September 13, 2026
;
NEWS 1

 

 

ರೈಲ್ವೆ ಕಾಮಗಾರಿಗೆ ಜಮೀನು ಮತ್ತು ವಾಸದ ಮನೆ ಬಳಕೆ ಮಾಡಿಕೊಂಡು ಪರಿಹಾರದಲ್ಲಿ ಅನ್ಯಾಯ ಮಾಡುತ್ತಿರುವ  ಗಂಜಲಗೋಡು ಗ್ರಾಮದ ರೈತರ ಧರಣಿ ಪರ ವಾಗಿ ಶನಿವಾರ ಜಿಲ್ಲಾ ರೈತ ಸಂಘ ಹಾಗೂ ಬಿಜೆಪಿ ವತಿಯಿಂದ ಗ್ರಾಮದಲ್ಲಿ ನಡೆಯುತ್ತಿರುವ ಒಂಭತ್ತನೇ ದಿನದ ಪ್ರತಿಭಟನೆಗೆ ಬೆಂಬಲಿಸುವ ಮೂಲಕ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ ದೀಪಕ್‍ದೊಡ್ಡಯ್ಯ ಅಂಬಳೆ ಹೋಬಳಿಯ ಗಂಜಲ ಗೋಡು ಗ್ರಾಮದಲ್ಲಿ ರೈಲ್ವೆ ಕಾಮಗಾರಿಯು ಪ್ರಗತಿಯಲ್ಲಿದೆ. ಚಿಕ್ಕಮಗಳೂರು ಮತ್ತು ಆಲೂರು ರೈಲ್ವೆ ಮಾಗ ್ ಸಂಪರ್ಕಿಸಲು ಗಂಜಲಗೋಡು ಮುಖಾಂತರ ರೈಲ್ವೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಗ್ರಾಮದ ಸ.ನಂ.08 ರಲ್ಲಿ 14 ಕುಟುಂಬಗಳು 45 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಪೈಕಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ 4 ಕುಟುಂಬಕ್ಕೆ ಮಾತ್ರ ಪಹಣಿ, ದಾಖಲೆ ನೀಡಿದ್ದು ಅವರಿಗೆ ಪರಿಹಾರದ ಮೊತ್ತವು ಲಭ್ಯವಾಗಿದೆ ಎಂದು ಹೇಳಿದರು.

ಇದೇ ಗ್ರಾಮದಲ್ಲಿ ನಾಲ್ಕೂವರೆ ದಶಕಗಳಿಂದ ಸಾಗುವಳಿ ಮಾಡಿಕೊಂಡ ಉಳಿದ 10 ಕುಟುಂಬಗಳಿಗೆ ಯಾವುದೇ ಖಾತೆ, ಪಹಣಿ ಇಲ್ಲವೆಂಬ ಕಾರಣ ನೀಡಿ, ಪರಿಹಾರವು ಒದಗಿಸದೇ ರೈಲ್ವೆ ಕಾಮಗಾರಿ ಆರಂಭಿಸಲಾಗಿದ್ದು, ಹೀಗಾಗಿ ಅಧಿಕಾರಿಗಳ ತಪ್ಪಿಗೆ ರೈತರನ್ನು ಹೊಣೆಗಾರರನ್ನಾಗಿಸದೇ ನ್ಯಾಯಸಮ್ಮತವಾಗಿ ದೊ ರೆಯಬೇಕಾದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಜಮೀನನ್ನೇ ನಂಬಿಕೊಂಡು ಗಂಜಲಗೋಡು ಗ್ರಾಮದ ರೈತರು ಜೀವನ ನಡೆಸುತ್ತಿರುವ ಜೊತೆಗೆ ಮನೆ ಕಟ್ಟಿಕೊಂಡಿಲ್ಲದೇ, ಸಾಲಸೋಲ ಮಾಡಿ ಮಕ್ಕಳ ಮದುವೆಯು ಮಾಡಿಸಲಾಗಿದ್ದು ಈ ನಿಟ್ಟಿಯಲ್ಲಿ ರೈಲ್ವೆ ಇಲಾಖೆ ರೈತರಿಗೆ ಪರಿಹಾರ ಒದಗಿಸಿಕೊಡುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಮಾತನಾಡಿ ರೈಲ್ವೆ ನಿರಾಶ್ರಿತರ ಹೋರಾಟವು ಅನೇಕ ದಿನಗಳು ಗಂಜಲಗೋಡು ಗ್ರಾಮದಲ್ಲಿ ರೈತರು ನಡೆಸುತ್ತಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷಗಳ ಹಿಂದೆಯೂ ಗ್ರಾ ಮದ ರೈತರು ರೈಲ್ವೆ, ಕಂದಾಯ ಇಲಾಖೆ, ಜಿಲ್ಲಾಧಿಕಾರಿ, ಶಾಸಕರು ಗಮನಕ್ಕೂ ತಂದು ಭೂಮಿ ಕಳೆದುಕೊ ಳ್ಳಲಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿದರೂ ಯಾವುದೇ ಗಮನಹರಿಸುತ್ತಿಲ್ಲ ಎಂದು ದೂರಿದರು.

ಗಂಜಲಗೋಡು ಗ್ರಾಮದಲ್ಲಿ ಒಂದೆರಡು ಎಕರೆ ಹೊಂದಿರುವ ಅತಿಸಣ್ಣ ರೈತರು ವಾಸಿಸುತ್ತಿದ್ದಾರೆ. ಅ ಲ್ಲದೇ ಯಗಚಿ ಡ್ಯಾಂಗೂ ಭೂಮಿ ನೀಡುವ ಜೊತೆಗೆ ಇದೀಗ ರೈಲ್ವೆಗೂ ಭೂಮಿಯನ್ನು ವಶಪಡಿಸಿಕೊಳ್ಳು ತ್ತಿದ್ದು ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಪ್ರಭಾವ ಒಳಗಾಗಿ ಕೆಲವ ರಿಗೆ ಮಾತ್ರ ಪರಿಹಾರ ಕೊಟ್ಟು ಉಳಿದ ಅತಿಕಡು ಬಡರೈತರನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋ ಪಿಸಿದರು

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ರೈತರನ್ನು ಸುಲಿಗೆಗೆ ಯತ್ನಿಸುತ್ತಿವೆ. ಕಚೇರಿಗೆ ಸಮೀಪ ವು ಸುಳಿಯಲು ಅವಕಾಶ ನೀಡುತ್ತಿಲ್ಲ. ಇಲ್ಲಿನ ಸಹಾಯಕ ಅಧೀಕ್ಷಕರು ನಿಮ್ಮ ಹೆಸರಿನಲ್ಲಿ ಪಹಣಿಯಿಲ್ಲ, ರೈ ಲ್ವೆ ಪರಿಹಾರಕ್ಕೆ ಬರಬೇಡಿ ಎಂಬ ಉಡಾಫೆ ಉತ್ತರ ನೀಡುವುದಲ್ಲದೇ, ಹೊರಗಡೆಯಿಂದಲೇ ವಾಪಸ್ ಕಳು ಹಿಸುವ ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.

ಈ ಸಂಬಂಧ ಗಂಜಲಗೋಡು ಗ್ರಾಮಸ್ಥರು ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ರೈಲ್ವೆ ಇಲಾಖೆ ಮುಂದಾಗಬೇಕು. ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಬಡ ರೈತರ ಪರವಾಗಿ ಗ್ರಾಮಸ್ಥರ ನೇತೃತ್ವದಲ್ಲಿ ರೈತ ಸಂಘ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಕೆ.ಪಿ.ಸುನೀಲ್ ಕುಮಾರ್, ಕುಮಾರಸ್ವಾಮಿ, ಜಗದೀಶ್, ಈಶ್ವರಪ್ಪ, ಯುವರಾಜ್, ಗಂಜಲಗೋಡು ನಿರಾಶ್ರಿತರ ರೈತರಾದ ಲಕ್ಷ್ಮಣಗೌಡ, ಕೆಂಚೇಗೌಡ, ರಾಜೇಗೌಡ, ಲೋಕೇಗೌಡ, ಗಿಡ್ಡೇಗೌಡ, ನಂಜಪ್ಪ, ರಂಗಮ್ಮ, ಹೂವಮ್ಮ, ತಮ್ಮಣ್ಣಗೌಡ, ತಿಮ್ಮೇಗೌಡ ಮು ಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;