ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮೂಡಿಗೆರೆ ಕ್ಷೇತ್ರ ಸಮಿತಿಯಿಂದ ಇತ್ತೀಚೆಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡದ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪಟ್ಟಣದ ಸಿಂಧೂ ಸಭಾಭವನ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆ ವೈದ್ಯರಾದ ಡಾ. ಕೆ.ವಿ ಮಾನಸ ರವರು ಉದ್ಘಾಟಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವಿಚಾರವಾಗಿ ಮಾಹಿತಿ ನೀಡಿದರು. ಕಣ್ಣು ದೃಷ್ಟಿ ಕಾಪಾಡಿಕೊಳ್ಳುವ ಅಗತ್ಯತೆಯನ್ನು ವಿವರಿಸಿದರು.
ಪ್ರಸಾದ್ ನೇತ್ರಾಲಯ ಉಡುಪಿ ತಜ್ಞ ವೈದ್ಯರಾದ ಡಾ. ಹರ್ಷಿತಾ ರವರು ಎಲ್ಲರೂ ಕಣ್ಣಿನ ತಪಾಸಣೆ ಮಾಡಿಸಿ ಸುಸ್ಥಿತಿಯಲ್ಲಿಟ್ಟು ಕೊಳ್ಳಬೇಕೆಂದರು ಹಾಗೂ ಸಂಘಟನೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹೆಚ್.ಎಂ ಶಿವೇಗೌಡ, ಉಪಾಧ್ಯಕ್ಷರಾದ ಎಂ.ಕೆ ಷಣ್ಮುಖನಂದ, ಪ್ರಧಾನ ಕಾರ್ಯದರ್ಶಿ ಹೆಚ್.ಡಿ ಉದಯ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಿರೀಶ್, ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್, ಜಾಫರ್, ಸುದೀರ್,ಜೋಸ್ನಾ, ಫಲಾನುಭವಿಗಳು, ಹಿರಿಯ ವೃತ್ತಿ ಬಾಂಧವರು, ಸಾರ್ವಜನಿಕರು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜನ ಸಾಮಾನ್ಯರ ಉತ್ತಮ ಸೇವೆ ಸಲ್ಲಿಸುತ್ತಿರುವ ಎಂ.ಜಿ.ಎಂ ಆಸ್ಪತ್ರೆಯ ಖ್ಯಾತ ಜನರಲ್ ಸರ್ಜನ್ ಡಾಕ್ಟರ್ ಕೆ.ವಿ.ಮಾನಸ ರವರನ್ನು ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಉಚಿತ ಕನ್ನಡ ವಿತರಣೆ ಮಾಡಲಾಯಿತು. ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.



