tasifldar2

 

 

ಮೂಡಿಗೆರೆ ತಾಲ್ಲೂಕಿನಲ್ಲಿ 2019-20ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಸಂಭವಿಸಿದ ಅತಿವೃಷ್ಟಿ, ಭೂಕುಸಿತದ ಪರಿಣಾಮವಾಗಿ ನೂರಾರು ಜನರು ತಮ್ಮ ಮನೆ ಜಮೀನು ಕಳೆದುಕೊಂಡಿದ್ದರು. ಅತಿವೃಷ್ಟಿಯಿಂದ ನೆಲೆಯನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಮನೆನಿರ್ಮಾಣ ಮಾಡಿಕೊಡಲು ಸರ್ಕಾರ ಅನುದಾನ ನೀಡಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ಮೂಡಿಗೆರೆ ತಹಸೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಪೂರ್ಣಗೊಳ್ಳಲು ಬಾಕಿ ಇರುವ ಅತಿವೃಷ್ಟಿ ಸಂತ್ರಸ್ತರ ಮನೆಗಳ ಬಗ್ಗೆ ಪತ್ರಿಕೆ ತಹಸೀಲ್ದಾರ್ ರವರಲ್ಲಿ ಮಾಹಿತಿ ಕೇಳಿದಾಗ ಅವರು ಈ ಕೆಳಗಿನಂತೆ ವಿವರ ನೀಡಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 383 ಮನೆಗಳು ಪೂರ್ಣಗೊಳ್ಳಲು ಬಾಕಿ ಇವೆ. ಬಣಕಲ್ ಹೋಬಳಿ 29, ಕಸಬಾ ಹೋಬಳಿ 46, ಬಾಳೂರು ಹೋಬಳಿ 194 ಮತ್ತು ಗೋಣಿಬೀಡು ಹೋಬಳಿ 114 ಮನೆಗಳ ನಿರ್ಮಾಣಕ್ಕೆ ಬಾಕಿ ಇದೆ.

20219-20ನೇ ಸಾಲಿನ 226, 2020-21ನೇ ಸಾಲಿನ 22, 2021-22ನೇ ಸಾಲಿನ 13, 2022-23ನೇ ಸಾಲಿನ 122 ಮನೆಗಳು ಪೂರ್ಣಗೊಳ್ಳಲು ಬಾಕಿ ಉಳಿದಿವೆ.

ಅಪೂರ್ಣವಾಗಿರುವ ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ಷೇತ್ರದ ಶಾಸಕರು ಸೂಚನೆ ನೀಡಿರುತ್ತಾರೆ ಹಾಗೆಯೇ ಸಂತ್ರಸ್ತರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳ ಕಛೇರಿಯಿಂದಲೂ ಪತ್ರ ಬಂದಿದೆ.

ತಾಲ್ಲೂಕಿನ ಎಲ್ಲಾ ಹೋಬಳಿಗಳ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು  ಪ್ರತಿ ಫಲಾನುಭವಿಯನ್ನು ಭೇಟಿ ಮಾಡಿ ಪರಿಶೀಲಿಸಿ ಮನೆ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದಕ್ಕೆ ಕಾರಣ ತಿಳಿದು ಮಾಹಿತಿ ನೀಡಲು ಸೂಚನೆ ನೀಡಿ ಕಳುಹಿಸಿಕೊಡಲಾಗಿದೆ. ಅಪೂರ್ಣಗೊಂಡಿರುವ ಮನೆಗಳನ್ನು ಪೂರ್ಣಗೊಳಿಸಲು ಕೂಡಲೇ ಕ್ರಮ ವಹಿಸಲಾಗುವುದು ಎಂದಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ