mes school

 

 

ಮೂಡಿಗೆರೆ ಎಂ.ಇ.ಎಸ್.ಶಾಲೆಯ 24ನೇ ವಾರ್ಷಿಕೋತ್ಸವ ಸಮಾರಂಭ ಬುಧವಾರ ಸಂಜೆ ನೆರವೇರಿತು. ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಕಿತ್ತಲೆಹಣ್ಣು ಮಾರಾಟ ಮಾಢಿ ತಮ್ಮೂರಿನಲ್ಲಿ ಶಾಲೆ ಕಟ್ಟಿಸಿ ದೇಶದ ಗಮನ ಸೆಳೆದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಹರಕಳ ಹಾಜಬ್ಬ ಮತ್ತು ಚಿತ್ರನಟ ನಿರ್ದೇಶಕ ವಿನಾಯಕ ಜೋಷಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಹರಕಳ ಹಾಜಬ್ಬ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಹೊತ್ತು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಾ ಒಂದಿಷ್ಟು ಉಳಿಸಿಕೊಂಡು ಬಡವರ ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದೇನೆ. ಅನಕ್ಷರಸ್ಥರಿಗೆ ಸಮಾಜದಲ್ಲಿ ಗೌರವವಿಲ್ಲ. ಕಿತ್ತಳೆ ಮಾರಿ ಬಂದ ಹಣವನ್ನು ನಾನೊಬ್ಬನೇ ಬಳಸಿಕೊಳ್ಳಬೇಕು ಎಂದು ನನಗನ್ನಿಸಲಿಲ್ಲ. ದೇವರ ಅನುಗ್ರಹದಿಂದ ಒಂದಷ್ಟು ಹಣ ಉಳಿಸಬೇಕೆಂಬ ಯೋಚನೆ ಬಂತು ಒಂದಷ್ಟು ಹಣ ಕೂಡಿದ್ದೆ ಅದರಲ್ಲಿ ಶಾಲೆಯೊಂದನ್ನು ನಿರ್ಮಿಸಿ ಸರ್ಕಾರಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.
ಅಕ್ಷರದ ಪರಿಚಯವೆ ಇಲ್ಲದ ಗ್ರಾಮದಲ್ಲಿ ಶಾಲೆ ನಿರ್ಮಿಸಿ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಟ್ಟಿರುವ ಕಾರಣಕ್ಕೆ ಅನಕ್ಷರಸ್ಥನಾದ ನನ್ನನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಗೌರವ ನೀಡಿದೆ ಎಂದು ಅಭಿಪ್ರಾಯಪಟ್ಟರು.

ನನಗೆ ರಾಷ್ಟ್ರಪತಿ ಭವನದಲ್ಲಿ ಹಿಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ ಅವರು ಪದ್ಮಶ್ರೀ ಪ್ರಶಸ್ತಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲ ಸೀತಾರಾಮ್, ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದಾಗ ನನ್ನೂರಿಗೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಕೊಡಲು ಮನವಿ ಮಾಡಿದ್ದೇನೆ. ಕಾಲೇಜಿಗೆ ಮಂಜೂರಾತಿ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಧಾನಿ ಸೂಚನೆ ನೀಡಿದ್ದಾರೆ. ಸದ್ಯದಲ್ಲಿ ಕಾಲೇಜು ಮಂಜೂರಾಗಲಿದೆ. ಕಾಲೇಜು ಮಂಜೂರಾದ ಕೂಡಲೇ ಇನ್ನೂ ನಾಲ್ಕು ಬುಟ್ಟಿ ಹೆಚ್ಚು ಕಿತ್ತಳೆ ಮಾರಾಟ ಮಾಡಿ ಬಂದ ಹಣದಲ್ಲಿ ಕಾಲೇಜು ಕಟ್ಟಡ ನಿರ್ಮಿಸುತ್ತೇನೆ ಎಂದು ತಿಳಿಸಿದರು.

ಜೀವನ ನಡೆಸಲು ಕಷ್ಟವಿದೆ ಕೂಲಿ ಕೆಲಸದಿಂದ ಜೀವನ ನಡೆಸುವುದೇ ಕಷ್ಟ. ಬಡತನದಲ್ಲಿರುವ ಕಾರಣ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹಿಂಜರಿಯಬಾರದು. ಮಕ್ಕಳಿಗೆ ಶಿಕ್ಷಣ ನೀಡದಿದ್ದರೂ ಅವರನ್ನು ನಾವೇ ಸಮಾಜದಲ್ಲಿ ತಿರಸ್ಕೃತರನ್ನಾಗಿ ಮಾಡಿದಂತಾಗುತ್ತದೆ. ಶ್ರೀಮಂತ ವರ್ಗದವರು ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದೆ ಬರಬೇಕು. ಒಬ್ಬ ಶ್ರೀಮಂತ ವ್ಯಕ್ತಿ ಕನಿಷ್ಠ 10 ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾದರೆ. ಬಡವರ ಮಕ್ಕಳು ಕೂಡ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುವ ಜೊತೆಗೆ ಬಡವರು ಶ್ರೀಮಂತರೆಂಬ ಕೀಳಿರಿಮೆ ಕೂಡ ದೂರವಾಗಲು ಸಾಧ್ಯವಿದೆ ಎಂದು ನುಡಿದರು.

ಚಿತ್ರನಟ ವಿನಾಯಕ ಜೋಶಿ ಮಾತನಾಡಿ ಎಲ್ಲಾ ರಂಗದಲ್ಲಿ ಪ್ರವೇಶ ಪಡೆಯಲು ಶಿಕ್ಷಣ ಅತಿ ಅಗತ್ಯವಾಗಿದೆ. ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ವಿವಿಧ ರಂಗದೊಳಗೆ ಪ್ರವೇಶ ಪಡೆಯಲು ದಾರಿ ಸಿಗಲಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗದಂತ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮುಂದೆ ಬರಬೇಕು. ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ದೊರಕಿಸಿ ಕೊಡುವ ಶಿಕ್ಷಣ ಸಂಸ್ಥೆಗೆ ಸಾರ್ವಜನಿಕರು ಹೆಚ್ಚು ಮಹತ್ವ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಇಎಸ್ ಶಾಲೆ ಮುಖ್ಯಸ್ಥರಾದ ಎಂ.ಎಸ್. ಹರೀಶ್, ಪ್ರಾಂಶುಪಾಲರಾದ ಚಿಂತು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ