ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಕೂಸಾದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದ ಅಂಗವಾಗಿ ಆಲ್ದೂರು ಹೋಬಳಿ ಮತ್ತು, ಸತ್ತಿಹಳ್ಳಿ, ಕೆಳಗೂರು, ಆಲ್ದೂರು, ದೊಡ್ಡ ಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆಯ ಸಭೆಯ ಅಧ್ಯಕ್ಷತೆಯನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸತ್ತಿಹಳ್ಳಿ, ಇದರ ಮಾಚಗೊಂಡನಹಳ್ಳಿ ಕಟ್ಟಡದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಪ್ಪಟ ಮಲೆನಾಡು ಭಾಗವಾದ ಈ ಪ್ರದೇಶದಲ್ಲಿ ಅನೇಕ ಸಮಸ್ಯೆಗಳಿದ್ದು, ಹಂತ ಹಂತವಾಗಿ, ಆದ್ಯತೆ ಮೇರೆಗೆ ,ನಿಯಮಾನಸಾರ, ಜನರ ಸಮಸ್ಯೆಯನ್ನು ಪರಿಹರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರೋದಾಗಿ, ಹಾಗೂ ಜನರ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಿ, ಜನರು ನೆಮ್ಮದಿಯಿಂದ ಜೀವಿಸಲು ಸಹಕಾರ ನೀಡುವುದಾಗಿ ಶಾಸಕರು ಸಭೆಗೆ ತಿಳಿಸಿದರು.
ಚಿಕ್ಕಮಗಳೂರು ತಹಶೀಲ್ದಾರ್ ರೇಷ್ಮಾ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಇಲಾಖೆಯ ಜೊತೆ ಸಮನ್ವಯ, ಪರಸ್ಪರ ಸಹಕಾರದಿಂದ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುದಾಗಿ ತಿಳಿಸಿದರು. ತಾಲೂಕ್ ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿನ ಜನರ ಸಮಸ್ಯೆಯನ್ನು ನಿವಾರಿಸಲು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸಭೆಗೆ ತಿಳಿಸಿದರು.
ಬಹಳಷ್ಟು ಅರ್ಜಿಗಳು ಕುಡಿಯುವ ನೀರು, ಸಿಸಿ ರಸ್ತೆ, ನಿವೇಶನ ರಹಿತರು, ವಿದ್ಯುತ್ ಸಮಸ್ಯೆ, ಗ್ರಾಮದ ಒಳಗಿನ ಹದಗೆಟ್ಟ ರಸ್ತೆಗೆ ಸಿಸಿ ರಸ್ತೆಯನ್ನಾಗಿ ಪರಿವರ್ತಿಸುವ, ಜಮೀನಿಗೆ ತಿರುಗುವ ದಾರಿಗೆ ಸಂಬಂಧಪಟ್ಟವುಗಳಾಗಿದ್ದವು.
ಒಟ್ಟು 15 ರಿಂದ 20 ಹವಾಲುಗಳನ್ನು ಮಾತ್ರ ಪರಿಶೀಲಿಸಿ ಅವುಗಳಲ್ಲಿ 94 ಸಿ ಹಕ್ಕುಪತ್ರ, ಆರು ತಿಂಗಳಂದ ಒಂದು ವರ್ಷದ ಒಳಗೆ ಮಾಡಿದ ರಸ್ತೆಯ ಕಳಪೆ ಕಾಮಗಾರಿ, ನ್ಯಾಯಬೆಲೆ ಅಂಗಡಿಯ ಕೆ ವೈ ಸಿ ಸಂಬಂಧ ಪಟ್ಟಂತೆ ಕೆಲವು ವಿಚಾರ, ಸರ್ವೆ ನಂ. 167 ರಲ್ಲಿ ಮಂಜೂರಾತಿ ಯಾದ 10 ಎಕರೆ ಆಶ್ರಯ ನಿವೇಶನಕ್ಕೆ ಮೀಸಲಿಡುವ ಜಾಗವನ್ನು ಫಲಾನುಭವಿಗಳಿಗೆ ಆರು ತಿಂಗಳಿಂದ ಒಂದು ವರ್ಷದ ಒಳ ಒಳಗೆ ನೀಡುತ್ತೇವೆ ಎಂದು ಭರವಸೆ ನೀಡಿದ ಬಳಿಕ
ರೈತ ಸಂಘದ ಮುಖಂಡರಾದ ತುಳಸೇಗೌಡ ಆಲ್ದೂರು ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಬಸ್ ನಿಲ್ದಾಣ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಸಿಡಿ ಶಿವಕುಮಾರ್ ಆಲ್ದೂರು ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರದ ಬಗ್ಗೆ ಕ್ರಮವಹಿಸುವಂತೆ ಸಭೆಗೆ ತಿಳಿಸಿದರು. ಆಲ್ದೂರು ನಿಂದ ಹಾಂದಿ ವರೆಗೆ ರಸ್ತೆಯು ಬಹಳ ಹದಗೆಟ್ಟಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಒತ್ತಾಯಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮಲ್ಲಿಕಾರ್ಜುನ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್, ಪೋಲಿಸ್ ವೃತ್ತ ನಿರೀಕ್ಷಕ ಪಿಪಿ ಸೋಮೇಗೌಡ, ಸತ್ತಿಹಳ್ಳಿ ಪಂಚಾಯಿತಿ ಪಿಡಿಒ ಸುರಯ್ಯ ಬಾನು, ಕಂದಾಯ ನಿರೀಕ್ಷಕ ಪ್ರದೀಪ್,ಸರ್ವೆಯರ್, ಕಂದಾಯ ಲಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಕೆ ಎಸ್ ಆರ್ ಟಿ ಸಿ,ಮೆಸ್ಕಾಂ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಆಹಾರ ಇಲಾಖೆ, ಇನ್ನು ಮುಂತಾದ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


