ಚಾಲಕನ ನಿಯಂತ್ರಣ ತಪ್ಪಿ 10 ಚಕ್ರದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪದ ಹೊರಟ್ಟಿ ಸಮೀಪ ಪ್ಲೈವುಡ್ ತುಂಬಿದ ಲಾರಿ ಪಲ್ಟಿಯಾಗಿದೆ.

ಚಾಲಕ ಮತ್ತು ಕ್ಕೀನರ್ ಗೆ ಪೆಟ್ಟಾಗಿದ್ದು ಬಣಕಲ್ ಅಂಬುಲೆನ್ಸ್ ಆರೀಫ್ ಅವರ ನೆರವಿನಿಂದ ಮೂಡಿಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ

ಮೂಡಿಗೆರೆ ಅಬ್ಬಾಸ್ ಮರದ ಮಿಲ್ ನಿಂದ ಲೋಡ್ ಮಾಡಿಕೊಂಡು ಮಹಾರಾಷ್ಟ್ರ ಕ್ಕೆ ಹೊರಟಿದ್ದ ಲಾರಿ ಪಲ್ಟಿ ಹೊಡೆದಿದೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಬಣಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ
ದಾರಿ ತಪ್ಪಿ ಬಂದಿದ್ದ ಲಾರಿ : ಲಾರಿ ಚಿಕ್ಕಮಗಳೂರು ಮೂಲಕ ಮಹಾರಾಷ್ಟ್ರ ಕಡೆಗೆ ತೆರಳಬೇಕಾಗಿತ್ತು. ಆದರೆ ಡ್ರೈವರ್ ದಾರಿ ತಪ್ಪಿ ಬಣಕಲ್ ರಸ್ತೆಯಲ್ಲಿ ಲಾರಿ ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಮಳೆ ಹಾಗೂ ದಟ್ಟ ಮಂಜು ಆವರಿಸಿದ್ದರಿಂದ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.



