November 21, 2026
;
football

 

 

ರಾಜ್ಯಮಟ್ಟದ ಪ್ರತಿಷ್ಠಿತ 7ರ ಫುಟ್ಬಾಲ್ ಪಂದ್ಯಾವಳಿಯಾದ ಪ್ರೊ ಸಾಕರ್ ಲೀಗ್ (Pro Soccer League) ನಲ್ಲಿ ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡ ಭಾಗವಹಿಸಲಿದೆ.

ಕರ್ನಾಟಕದ ಎಂಟು ಬಲಿಷ್ಠ ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಯಲ್ಲಿ 100ಕ್ಕೂ ಅಧಿಕ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನವೆಂಬರ್ 21ರಿಂದ ಡಿಸೆಂಬರ್ 6ರವರೆಗೆ ಪ್ರತಿ ವಾರಾಂತ್ಯದಲ್ಲಿ ಚಿಕ್ಕಮಗಳೂರಿನ ಕಲ್ಯಾಣನಗರ ಟರ್ಫ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.

ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡದ ಮಾಲೀಕರಾಗಿ ನಿಶ್ಚಿಂತ್ ಚಿನ್ನಪ್ಪ, ಪ್ರೀತಮ್ ಮೋಟಮ್ಮ, ಚರಣ್ ಡಿ.ಆರ್. ಹಾಗೂ ಆದರ್ಶ್ ಗೌಡ ಡಿ.ಎ ಕಾರ್ಯನಿರ್ವಹಿಸುತ್ತಿದ್ದಾರೆ.

ತಂಡದಲ್ಲಿ ಅನುಭವಿ ಹಾಗೂ ಪ್ರತಿಭಾವಂತ ಆಟಗಾರರ ಸಮಾಗಮವಿದ್ದು, ಪ್ರತಿಷ್ಠಿತ ಡ್ಯುರಾಂಡ್ ಕಪ್‌ನಲ್ಲಿ ಆಡಿರುವ ಪ್ರಜ್ವಲ್ ಗೌಡ ಹಾಗೂ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ಶೇಕ್ ಅರ್ಬಾಜ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರೊಂದಿಗೆ ಶಿವಮೊಗ್ಗ ಹಾಗೂ ಹಾಸನ ಭಾಗದ ಹಲವು ಪ್ರತಿಭಾವಂತ ಆಟಗಾರರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆ ಸುಭಾಷ್ ಎಂ. ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಮೂಡಿಗೆರೆ ಯುನೈಟೆಡ್ ಎಫ್‌ಸಿ ಬಲಿಷ್ಠ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

ತಂಡದ ವಿವರ:

ತಂಡದ ವ್ಯವಸ್ಥಾಪಕರು: ವರುಣ್ ಬಸವರಾಜ್

ಆಟಗಾರರು :

  1. ಸುಭಾಷ್ ಎಂ. – ನಾಯಕ
  2. ಯಶವಂತ್ – ಗೋಲ್‌ಕೀಪರ್
  3. ಧನುಷ್ ಸಿ.ಎ.
  4. ಪ್ರಜ್ವಲ್ ಗೌಡ
  5. ಶೇಕ್ ಅರ್ಬಾಜ್
  6. ಮನು ಗೌಡ
  7. ಹರ್ಷಿತ್ ನಾಯಕ್
  8. ಶಾರ್ಗವ ಎಂ.ಆರ್.
  9. ಹೇಮಂತ್
  10. ಆದರ್ಶ್ ಗೌಡ
  11. ನಿಶ್ಚಿಂತ್ ಚಿನ್ನಪ್ಪ
  12. ಮೊಹಮ್ಮದ್ ನುಮಾನ್
  13. ⁠ವಚನ್‌ ಗೌಡ
  14. ⁠ನಂದಕಿಶೋರ್‌

ಮೂಡಿಗೆರೆ ತಾಲ್ಲೂಕಿನ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರ ಪರವಾಗಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇವೆ. ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ವಿಜಯಶಾಲಿಯಾಗಿ ಹೊರಹೊಮ್ಮಲಿ ಎಂಬುದು ನಮ್ಮೆಲ್ಲರ ಆಶಯ.

 

 

Leave a Reply

Your email address will not be published. Required fields are marked *