ಮೂಡಿಗೆರೆ ಪಟ್ಟಣದ ಹೃದಯಭಾಗದ ಪವಿತ್ರ ಕ್ಷೇತ್ರ ಶ್ರೀ ಹಿರೇದೇವಿರಮ್ಮನ ಬನದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಲಿದೆ.

ದೇವಾಲಯ ನಿರ್ಮಾಣವಾಗಿ 12 ವರ್ಷಗಳು ತುಂಬಿರುವ ಸುಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ದಿನಾಂಕ 06-03-2023ರಿಂದ ಆರಂಭವಾಗಿ ದಿನಾಂಕ 13-03-2023ರವರೆಗೆ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
108 ಕಾಯಿ ಗಣಪತಿ ಹವನ, ಶತಚಂಡಿಕಾಯಾಗ, ರುದ್ರಹವನ, ಸ್ಕಂಧ ಹವನ, ಧನ್ವಂತರಿ ಹವನ, ನಾಗದೇವರ ಪುನರ್ ಪ್ರತಿಷ್ಠೆ, ಕಳಶಾಭಿಷೇಕ, ಶ್ರೀ ಹಿರೇದೇವಿರಮ್ಮನವರಿಗೂ, ಶ್ರೀ ಅಯ್ಯಪ್ಪಸ್ವಾಮಿಯವರಿಗೂ ಸಹಸ್ರಾಷ್ಟ ಬ್ರಹ್ಮಕಲಶೋತ್ಸವ, ನಿತ್ಯ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕಾಸರಗೋಡಿನ ಕಿಲೀಂಗಾರು ನಡುಮನೆ ಬ್ರಹ್ಮಶ್ರೀ ವೇ.ಮೂ.ಗೋಪಾಲಕೃಷ್ಣಭಟ್ಟರು ಹಾಗೂ ಸಂಗಡಿಗರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ 10 ರಿಂದ 11-30ರ ವರೆಗೆ ಧಾರ್ಮಿಕ ಸಭೆಗಳನ್ನು ಏರ್ಪಡಿಸಲಾಗಿದೆ. ಧಾರ್ಮಿಕ ಸಭೆಗಳಲ್ಲಿ ಹರಿಹರಪುರ ಕ್ಷೇತ್ರದ ಪ್ರರಮಪೂಜ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಶ್ರೀ ರಾಮಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಪೂಜ್ಯ ಶ್ರೀ ಡಾ. ಜಿ. ಭೀಮೇಶ್ವರ ಜೋಷಿಯವರು, ಗೌರಿಗದ್ದೆ ಕ್ಷೇತ್ರದ ಪೂಜ್ಯ ಅವದೂತ ಶ್ರೀ ವಿನಯ ಗುರೂಜಿ, ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಪರಮಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು, ಬೇರುಗಂಡಿ ಬ್ರಹನ್ಮಠದ ಪರಮಪೂಜ್ಯ ಶ್ರೀ ಶ್ರೀ ಷ. ಬ್ರ. ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ. ಬಾರ್ಕೂರು ಮಹಾಸಂಸ್ಥಾನದ ಪರಮಪೂಜ್ಯ ವಿದ್ಯಾವಾಚಸ್ಪತಿ ಡಾ. ಶ್ರೀ ಶ್ರೀ ಶ್ರೀ ವಿಶ್ವ ಸಂತೋಷ ಭಾರತೀ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಪ್ರತಿದಿನ ಸಂಜೆ 7 ಗಂಟೆಯಿಂದ ಭಕ್ತಿಪೂರ್ವಕ ಆರ್ಕೆಷ್ಟ್ರ, ಗೀತಾಗಾಯನ, ಭರತನಾಟ್ಯ, ನೃತ್ಯ, ಯಕ್ಷಗಾನ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಮತ್ತು ಶ್ರೀ ಬ್ರಹ್ಮಕಲಶೋತ್ಸವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸರ್ವರಿಗೂ ಆದರದ ಸುಸ್ವಾಗತ ಕೋರಿದ್ದಾರೆ.




ಬ್ರಹ್ಮಕಲಶೋತ್ಸವದ ಮಾಹಿತಿಗೆ ಸಂಪರ್ಕ ಸಂಖ್ಯೆ : 9480440323, 9448245264, 9448511753



