ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ನಡೆಸಿದ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಶ್ವಾನಗಳನ್ನು ಶ್ವಾನಪ್ರಿಯರು ಕರೆತಂದಿದ್ದರು.
ಶನಿವಾರ ನಗರದ ಮಲೆನಾಡು ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನವನ್ನು ಶಾಸಕ ಸಿ.ಟಿ.ರವಿಯವರು ಉದ್ಘಾಟಿಸಿದರು. ಉದ್ಘಾಟನೆಗೆ ಆಗಮಿಸಿದ್ದ ಚಾರ್ಲಿ 777 ಸಿನಿಮಾದ ಲ್ಯಾಬ್ರಡರ್ ಶ್ವಾನ ಪ್ರದರ್ಶನದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು.
ಪ್ರದರ್ಶನದಲ್ಲಿ ಒಟ್ಟು 27 ತಳಿಯ 250ಕ್ಕೂ ಹೆಚ್ಚಿನ ಶ್ವಾನಗಳು ಭಾಗವಹಿಸಿದ್ದವು. ವಿವಿಧ ವಿಭಾಗಳಲ್ಲಿ ಬಹುಮಾನವನ್ನು ನೀಡಲಾಯಿತು. ಶ್ವಾನಪ್ರಿಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಆಕರ್ಷಕವಾದ ವಿವಿಧ ತಳಿಗಳ ಶ್ವಾನಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.




