೈಲರಿಂಗ್ ತರಬೇತಿಯನ್ನು ಪ್ರಾರಂಭಿಸಿತು, ಸುಮಾರು 30 ಆಸಕ್ತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿ 3 ತಿಂಗಳು 15 ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.  ಸಮಾರೋಪ ಸಮಾರಂಭದಲ್ಲಿ 4 ಮಹಿಳೆಯರಿಗೆ ಎಲೆಟ್ರಿಕ್ ಮಿಷಿನ್, 8 ಮಹಿಳೆಯರಿಗೆ ಮೋಟರ್ ಅಳವಡಿಸಿದ ಹೈ ಸ್ಪೀಡ್  ಮಿಷಿನ್, 12 ಮಹಿಳೆಯರಿಗೆ ಹೈ ಸ್ಪೀಡ್ ಮಿಷಿನ್ ಮತ್ತು 3 ಮಹಿಳೆಯರಿಗೆ ನಾರ್ಮಲ್ ಮಿಷಿನ್ ಅನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಯಿತು. ಜೊತೆಗೆ ಪ್ರಮಾಣ ಪತ್ರ ನೀಡಲಾಯಿತು,

ಹಾಗೆ ತರಗತಿಗೆ ತಪ್ಪದೇ ಹಾಜರಾದ 4 ಕರ್ಲಿಕಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಾಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸುಶ್ಮಿತಾ ಕೆ ಇವರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಮುಕ್ತಿ ಸಂಸ್ಥೆ ನಿರ್ದೇಶಕರಾದ ಫಾದರ್ ಅರುಣ್ ಲೋಬೋ ರವರು “ಮಹಿಳೆಯರು ತಮ್ಮ ಜೀವನದಲ್ಲಿ ಸಾಧನೆ ಮಾಡಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ತಾವು ಕಲಿತ ವಿದ್ಯೆ ಮತ್ತು ಕೌಶಲ್ಯವನ್ನು ವೃತ್ತಿಯಾಗಿ ಪರಿವರ್ತಿಸಿಕೊಂಡು ಸ್ವಾವಲಂಬಿಗಳಾಗಬೇಕು. ಉದ್ಯೋಗದ ಜೊತೆಗೆ ತಮ್ಮ ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ” ಎಂದು ಹೇಳಿದರು

ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಉದ್ಯಮಿಯಾದ ಲಾರೆನ್ಸ್ ಡಿಸೋಜ, ವಿಮುಕ್ತಿ ಸಂಸ್ಥೆ ಪೋತ್ನಳ್ ಇದರ ನಿರ್ದೇಶಕರಾದ ಫಾದರ್ ಸತೀಶ್, ಸರ್ವೋದಯ ಸೇವಾ ಸಂಘ ಬೆಟ್ಟದಮನೆ ಇದರ ನಿರ್ದೇಶಕರಾದ ಫಾದರ್ ಆರೋಕ್, ವಿಮುಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಬಣಕಲ್  ಅಧ್ಯಕ್ಷರು ಆದ ಶ್ರೀಮತಿ ಆತಿಕಾ ಭಾನು,   GPLF ಕಿರುಗುಂದ ಇದರ ಅಧ್ಯಕ್ಷರು ಶ್ರೀಮತಿ ಪ್ರೇಮ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತ ಸವಿತಾರವರು, ಪ್ರಾಸ್ತಾವಿಕವಾಗಿ ವಿಂದ್ಯಾರವರು ಮತ್ತು ನಿರೂಪಣೆಯನ್ನು ಸ್ವಾತಿಶ್ರೀಯವರು ನಡೆಸಿಕೊಟ್ಟರು.

 

 

Leave a Reply

Your email address will not be published. Required fields are marked *