ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಶೆರ್ವಿನ್ ವಿಲಿಯಮ್ಸ್ ಸಂಸ್ಥೆ ಮತ್ತು ರೋಟರಿ ಬೆಂಗಳೂರು ಜೆ.ಪಿ.ನಗರ ಸಂಸ್ಥೆಯ ವತಿಯಿಂದ ಸೋಮವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರ ಬಳಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಗೆ ವಿವಿಧ ಸೌಲಭ್ಯ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕಿ ಯಾಸ್ಮೀನ್ ಮಾತನಾಡಿ, ಶೆರ್ವಿನ್ ವಿಲಿಯಮ್ಸ್ ಸಂಸ್ಥೆ ಮತ್ತು ರೋಟರಿ ಬೆಂಗಳೂರು ಜೆ.ಪಿ.ನಗರ ಸಂಸ್ಥೆಯ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್, ಪ್ರಿಂಟರ್, ಗ್ರಂಥಾಲಯದ ಕಪಾಟುಗಳು, ಹಸಿರು ಬೋರ್ಡ್‍ಗಳು, ಡೆಸ್ಕ್‍ಗಳು, ಟೇಬಲ್‍ಗಳು ಹಾಗೂ ಕುರ್ಚಿಗಳನ್ನು ಒದಗಿಸಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಜ್ಞಾನಾರ್ಜನೆ ಹಾಗೂ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಿದಂತಾಗಿದೆ. ಅಲ್ಲದೇ ಡಿಜಿಟಲ್ ಶಿಕ್ಷಣ ಮತ್ತು ಗ್ರಂಥಾಲಯದ ಬಳಕೆಗೆ ಸಹಕಾರಿಯಾಗಲಿವೆ ಎಂದು ಹೇಳಿದರು
ಶರ್ವಿನ್ ವಿಲಿಯಮ್ಸ್ ಸಂಸ್ಥೆಯ ಹಿರಿಯ ಮಾನವ ಸಂಪನ್ಮೋಲ ವ್ಯವಸ್ಥಾಪಕ ರತನ್‍ರೈ, ರೋಟರಿ ಬೆಂಗಳೂರು ಜೆ.ಪಿ.ನಗರ ಸಂಸ್ಥೆಯ ಅಧ್ಯಕ್ಷ ಸುರೇಶ್ ರಾಬರ್ಟ್, ಜಿ.ಎಂ.ರವಿ, ಶ್ರೀನಿವಾಸನ್, ಜಗದೀಶ್ ಉಗ್ಗೇಹಳ್ಳಿ, ಪಿ.ಕೆ.ರಾಜು, ಹಮೀದ್ ಸಬ್ಬೇನಹಳ್ಳಿ, ರಾಘವೇಂದ್ರ ಮತ್ತಿತರರಿದ್ದರು.


