September 16, 2026
;
dbc 2

 

 

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡರು ಓರ್ವ ಅದ್ಭುತ ಸಂಸದೀಯ ಪಟುವಾಗಿದ್ದರು, ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಕಿಸಾನ್ ಕಾಂಗ್ರೇಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.

ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಚಂದ್ರೇಗೌಡರ ವಿಶಿಷ್ಟ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. ಚಂದ್ರೇಗೌಡರ ರಾಜಕೀಯ ಜೀವನ ವೈವಿಧ್ಯಮಯವಾಗಿತ್ತು. ತನ್ನ 35ನೇ ವರ್ಷಕ್ಕೆ ಅವರು ಲೋಕಸಭಾ ಸದಸ್ಯರಾಗಿದ್ದರು. ಇಂದಿರಾಗಾಂಧಿಯವರಿಗೆ ಸ್ಥಾನಬಿಟ್ಟುಕೊಟ್ಟು ಚಿಕ್ಕಮಗಳೂರು ಜಿಲ್ಲೆಗೆ ರಾಜಕೀಯ ಮಹತ್ವ ತಂದುಕೊಟ್ಟರು.

ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು. ಸಂಸದೀಯ ನಡಾವಳಿಕೆಗಳ ಬಗ್ಗೆ ಆಳವಾದ ಮತ್ತು ನಿಖರವಾದ ಜ್ಞಾನ ಹೊಂದಿದ್ದರು. ಯುವ ರಾಜಕಾರಣಿಗಳಿಗೆ ಅವರ ಸಂಸದೀಯ ನಡಾವಳಿಕೆಗಳು ಮಾದರಿಯಾಗಿದ್ದವು. ಅವರು ಶೃಂಗೇರಿ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ನಮ್ಮಂತಹ ಯುವಕರನ್ನು ಬೆನ್ನುತಟ್ಟಿ ರಾಜಕೀಯದಲ್ಲಿ ಮುಂದೆ ಬರಲು ಪ್ರೋತ್ಸಾಹಿಸಿದ್ದರು ಎಂದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;