November 17, 2026
;
jnke 2

 

 

ಚಿಕ್ಕಮಗಳೂರು ಪ್ರಾದೇಶಿಕ ವಲಯದ ಅಧಿಕಾರಿಗಳು ಮಾಗಡಿ ಹ್ಯಾಂಡ್ ಪೋಸ್ಟ್ ಸಮೀಪದ ರಾಜು ಅಲಿಯಾಸ್ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮತ್ತು ಹಂಚಿಕೊಳ್ಳುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ ಬೇಯಿಸಿದ ಜಿಂಕೆ ಮಾಂಸ ಹಾಗೂ ಆರೋಪಿ ರಾಜು ಅಲಿಯಾಸ್ ದೇವರಾಜ್ ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

ಕಾಡು ಪ್ರಾಣಿಗಳ ಮಾಂಸವನ್ನು ತನಗೆ ಚಿಕ್ಕಮಗಳೂರು ನಗರದ ಟಿಪ್ಪುನಗರದ ವಾಸಿ ಪಿ.ಕುಮಾರ್ ಮಾರಾಟ ಮಾಡಿರುವುದಾಗಿ ರಾಜು ಮಾಹಿತಿ ನೀಡಿದ್ದಾನೆ.

ಕುಮಾರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಈ ಜಿಂಕೆ ಮಾಂಸ ಸರಬರಾಜು ಮಾಡುತಿದ್ದ ಬೇಲೂರಿನ ಕಿಂಗ್ ಪಿನ್ ಅಲಿ ಮತ್ತು ಇನ್ನೋರ್ವ ಪ್ರಮುಖ ಆರೋಪಿ ಕರ್ತಿಕೆರೆಯ ಯೋಗಿ ಗೌಡ ತಲೆಮರೆಸಿಕೊಂಡಿದ್ದಾರೆ.

ಒಂದು ಕೆ.ಜಿ ಬೇಯಿಸಿದ ಜಿಂಕೆ ಮಾಂಸ ವಶಕ್ಕೆ ಪಡೆದು ರಾಜು, ಪಿ.ಕುಮಾರ್ ನನ್ನ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ .

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್,ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್,ನಾರಾಯಣ, ಪ್ರದೇಪ,ಮಂಜುನಾಥ್,ಪ್ರವೀಣ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *