ಮೂಡಿಗೆರೆ ತಾಲ್ಲೂಕು – ಫಲ್ಗುಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಾನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಆರಂಭವು ಪೂರ್ಣಕುಂಭದ ಮೆರವಣಿಗೆಯೊಂದಿಗೆ ಭವ್ಯವಾಗಿ ಸಾಗಿತು. ಶಾಲೆಯ ಮಕ್ಕಳು, ಶಿಕ್ಷಕರು, ಗಣ್ಯರು ಹಾಗೂ ಗ್ರಾಮಸ್ಥರ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ದೊರೆಯಿತು.

ಈ ಶುಭ ಸಂದರ್ಭದಲ್ಲಿ ಶಾಲೆಯ ನೂತನ ನಾಮಫಲಕ ಹಾಗೂ ಸುಂದರವಾದ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭವೂ ನೆರವೇರಿತು. ಶಾಲೆಯ ಮೇಲಿನ ಪ್ರೀತಿ, ಕಾಳಜಿ ಮತ್ತು ಶಿಕ್ಷಣದ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿ ನೂತನ ಗೇಟ್ ಕೊಡುಗೆಯಾಗಿ ನೀಡಿದ ಹಿರಿಯ ಶಿಕ್ಷಕರಾದ ಶ್ರೀ ಜಯಕುಮಾರ್ ಆಚಾರ್ ಅವರ ಸೇವೆ ಹಾಗೂ ಔದಾರ್ಯ ವಿಶೇಷವಾಗಿ ಸ್ಮರಣೀಯ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಪ್ರಸಾದ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಪ್ರತಾಪ್ ಗೌಡರು, ಶ್ರೀ ವಿನಯ್ ಗೌಡರು (ಬಗ್ಗಸಗೋಡು), ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಹೇಮಂತ್ ಚಂದ್ರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀ ನವೀನ್ ಬಿ.ಆರ್. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ಮರಣೀಯ ಕ್ಷಣಗಳಿಗೆ ಮತ್ತಷ್ಟು ಮೌಲ್ಯ ತುಂಬಿದ ಸ್ಮರಣಿಕೆಗಳ ಕೊಡುಗೆದಾರರಾದ ನಿವೃತ್ತ ಶಿಕ್ಷಕರಾದ ಶ್ರೀ ಷಣ್ಮುಖಪ್ಪ ಅವರ ಕೊಡುಗೆ ಅಭಿನಂದನೀಯ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ ಉಪನ್ಯಾಸಕರಾದ ಶ್ರೀ ಪ್ರವೀಣ್ ದೇವಾಡಿಗ ಅವರ ಸಹೋದರರಾದ ಶ್ರೀ ರತ್ನಾಕರ್ ಅವರ ಸಹಕಾರವೂ ಪ್ರಶಂಸನೀಯ.
ಈ ಕಾರ್ಯಕ್ರಮವು ಕೇವಲ ಸ್ಪರ್ಧೆಗಳ ವೇದಿಕೆಯಾಗಿರದೆ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಿ, ಆತ್ಮವಿಶ್ವಾಸ ತುಂಬುವ ಸುಂದರ ವೇದಿಕೆಯಾಯ
ಇದರೊಂದಿಗೆ ಕಾರ್ಯಕ್ರಮದ ದಿನ. ಶ್ರೀ ಜಯಕುಮಾರ ಆಚಾರ್ ಹಿರಿಯ ಶಿಕ್ಷಕರು ಶ್ರೀ ಭುವನೇಂದ್ರ ಹಳೆಯ ವಿದ್ಯಾರ್ಥಿ ಸರ್ವ ದಾನಿಗಳ ದೊಡ್ಡಮಟ್ಟದ ಸಹಕಾರದಿಂದ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಸಾದ್ ಹಾರಗೋಡು ಇವರ ಶ್ರಮದ ಫಲ ಶಾಲೆಗೆ ಅದ್ಭುತವಾದ ಗೇಟ್ ಮತ್ತು ಆರ್ಚ್ ಅನ್ನು ಉದ್ಘಾಟಿಸಿ ಸಮರ್ಪಿಸಲಾಯಿತು.


