kere

 

 

ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗುತ್ತಿದ್ದ ಮಗಳನ್ನು ರಕ್ಷಿಸಲು ಹೋಗಿ ತಾಯಿಮಗಳು ಇಬ್ಬರು ಕೆರೆಯಲ್ಲಿ ಮುಳುಗಿ ಸಾವನನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಮ್ಮ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಸಮೀಪದ ವಡ್ಡರಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಶೋಭ (40), ವರ್ಷ(8) ಮೃತ ದುರ್ದೈವಿಗಳು. ಕೆರೆ ದಾಟುವಾಗ ಆಕಸ್ಮಿಕವಾಗಿ ನೀರಿನಲ್ಲಿ ಸಿಲುಕಿದ ಮಗಳು. ಮಗಳನ್ನ ರಕ್ಷಿಸಲು ಹೋದ ತಾಯಿಯೂ ಸಾವು. ಮೃತ ಶೋಭಾ ಜೊತೆಯಲ್ಲಿದ್ದ ಮಗ ಚೇತನ್ ಪಾರು.

ದನ ಮೇಯಿಸಲು ಹೋದಾಗ ಈ ಅನಾಹುತ ನಡೆದಿದೆ. ನೀರಿನ ಪ್ರಮಾಣ ಕಡಿಮೆ ಇರುವ ಕಡೆ ಕೆರೆ ದಾಟುತ್ತಿದ್ದ ತಾಯಿ, ಮಗಳು, ಮಗ
ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ಸಿಲುಕಿಕೊಂಡ ಹಿನ್ನೆಲೆ ರಕ್ಷಣೆಗೆ ತೆರಳಿದ ತಾಯಿ ಮಗಳನ್ನು ರಕ್ಷಿಸಲು ಸಾಧ್ಯವಾಗದೇ ಇಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ತನು ಕೊಟ್ಟಿಗೆಹಾರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ