road bandh

 

 

ಸಾರ್ವಜನಿಕರು ತಲತಲಾಂತರದಿಂದ ಸಂಚರಿಸುತ್ತಿದ್ದ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಾಣ ಮಾಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲ್ಲೂಕು, ಆವತಿ ಹೋಬಳಿಯ ಬೆಟ್ಟದಮಳಲಿ, ಕುಳ್ಳೋಡಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳಿದ್ದು. ಗ್ರಾಮಕ್ಕೆ ತೆರಳುವ ಡಾಂಬಾರು ರಸ್ತೆ ಸುಮಾರು 50 ವರ್ಷಗಳಿಂದ ಇದ್ದು. ಈ ರಸ್ತೆಗೆ ಸರ್ಕಾರದಿಂದ ರಸ್ತೆಯ ಅಭಿವೃದ್ಧಿಗೆ ಹಣವು ಸಹ ಬಿಡುಗಡೆ ಮಾಡಿ ರಸ್ತೆಯ ಅಭಿವೃದ್ಧಿಯು ಆಗಿದೆ.

ಆದರೆ ಆ ಗ್ರಾಮದ ಪರಮೇಶಗೌಡ ಮತ್ತು ಸೋಮೆಗೌಡ ಎಂಬುವವರು ಆ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಗೇಟ್ ಮಾಡಿ ರಸ್ತೆಯನ್ನು ಬಂದ್ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮದಲ್ಲಿ ಬಹುತೇಕರು ದಲಿತ ಕುಟುಂಬದವರಾಗಿದ್ದು ಈ ಕುಟುಂಬಗಳು ಹೊರಪ್ರಪಂಚದ ಸಂಪರ್ಕಕ್ಕೆ ಇರುವುದು ಇದೊಂದೆ ರಸ್ತೆ. ಆದರೆ ಈಗ ರಸ್ತೆ ಹಾದುಹೋಗಿರುವ ತೋಟದ ಮಾಲೀಕರು ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸಿರುವುದರಿಂದ ಗ್ರಾಮಸ್ಥರು ಓಡಾಡಲು ತುಂಬ ತೊಂದರೆಯಾಗಿದೆ.

ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅವರಿಗೆ ತಮ್ಮ ದೂರು ನೀಡಿದ್ದು, ಯಾರೂ ಸಹ ಈ ಜನರ ನೆರವಿಗೆ ಬರುತ್ತಿಲ್ಲ. ಕ್ಷೇತ್ರದ ಶಾಸಕರು ಮಧ್ಯಪ್ರವೇಶಿಸಿ ಬಡಜನರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ. ತಲೆತಲಾಂತರದಿಂದ ಇರುವ ರಸ್ತೆಯನ್ನು ಬಂದ್ ಮಾಡಿದ್ದು, ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆಯನ್ನು ಬಿಡಿಸಿಕೊಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಮುಂದೆ ಆಗುವ ತೊಂದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಹಾಗಾಗಿ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೇ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಈ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

*****
ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ