November 17, 2026
;
WhatsApp Image 2026-11-13 at 9.52.56 PM

 

 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಗೌಡಹಳ್ಳಿ ಇಲ್ಲಿಗೆ  ಸಿ. ಎಸ್ .ಆರ್. ಪಾಲುದಾರರು ಶರ್ವಿನ್ ವಿಲಿಯಮ್ಸ್ ಮತ್ತು ಬೆಂಗಳೂರುಉ ರೋಟರಿ ಸಂಸ್ಥೆ ವತಿಯಿಂದ ವಿವಿಧ ಪರಿಕರ, ಪೀಠೋಪಕರಣ ಹಾಗೂ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಪ್ರಾಥಮಿಕ ಶಾಲೆಗೆ ಐದು ಕುರ್ಚಿಗಳು. ಎರಡು ಗ್ರೀನ್ ಬೋರ್ಡ್ ಗಳು. ಒಂದು ಕಂಪ್ಯೂಟರ್. 10 ಡೆಸ್ಕುಗಳು. 500 ಲೀಟರ್ ನ ಪ್ಯೂರಿಫೈ ವಾಟರ್ ಶುದ್ದ ನೀರಿನ ಘಟಕ ಒಂದು ಕಂಪ್ಯೂಟರ್ನ ಟೇಬಲ್ ಐದು ತರಗತಿ ಟೇಬಲ್. ಇವುಗಳನ್ನು ದಾನವಾಗಿ ನೀಡಿರುತ್ತಾರೆ.

ಹಾಗೆಯೇ ಪ್ರೌಢಶಾಲೆಗೆ ಕುಡಿಯುವ ನೀರಿನ ಘಟಕ, ಗ್ರೀನ್ ಬೋರ್ಡ್ ಗಳು ಸೇರಿದಂತೆ ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ಅವರು ಮಾತನಾಡಿ ; ತಮ್ಮ ಮನವಿಯ ಮೇರೆಗೆ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ವಹಿಸಿ ವಿವಿಧ ಸೌಲಭ್ಯಗಳನ್ನು ನೀಡಿದ ಸಂಸ್ಥೆಯ ಮುಖ್ಯಸ್ಥರುಗಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಶರ್ವಿನ್ ವಿಲಿಯಮ್ಸ್ ಸಂಸ್ಥೆಯ ಹಿರಿಯ ಮಾನವ ಸಂಪನ್ಮೋಲ ವ್ಯವಸ್ಥಾಪಕ ರತನ್‍ರೈ, ರೋಟರಿ ಬೆಂಗಳೂರು ಜೆ.ಪಿ.ನಗರ ಸಂಸ್ಥೆಯ ಅಧ್ಯಕ್ಷ ಸುರೇಶ್ ರಾಬರ್ಟ್, ಜಿ.ಎಂ.ರವಿ, ಶ್ರೀನಿವಾಸನ್, ಶಾಲೆಯ ಮುಖ್ಯ ಶಿಕ್ಷಕರುಗಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಪದಾಧಿಕಾರಿಗಳು, ಪೋಷಕರು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *