ಮೂಡಿಗೆರೆ ತಾಲ್ಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಕಾರಿಣಿ ಸಭೆ ಸಂಘದ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.
ಸಂಘದ ಗೌರವ ಅಧ್ಯಕ್ಷರಾದ ಗೋಪಾಲ್ ಎನ್ ಶೆಟ್ಟಿ ಮಾತನಾಡಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಇರುವ ಕಾರ್ಮಿಕರ ಧ್ವನಿ ವಿಧಾನಸಭೆ ಪ್ರವೇಶಿಸಬೇಕು, ಹಾಗಾಗಿ ತಮ್ಮ ಸಂಘದ ಅಧ್ಯಕ್ಷರಾದ ರಮೇಶ್ ಕೆಳಗೂರು ಅವರು ಈ ಬಾರಿ ಸಿ.ಪಿ.ಐ ಅಭ್ಯರ್ಥಿಯಾಗಿ ಮೂಡಿಗೆರೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ಅವರನ್ನು ಬೆಂಬಲಿಸಬೇಕು.
ಇಡೀ ರಾಜ್ಯಕ್ಕೆ ಮಾದರಿ ಆಗುವ ರೀತಿ ಕೆಲಸ ನಿರ್ವಹಿಸಿ, ಹೋರಾಟದ ಹಿನ್ನಲೆ ಇರುವ ನಿಮ್ಮದೇ ಸಂಘದ ಅಧ್ಯಕ್ಷರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಬದ್ಧರಾಗಿ ಕೆಲಸ ನಿರ್ವಹಿಸಲು ಮುಂದಾಗಬೇಕು ಎಂದರು.
ಮೂಡಿಗೆರೆ ಇದುವರೆಗೂ ಅಭಿವೃದ್ಧಿಯಲ್ಲಿ ತೀರ ಹಿಂದೆ ಉಳಿದ್ದಿದ್ದು ಜನರಿಗೆ ಪ್ರಶ್ನೆ ಮಾಡುವ ಮನೋಭಾವ ಇಲ್ಲದಿರುವುದು ಈ ಹಿನ್ನಡೆಗೆ ಕಾರಣವಾಗಿದೆ. ಈ ಬಾರಿ ಮೂಡಿಗೆರೆಯ ರಾಜಕೀಯ ಪಕ್ಷಗಳು ಬಣಗಳಾಗಿ ಹಂಚಿ ಹೋಗಿದೆ ಇಲ್ಲಿ ಎಲ್ಲರಿಗೂ ಅಧಿಕಾರದ ಆಸೆ ಆದರೆ ಜನರ ಬಗ್ಗೆ ಚಿಂತಿಸುವವರು ಯಾರು ಇಲ್ಲ ಹಾಗಾಗಿ ಜನರ ಬಗ್ಗೆ ಒಲವು ಇರುವ ಅಭಿವೃದ್ಧಿ ಬಗ್ಗೆ ಚಿಂತನೆ ಮತ್ತು ಯೋಜನೆ ಯೋಚನೆ ಇರುವಂತಹ ಉತ್ತಮ ಶಿಕ್ಷಣ ಹೋರಾಟದ ಹಿನ್ನಲೆ ಯುವ ನಾಯಕ ರಮೇಶ್ ಕೆಳಗೂರು ಗೆಲುವು ಮೂಡಿಗೆರೆಗೆ ತುರ್ತಾಗಿ ಅಗತ್ಯವಿದೆ ಹಾಗಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಾರ್ಯಕಾರಿಣಿ ಸಭೆ ಯಶಸ್ವಿ ತೀರ್ಮಾನ ಕೈಗೊಳ್ಳಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ,ಉಪಾಧ್ಯಕ್ಷ ವಿಠಲ್,ಕೃಷ್ಣ,ಪ್ರಕಾಶ್ ಪರಮೇಶ್ ,ರವಿ,ಶಾಂತಪ್ಪ, ಇತರ ಪ್ರಮುಖರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ರಮೇಶ್ ಕೆಳಗೂರು ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.




