September 13, 2026
;
1003999930

 

 

ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ 12 ದಿನಗೂಲಿ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಹಂಗಾಮಿ ನೌಕರರು ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಡಿಎಸ್ಎಸ್ ಮುಖಂಡ ಹೊನ್ನಪ್ಪ ಮಾತನಾಡಿ, 10 ವರ್ಷಗಳಿಂದ ಪಂಚಾಯಿತಿಯಲ್ಲಿ ದಿನಗೂಲಿ ನೌಕರರಾಗಿ ನೀರುಗಂಟಿ ಕೆಲಸ ಮಾಡುತ್ತಿದ್ದವರಿಗೆ ಆಲ್ಲೂರು ಪಿಡಿಒ ಅವರು ಈ ತಿಂಗಳಿಂದ ನೀವು ಕೆಲಸಕ್ಕೆ ಬರುವುದು ಬೇಡ ಎಂದು ಕರೆ ಮಾಡಿ ಹೇಳಿದ್ದಾರೆ. ಈ ಬಗ್ಗೆ ಸರಕಾರದ ಆದೇಶವಿದ್ದರೆ ತೋರಿಸಲಿ. ಪಿಡಿಒ ಅವರನ್ನು ಕೇಳಿದರೆ ಇಒ ಆದೇಶ ಮಾಡಿದ್ದಾರೆ ಎನ್ನುತ್ತಾರೆ. ಪಿಡಿಒ ಪಂಚಾಯಿತಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸಾಲು ಹಗರಣದಲ್ಲಿ ಮುಳುಗಿಹೋಗಿದ್ದಾರೆ. ಪುರ ಗ್ರಾಮದಲ್ಲಿ ಬಸವಣ್ಣಗುಡಿ ಕೆರೆ ಹೂಳು ಎತ್ತುವುದರಲ್ಲಿ ಬಿಲ್ ಮಾಡಿಕೊಂಡು ಲಕ್ಷಾಂತರ ರೂ. ಲೂಟಿ ಹೊಡೆದಿದ್ದಾರೆ. ಸರಕಾರದ .ಆದೇಶದ ಹೆಸರಿನಲ್ಲಿ ಬಡ ರೈತರ ತೋಟದಲ್ಲಿ ಕಾಫಿ ಗಿಡ, ಅಡಕೆ ಗಿಡಗಳನ್ನು ಕಡಿದುಹಾಕಿದ್ದಾರೆ. ಆದರೆ, ಒತ್ತುವರಿ ಮಾಡಿರುವ ಉಳ್ಳವರನ್ನು ರಕ್ಷಣೆ ಮಾಡುತ್ತಿದ್ದಾರೆ.

ಹಂಗಾಮಿ ನೌಕರರನ್ನು ವಜಾಗೊಳಿಸಿರುವ ಆದೇಶವನ್ನು ಹಿಂಪಡೆಯದಿದ್ದರೆ ನೌಕರರ ಕುಟುಂಬ ಸಮೇತ ಆಡಳಿತಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಪಂಚಾಯಿತಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಾಮಾಜಿಕ ಕಾರ್ಯಕರ್ತ ಅರೆನೂರು ಸುಪ್ರೀತ್ ಮಾತನಾಡಿ, ಜಿಲ್ಲೆಯ 48 ಗ್ರಾಮ ಪಂಚಾಯಿತಿಗಳಲ್ಲಿ ನೂರಾರು ಹಂಗಾಮಿ ನೌಕರರು ಕೆಲಸ ಮಾಡುತ್ತಿದ್ದಾರೆ. ಯಾವ ಪಂಚಾಯಿತಿಯಲ್ಲಿಯೂ ನೌಕರರನ್ನು ವಜಾ ಮಾಡಿಲ್ಲ. ಆದರೆ, ಇಲ್ಲಿ ಯಾವುದೇ ನೋಟಿಸ್ ನೀಡದೆ ವಜಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯ ನಿರ್ದೇಶಕ ಅಶೋಕ್ ಹಾಗೂ ಆಲ್ಲೂರು ಪಂಚಾಯಿತಿ ಆಡಳಿತಾಧಿ ಕಾರಿ ರುದ್ರಪ್ಪ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಬರಬೇಕು ಎಂದು ಪ್ರತಿಭಟನಾ ಕಾರರು ಪಟ್ಟುಹಿಡಿದರು. ಕೊನೆಗೆ ಜಿ.ಪಂ. ಸಿಇಓ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ನೇಮಕ ಮಾಡಿರುವ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದರಿಂದ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಗೆ ತೆರಳಿದರು

ಗ್ರಾ.ಪಂ.ಮಾಜಿ ಸದಸ್ಯರಾದ ಗಿರೀಶ್, ಪೂರ್ಣೇಶ್, ಭರತ್, ಸಂಘಟನೆಗಳ ಮುಖಂಡರು, ಎಸ್‌ಡಿಪಿಐ ಪಕ್ಷದವರು ಪಾಲ್ಗೊಂಡಿದ್ದರು

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;