IMG-20231011-WA0050

 

 

ದೇವರಮನೆ ಪ್ರವಾಸಕ್ಕೆ   ಬಂದಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ ಕಣ್ಮರೆ ಪ್ರಕರಣ ಸುಖಾಂತ್ಯ ಕಂಡಿದೆ. ಯುವಕ ಕೆಲ ಸಮಯದ ಹಿಂದೆ ತನ್ನ ಮನೆಗೆ ಮರಳಿದ್ದಾನೆ ಎಂದು ತಿಳಿದುಬಂದಿದೆ.

ದೇವರ ಮನೆ ಪ್ರವಾಸ ಮುಗಿಸಿ ವಾಪಸ್ ಬರುವಾಗ ನಿನ್ನೆ ನಾಪತ್ತೆಯಾಗಿದ್ದ

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಗುಡ್ಡ ತೋಟ ಬಳಿ ಘಟನೆ ನಡೆದಿತ್ತು

ಪ್ರವಾಸಕ್ಕೆ ಬಂದಿದ್ದ ನಾಲ್ಕು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದ ಯುವಕನಿಗೆ ರಾತ್ರಿಯೆಲ್ಲ  ಹುಡುಕಾಟ ನಡೆಸಿದರು ಸುಳಿವು ಸಿಕ್ಕಿರಲಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಯುವಕರು ನಿನ್ನೆ ದೇವರಮನೆಗೆ ಪ್ರವಾಸಕ್ಕೆ ಬಂದಿದ್ದರು.

ವಾಪಾಸು ಬರುವಾಗ ಕೋಗಿಲೆ ಬಣಕಲ್ ಸಮೀಪದ ಗುಡ್ಡತೋಟ ಬಳಿ ಕಾರು ನಿಲ್ಲಿಸಿ ಯುವಕರು ಜಗಳವಾಡಿಕೊಂಡಿದ್ದರುಎನ್ನಲಾಗಿದೆ.

ಮುನಿಸಿಕೊಂಡು ಕಾರು ಹತ್ತದೆ ಹೋದ ಯುವಕ ಕಣ್ಮರೆಯಾಗಿದ್ದ

ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ದೀಕ್ಷಿತ್ (27), ನಾಪತ್ತೆಯಾಗಿ ಆತಂಕ ಸೃಷ್ಟಿಸಿದ ಯುವಕ

ಮಾತಿನ ಚಕಮಕಿ ಬಳಿಕ ಸಿಟ್ಟು ಮಾಡಿಕೊಂಡು ಕಾರು ಹತ್ತದೇ ಒಂಟಿಯಾಗಿ ಹೋಗಿದ್ದ ದೀಕ್ಷಿತ್.

ರಾತ್ರಿಯಿಡಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳಿಂದ ಯುವಕನಿಗಾಗಿ ಶೋಧ ನಡೆಸಲಾಗಿತ್ತು.

ಇಂದು ಬೆಳಗ್ಗೆಯೂ ಯುವಕನಿಗಾಗಿ ಶೋಧ ಕಾರ್ಯಕ್ಕೆ ತಯಾರಿ ನಡೆಸಲಾಗಿತ್ತು.

ಆದರೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ಸಮಯಕ್ಕೆ ಯುವಕ ಕೊಯ್ಯೂರಿನ ತನ್ನ ಮನೆಗೆ ಮರಳಿರುವ ಬಗ್ಗೆ ಕುಟುಂಬದವರು ಮಾಹಿತಿ ನೀಡಿದ್ದಾರೆ

ಇದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ