vhp

 

 

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173 ಜನ್ನಾಪುರ ಸರ್ಕಲ್ ರಸ್ತೆ ಬದಿಯಲ್ಲಿ ಸುಮಾರು ಅರ್ಧ ಅಡಿ ಮಣ್ಣು ಹಾಗೂ ಮರಳು ತುಂಬಿಕೊಂಡಿದ್ದು, ವಾಹನ ಸಂಚಾರರಿಗೆ ತುಂಬಾ ತೊಂದರೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಗೋಣಿಬೀಡು ಹೋಬಳಿ ಬಜರಂಗದಳದ ಕಾರ್ಯಕರ್ತರು ಬುಧವಾರ ರಾತ್ರಿ ರಸ್ತೆಯಲ್ಲಿದ್ದ ಮಣ್ಣು, ಮರಳನ್ನು ತೆರವುಗೊಳಿಸಿದರು.

ಸ್ವಚ್ಛತೆ ಕಾರ್ಯದ ಸಂದರ್ಭದಲ್ಲಿ ಜನ್ನಾಪುರ ಬಸ್ ಸ್ಟಾಂಡ್ ಸಂಪೂರ್ಣ ಕಲುಷಿತಗೊಂಡಿದ್ದು, ಅದನ್ನು ಸ್ವಚ್ಛಗೊಳಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮ ಗೋಣಿಬೀಡು ಹೋಬಳಿಯ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಹ ಸಂಯೋಜಕ ಅಭಿ ಅರ್.ಗೌಡ, ಹೋಬಳಿ ಗೋ ರಕ್ಷಾ ಪ್ರಮುಖ್ ನವೀನ್ ಜನ್ನಾಪುರ, ನಗರ ಸಹ ಸಂಯೋಜಕ ರಾಜು, ಬಜರಂಗದಳ ಕಾರ್ಯಕರ್ತರಾದ ಪ್ರೀತಮ್. ಪ್ರಜ್ವಲ್. ಅಭಿಜಿತ್. ಪವನ್. ಅಭಿಷೇಕ್, ಸುಜಯ್. ಮನೋಜ್. ಗೋಣಿಬೀಡು ಹೋಬಳಿಯ ಜೆಡಿಎಸ್ ಅಧ್ಯಕ್ಷ ಪ್ರಹ್ಲಾದ್. ಆಟೋ ಚಾಲಕರದ ಸುದೀಪ್. ಅಣ್ಣಪ್ಪ. ಟ್ಯಾಕ್ಟರ್ ಮಾಲೀಕ ಕೀರ್ತಿ ಪ್ರಸಾದ್. ಸ್ಥಳೀಯರಾದ ಪ್ರೀತಮ್, ಪ್ರಸನ್ನ ಮತ್ತಿತರರಿದ್ದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ