November 23, 2026
;
banduku

 

 

ಬಂದೂಕಿನಿಂದ ಹಾರಿದ ಗುಂಡು ಮನೆಯ ಕಿಟಕಿಗೆ ತಗುಲಿ ಗಾಜು ಪುಡಿಯಾಗಿರುವ ಮತ್ತು ಮನೆಯವರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮೂಡಗಿಎರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮುತ್ತಿಗೆಪುರ ಗ್ರಾಮದ ಕಾಫಿ ತೋಟದಲ್ಲಿರುವ ಎಂ.ವಿ.ವಿಂದನ್ ಎಂಬುವವರ ಮನೆ ಸಮೀಪ, ಕೆಲವರು  ಬಂದೂಕು ಹಿಡಿದು ಕಾಡುಪ್ರಾಣಿ ಬೇಟೆಗೆ ತೆರಳಿದ್ದರು. ಈ ವೇಳೆ ಹಾರಿಸಿದ ಗುಂಡು ಸಮೀಪದಲ್ಲಿದ್ದ ಮನೆಯ ಕಿಟಕಿಗೆ ತಗುಲಿ ಗಾಜು ಪುಡಿಯಾಗಿದೆ. ಗುಂಡು ಮನೆಯೊಳಗೂ ನುಗ್ಗಿದ್ದು, ಮನೆಗೆ ಹಾನಿಯಾಗಿದೆ ಮತ್ತು ಮನೆಯವರು ಕೂದಲೆಳೆ ಅಂತರದಿಂದ ಎನ್ನಲಾಗಿದೆ.

ಮನೆಯ ಮಾಲೀಕ ವಿಂದನ್ ಅವರು ನೀಡಿದ ದೂರಿನಲ್ಲಿ, ತಾಯಿ ಹಾಗೂ ಕುಟುಂಬದವರೊಂದಿಗೆ ಮನೆಯಲ್ಲಿ ವಾಸವಿದ್ದು, ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದಲೇ ಗುಂಡು ಹಾರಿಸಲಾಗಿದೆ. ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಬಂದೂಕು ಸಮೇತ ಬರುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಅಲರ್ಟ್ ಸಿಗ್ನಲ್ ಬಂದಿದ್ದು, ಬಂದೂಕುದಾರಿಗಳ ಸಂಪೂರ್ಣ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದಲೇ ಈ ಫೈರಿಂಗ್ ನಡೆಸಲಾಗಿದೆ ಎಂದು ಮನೆ ಮಾಲೀಕ ವಿಂದನ್ ಆರೋಪಿಸಿದ್ದಾರೆ.

ಈ ಸಂಬಂಧ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಿತ್, ಸಚಿನ್, ಪರಮೇಶ್ ಸೇರಿದಂತೆ ಇತರರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

Leave a Reply

Your email address will not be published. Required fields are marked *