November 25, 2026
;
pranesh m k_page-0001

 

 

ಹಾಸನ ಜಿಲ್ಲೆ ಸಮಸ್ಯೆ ನಿವಾರಿಸಲು ಪಕ್ಕದ ಜಿಲ್ಲೆಗೆ ಸಮಸ್ಯೆ ತಂದೊಡ್ಡುವ ಮೂಲಕ ಕೀಳು ಮಟ್ಟದ ಆಡಳಿತವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ತನ್ನ ಸ್ವಾರ್ಥಕ್ಕಾಗಿ ಎರಡು ತಾಲ್ಲೂಕುಗಳ ಜನರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಕಾರಣವಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಆರೋಪಿಸಿದ್ದಾರೆ.

ಮಂಗಳವಾರ ಮೂಡಿಗೆರೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಸನ ಜಿಲ್ಲೆ ಉಸ್ತುವಾರಿ ಸಚಿವರು ತನ್ನ ಜಿಲ್ಲೆಯ ಜನರ ಬಗ್ಗೆ ಕಾಳಜಿ ವಹಿಸಿ ಕಾಡಾನೆಗಳನ್ನು ಇಲ್ಲಿಗೆ ಓಡಿಸಲು ಮುಂದಾದರೆ, ಇಲ್ಲಿರುವ ಉಸ್ತುವಾರಿ ಸಚಿವರು ಈ ಬಗ್ಗೆ ವಿರೋಧ ವ್ಯಕ್ತಪಡಿಸುವುದಿರಲಿ. ಜನರ ಸಮಸ್ಯೆ ಕೇಳಲೂ ಬಂದಿಲ್ಲ. ಇನ್ನು ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ನೀಡುವ ಮೂಲಕ ಹೈಡ್ರಾಮ ಮಾಡಿ ಜನರ ಅನುಕಂಪ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ತಾಲೂಕಿನ ಚಂದ್ರಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾಫಿ ತೋಟವಿದ್ದು, ಅಲ್ಲಿ ಕಾಡಾನೆ ಸುಳಿಯದಂತೆ ಅರಣ್ಯ ಇಲಾಖೆಗೆ ಕಟ್ಟೆಚ್ಚರ ವಹಿಸಿದ್ದಾರೆಂಬ ಮಾಹಿತಿ ದೊರಕಿದೆ. ಇಂತಹ ಸಚಿವರಿಂದ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ಸರಕಾರ ನಮ್ಮ ಬೇಡಿಕೆ ಆಲಿಸದಿದ್ದರೆ, ನಮ್ಮ ಬದುಕಿಗಾಗಿ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

 

Leave a Reply

Your email address will not be published. Required fields are marked *