rotary

 

 

ಇಂದು ಸಕಲೇಶಪುರ ರೋಟರಿ ಆತಿಥ್ಯದಲ್ಲಿ ನಡೆದ ರೋಟರಿ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೂಡಿಗೆರೆ ರೋಟರಿ ತಂಡ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿಕೊಂಡಿದೆ.

ಸಕಲೇಶಪುರ ನಗರದ ಕಾಸ್ಮೋ ಪಾಲಿಟನ್ ಸ್ಪೋರ್ಟ್ಸ್ ಕ್ಲಬ್ ಅಂಕಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ನಲ್ಲಿ ಮೂಡಿಗೆರೆ ರೋಟರಿ ಕ್ಲಬ್ ನ ಹೆಚ್.ಕೆ. ಯೋಗೇಶ್ ಮತ್ತು ಸಚ್ಚಿನ್ ಎಸ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಫೈನಲ್ ನಲ್ಲಿ ಬೇಲೂರು ತಂಡದ ವಿರುದ್ಧ ಮೂಡಿಗೆರೆ ತಂಡ ರೋಚಕ ಹಣಾಹಣಿಯಲ್ಲಿ ಗೆಲುವು ಪಡೆದಿದೆ.

ಪುರುಷರ ಸಿಂಗಲ್ಸ್ ನಲ್ಲಿ ಬೇಲೂರು ರೋಟರಿ ಕ್ಲಬ್ ನ ಶಂಭುಗೌಡ ಪ್ರಥಮ, ಮೂಡಿಗೆರೆ ರೋಟರಿ ಕ್ಲಬ್ ನ ಸಚ್ಚಿನ್ ಎಸ್. ದ್ವಿತೀಯ ಸ್ಥಾನ ಗಳಿಸಿದ್ದಾರೆ.

ವಿಜೇತ ತಂಡಕ್ಕೆ ಮೂಡಿಗೆರೆ ರೋಟರಿ ಅಧ್ಯಕ್ಷ ಹೆಚ್.ಆರ್. ಪ್ರದೀಪ್ ದುಂಡುಗ, ಕಾರ್ಯದರ್ಶಿ ವರುಣ್ ಬಿ. ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

 


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ