c t ravi

 

 

ರಾಜದಲ್ಲಿ ಕಳೆದ ಒಂದು ವಾರದಿಂದ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜಕಾರಣಿಗಳನ್ನು, ಅಧಿಕಾರಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರನ್ನು ಬೆರಳ ತುದಿಯಲ್ಲಿ ಆಟವಾಡಿಸುತ್ತಿದ್ದ ಮೈಸೂರಿನ ಸ್ಯಾಂಟ್ರೋ ರವಿಯ ಬಣ್ಣ ಬಯಲಾಗಿ ಆತನ ವಿರುದ್ಧ ಕೇಸು ದಾಖಲಾಗಿ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಓರ್ವ ಪೊಲೀಸ್ ಅಧಿಕಾರಿ ಅಮಾನತ್ತಾಗಿದ್ದಾರೆ. ಸ್ಯಾಂಟ್ರೋ ರವಿ ಪ್ರಕರಣವೊಂದರಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನಾನು ಬಿ.ಜೆ.ಪಿ. ಕಾರ್ಯಕರ್ತ ಎಂದು ಹೇಳಿಕೊಂಡಿರುವುದು ಬೆಳಕಿದೆ ಬಂದಿದೆ.

ಈ ಕುರಿತು ಇಂದು ಚಿಕ್ಕಮಗಳೂರಿನಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದಾರೆ. ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸಿ.ಟಿ. ರವಿಯವರು :
ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ, ಅವರಿಗೆ ಬಿಜೆಪಿ ಪಕ್ಷ ದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ,

ಕಾನೂನು ಬಿಜೆಪಿಯವರಿಗೆ ಒಂದು, ಕಾಂಗ್ರೆಸ್ ಗೆ ಒಂದು ಅಂತ ಎಲ್ಲೂ ಇಲ್ಲ, ತಪ್ಪು ಯಾರು ಮಾಡಿದ್ರು ತಪ್ಪೇ, ಶಿಕ್ಷೆ ಆಗಬೇಕು, ತನಿಖೆ ನಂತರ ಯಾರು ಹಿಂದೆ ಇದ್ದಾರೆ, ಯಾವ ಪಾರ್ಟಿ ಇದೆ ಅನ್ನೋದು ಗೊತ್ತಾಗುತ್ತೆ, ನಮ್ಮ ಸರ್ಕಾರ ಐಜಿ ಮೇಲೂ ಕ್ರಮ ತೆಗೆದುಕೊಂಡಿದೆ, ಯಾರ ಮೇಲೂ ನಮ್ಮ ಸರ್ಕಾರ ಮುಲಾಜು ತೋರಿಸುವುದಿಲ್ಲ, ಕೇಸ್ ಮುಚ್ಚಿ ಹಾಕುವ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ
ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ, ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರುವ ಸಿ.ಟಿ.ರವಿಯವರು :

40 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಕಡೆವರೆಗೂ ಕ್ಷೇತ್ರ ಹುಡುಕುತ್ತಿರುವುದು ದರುಂತ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ನಂತರ ಅವರಿಗೆ ವಿಶ್ವಾಸ ಇಲ್ಲ,
ಅವರ ತವರು ಜಿಲ್ಲೆ ಮೈಸೂರು, ಅಲ್ಲೇ ಅವರಿಗೆ ಗೆಲ್ಲುವ ವಿಶ್ವಾಸ ಇಲ್ಲ, ಬಾದಾಮಿ ಯಲ್ಲೂ ಎರಡೇ ಬಾರಿ ಗೆಲ್ಲುತ್ತೇನೆಂಬ ವಿಶ್ವಾಸ ಅವರಿಗಿಲ್ಲ. ಅವರು ಕೋಲಾರಕ್ಕೆ ಹೋಗುತ್ತಿದ್ದಾರೆ.
ಇದು ಪ್ರಜಾಪ್ರಭುತ್ವ, ಜನ ತೀರ್ಮಾನ ಮಾಡ್ತಾರೆ, ಜನರ ತೀರ್ಮಾನ ವನ್ನ ನಾನೇನು ಹೇಳೋಕೆ ಆಗುವುದಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಬಸ್ ಯಾತ್ರೆಗೆ ಪೊರಕೆಯಿಂದ ಕಸ ಗುಡಿಸಿ ಚಾಲನೆ ನೀಡಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ

ದೇಶದ ಜನ ಕಾಂಗ್ರೆಸ್ಸನ ಗುಡಿಸುತ್ತಿದ್ದಾರೆ. ಅವರು ಅಧಿಕಾರಿದಲ್ಲಿದ್ದ ರಾಜ್ಯಗಳನ್ನ ಜನರು ಗುಡಿಸುತ್ತಿದ್ದಾರೆ. ಪಂಜಾಬ್ ನಲ್ಲಿ ಅಧಿಕಾರಿದಲ್ಲಿದ್ದರು ಜನ ಗುಡಿಸಿದ್ದಾರೆ. ದೆಹಲಿಯಲ್ಲಿ ಡೆಪಾಸಿಟ್ ಸಹಿತ ಇಲ್ಲದಂತೆ ಗುಡಿಸಿದ್ದಾರೆ. ಜನರೇ ಕಾಂಗ್ರೆಸನ್ನ ಗುಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು, ಅವರೇ ತೀರ್ಮಾನ ಮಾಡುವುದು ಎಂದಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ