ಕಳೆದ ಎಂಟು ದಿನಗಳಿಂದ ಕಳಸದಲ್ಲಿ ಸಂಭ್ರಮ, ಸಡಗರ ಹಾಗೂ ಧಾರ್ಮಿಕ ಭಕ್ತಿಭಾವದಿಂದ ನಡೆಯುತ್ತಿದ್ದ ಶ್ರೀ ಕಲಶೇಶ್ವರ ಸ್ವಾಮಿಯ ಗಿರಿಜಾಕಲ್ಯಾಣೋತ್ಸವವು ಮಂಗಳವಾರ ರಾತ್ರಿ ನಡೆದ ಐತಿಹಾಸಿಕ ಹರಿಹರ ಸಮಾಗಮದೊಂದಿಗೆ ಮಂಗಳಮಯವಾಗಿ ಸಂಪನ್ನಗೊಂಡಿತು.
ಮಂಗಳವಾರ ಬೆಳಿಗ್ಗೆ ಮಹಾ ಸಂಪ್ರೋಕ್ಷಣೆ ಬಳಿಕ ಧಾತ್ರಿ ಹೋಮ ನೆರವೇರಿಸಲಾಯಿತು. ಬಿಂದು ಮಾಧವದೇವಸ್ಥಾನದಲ್ಲಿ ಪೂಜೆಗಳು ನಡೆದ ಬಳಿಕ ನಂತರ ಶ್ರೀ ಕಲಶೇಶ್ವರ ಸ್ವಾಮಿಯನ್ನು ವಶಿಷ್ಠಾಶ್ರಮಕ್ಕೆಕರೆತರಲಾಯಿತು. ದೇವರಆಗಮನದ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂಗ್ರಾಮಸ್ಥರು ತಳಿರು ತೋರಣಗಳಿಂದ ಸಿಂಗರಿಸಿ ಭಕ್ತಿಪೂರ್ವಕ ಸ್ವಾಗತಕೋರಿದರು. ಗ್ರಾಮಕ್ಕೆ ಆಗಮಿಸಿದ ದೇವರಿಗೆ ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ಸೇವೆ ಸಲ್ಲಿಸಿದರು.
ವಶಿಷ್ಠ ತೀರ್ಥದಲ್ಲಿ ವಿವಿಧಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ರಾತ್ರಿ ಪಂಚವಾದ್ಯಗಳ ನಿನಾದ, ಛತ್ರಿ-ಚಾಮರಗಳ ವೈಭವದೊಂದಿಗೆದೇವರನ್ನು ಹೊತ್ತುಗಣಪತಿಕಟ್ಟೆ ಪ್ರದೇಶಕ್ಕೆ ಮೆರವಣಿಗೆಯಲ್ಲಿಕರೆತರಲಾಯಿತು. ಈ ಸಂದರ್ಭದಲ್ಲಿಎದುರಾದತ್ರಿಪುರಾಸುರರನ್ನು ಸಂಹರಿಸುವಧಾರ್ಮಿಕ ಸನ್ನಿವೇಶವು ನೆರೆದಿದ್ದ ಭಕ್ತರಲ್ಲಿ ವಿಶೇಷಆಕರ್ಷಣೆ ಮೂಡಿಸಿತು. ನಂತರ ಸಂಪ್ರದಾಯದಂತೆಕಟ್ಟೆ ಪೂಜೆ ನೆರವೇರಿಸಲಾಯಿತು.
ಅಲ್ಲಿಂದ ವೆಂಕಟರಮಣದೇವಸ್ಥಾನದ ಬಳಿಗೆ ಆಗಮಿಸಿದ ಶ್ರೀ ಕಲಶೇಶ್ವರ ಸ್ವಾಮಿಗೆ ಶ್ರೀ ವೆಂಕಟರಮಣ ಸ್ವಾಮಿಯ ಭೇಟಿಯಾಯಿತು. ಈ ಅಪೂರ್ವಕ್ಷಣವೇ ಹರಿಹರ ಸಮಾಗಮವಾಗಿ ಕಂಗೊಳಿಸಿತು. ಭಕ್ತಿಯ ಸಂಕೇತವಾದ ಈ ಸಮಾಗಮವನ್ನು ಕಣ್ತುಂಬಿಕೊಳ್ಳಲು ಅಪಾರಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಉಭಯ ದೇವರುಗಳ ಸಮ್ಮಿಲನದ ಬಳಿಕ ಒಟ್ಟಾಗಿ ನಡೆದಉತ್ಸವವುಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ನಂತರಕಲಶೇಶ್ವರದೇವರುಗಿರಿಜಾಂಬ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ ಬಳಿಕ ಶ್ರೀ ಕಲಶೇಶ್ವರ ಸ್ವಾಮಿಯನ್ನು ಸ್ವಕ್ಷೇತ್ರಕ್ಕೆಕರೆತರಲಾಯಿತು. ದೇವರು ಕಲಶೇಶ್ವರದೇವಸ್ಥಾನಕ್ಕೆ ಒಕ್ಕಲು ಆಗುವುದರೊಂದಿಗೆಎಂಟು ದಿನಗಳ ಗಿರಿಜಾಕಲ್ಯಾಣೋತ್ಸವದಧಾರ್ಮಿಕ ಕಾರ್ಯಕ್ರಮಗಳಿಗೆ ವಿಧ್ಯುಕ್ತತೆರೆ ಬಿದ್ದಿತು.
ಮೆರವಣಿಗೆಯುದ್ದಕ್ಕೂಆಕಾಶದಲ್ಲಿ ಬಣ್ಣಬಣ್ಣದಚಿತ್ತಾರ ಮೂಡಿಸಿದ ಆಕರ್ಷಕ ಪಟಾಕಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ದಾರಿಯುದ್ದಕ್ಕೂ ನೂರಾರು ಭಕ್ತರುತಮ್ಮ ಹರಕೆಗಳನ್ನು ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ಪಂಚವಾದ್ಯಗಳ ಮೊಳಗು, ಭಕ್ತರಜಯಘೋಷ, ದೀಪಾಲಂಕಾರ ಹಾಗೂ ಧಾರ್ಮಿಕ ಸಂಪ್ರದಾಯಗಳ ಸೊಬಗು ಇಡೀ ಕಳಸ ಪಟ್ಟಣವನ್ನು ಭಕ್ತಿಯ ಲೋಕದಲ್ಲಿತೇಲುವಂತೆ ಮಾಡಿತು.
ಎಂಟು ದಿನಗಳ ಕಾಲ ನಡೆದ ವಿವಿಧಧಾರ್ಮಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು, ಕೊನೆಯ ದಿನದ ಹರಿಹರ ಸಮಾಗಮದಅಪೂರ್ವದೃಶ್ಯವನ್ನುಕಣ್ತುಂಬಿಕೊಂಡು ಪುನೀತರಾದರು.


