ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಇಲ್ಲವಾಗುತ್ತಿದ್ದು ಬಂಧವನ್ನು ಗಟ್ಟಿಗೊಳಿಸಬೇಕಿದೆ ಎಂದು ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ನವೀನ್ ಮಂಡಗದ್ದೆ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪರಿಸರದ ಕತೆ ಕೃತಿಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಜೀವಿಯೊಂದು ನಾಶವಾದರೆ ನಮ್ಮ ಪರಂಪರೆ, ಸಂಸ್ಕøತಿಯ ಜೊತೆಗಿನ ನಂಟು ಕಡಿದು ಹೋಗುತ್ತದೆ. ಆ ಜೀವಿಯ ನಾಶ ಇತರ ಜೀವ ಸಂಕುಲದ ಮುನ್ನುಡಿಯಾಗಿರುವುದರಿಂದ ಜೀವ ವೈವಿದ್ಯದ ಉಳಿವಿಗೆ ಕಂಕಟಬದ್ದವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂವಾದ, ವಿಚಾರ ಸಂಕಿರಣ, ಚಾರಣ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿದೇಶಕರಾದ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ ತೇಜಸ್ವಿ ಅವರ ಕೃತಿಗಳನ್ನು ಯುವ ಪೀಳಿಗೆ, ವಿದ್ಯಾರ್ಥಿಗಳು ಓದಬೇಕಿದೆ. ಪರಿಸರ ಉಳಿವಿನ ಮಹ್ವತ ಸಾರಿದ ತೇಜಸ್ವಿ ಅವರ ಬದುಕು ಬರಹ ಪ್ರೇರಣೆಯಾಗಬೇಕಿದೆ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್, ಬಣಕಲ್ ಜೆಸಿಐ ವಿಸ್ಮಯದ ಅಧ್ಯಕ್ಷ ಕೃಷ್ಣೆಗೌಡ, ಬಣಕಲ್ ಕಸಾಪ ಅಧ್ಯಕ್ಷ ಆದರ್ಶ್ ತರುವೆ ಮಾತನಾಡಿದರು.
ಪ್ರತಿಷ್ಠಾನದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಸಂದರ್ಭದಲ್ಲಿ ತೇಜಸ್ವಿ ಒಡನಾಡಿ ಬಾಪು ದಿನೇಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ವನ್ಯಜೀವಿ ಛಾಯಾಗ್ರಾಹಕ ಶಿವಕುಮಾರ್ ಹಿರೇಗೌಜ, ಬಾಳೂರು ಹೋಬಳಿ ಕಸಾಪ ಅಧ್ಯಕ್ಷ ರವಿ ಪಟೇಲ್ ಕೂವೆ, ವಿವೇಕಾನಂದ ಸಂಘದ ಅಧ್ಯಕ್ಷ ಸಾಗರ್, ಉಪಾಧ್ಯಕ್ಷ ದೀಕ್ಷಿತ್, ವಿಮುಕ್ತಿ ಬಣಕಲ್‍ನ ನಿರ್ದೇಶಕರಾದ ಫಾ.ಎಡ್ವಿನ್ ಡಿಸೋಜಾ, ಜೇಸಿಐ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ರವಿಶಂಕರ್, ಶೌರ್ಯ ವಿಪತ್ತು ತಂಡದ ಸುರೇಶ್, ಕೊಟ್ಟಿಗಹಾರ ಪ್ರೌಢಶಾಲೆ. ತರುವೆ ಏಕಲವ್ಯ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ನಿರಂತರ ಸುದ್ದಿ ಹಾಗೂ ಉಪಯುಕ್ತ ಮಾಹಿತಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak
ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ


