November 17, 2026
;
taluk ofice mudigere

 

 

ಮೂಡಿಗೆರೆ ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪಟ್ಟಿಯ ದರಗಳನ್ನು 2026-27 ಸಾಲಿಗೆ ಪರಿಷ್ಕರಿಸುವ ಸಲುವಾಗಿ ದಿನಾಂಕ:13.11.2026 ರಂದು ಮಾನ್ಯ ತಹಶೀಲ್ದಾರ್ ಮತ್ತು ಅಧ್ಯಕ್ಷರು, ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ಮೂಡಿಗೆರೆ ಹಾಗು ಕಳಸ ತಾಲ್ಲೂಕು ರವರ ಘನಅಧ್ಯಕ್ಷತೆಯಲ್ಲಿ ಸಭೆ ಸೇರಿ ಸ್ಥಿರಾಸ್ತಿಗಳ ಮೌಲ್ಯವನ್ನು ಹೆಚ್ಚಿಸುವ ಬಗ್ಗೆ ತೀರ್ಮಾನಿಸಿ ಈ ಬಗ್ಗೆ ಪರಿಷ್ಕೃತ ಕರಡು ಪ್ರತಿಯನ್ನು ತಯಾರಿಸಿದ್ದು ಸಾರ್ವಜನಿಕರ ಮಾಹಿತಿಗಾಗಿ ಈ ಕಛೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿ ಪ್ರಚುರ ಪಡಿಸಲಾಗಿದೆ.

ಈ ಸಂಬಂಧ ಆಕ್ಷೇಪಣೆಗಳು ಇದ್ದಲ್ಲಿ ಸಾರ್ವಜನಿಕರು ಈ ಪ್ರಕಟಣೆ ದಿನಾಂಕದ 15 ದಿನಗಳ ಒಳಗಾಗಿ (ದಿನಾಂಕ:14.11.2026 ರಿಂದ 29.11.2026 ರವರೆಗೆ) ತಹಶೀಲ್ದಾರ್ ಮತ್ತು ಅಧ್ಯಕ್ಷರು, ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ತಾಲ್ಲೂಕು ಕಛೇರಿ, ಮೂಡಿಗೆರೆ ಮತ್ತು ಕಳಸ ಅಥವಾ ಕಾರ್ಯದರ್ಶಿ/ಉಪನೋಂದಣಾಧಿಕಾರಿ, ಉಪನೊಂದಣಿ ಕಛೇರಿ, ಮೂಡಿಗೆರೆ ಇವರಿಗೆ ಕಛೇರಿಯ ವೇಳೆಯಲ್ಲಿ (ಬೆಳಗ್ಗೆ 10-00 ರಿಂದ ಸಂಜೆ 5-30ರವರೆಗೆ) ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Leave a Reply

Your email address will not be published. Required fields are marked *