nagarasabe

 

 

ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆ  ನಾಟಕೀಯ ಬೆಳವಣಿಗೆಗೆ ಸಾಕ್ಷಿ ಆಯಿತು.
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ನಗರದ ಹಲವಡೆ ಬ್ಯಾನರ್/ಹೋಲ್ಡಿಂಗ್ ಗಳನ್ನು ಹಾಕುವ ಮೂಲಕ ಅನಗತ್ಯ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿರೋಧ ಒಡ್ಡಿದಾಗ ಮಾತಿನ ಚಕಮಕಿ ನಡೆಯಿತು. ನಗರಸಭೆ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು /ಲೆಕ್ಕ ಪತ್ರದ ಬಗ್ಗೆ   ಚರ್ಚೆಗೆ ಅವಕಾಶ ಕಲ್ಪಿಸುವಂತೆ ಮಾಡಿದ ಮನವಿಗೂ ಅಧ್ಯಕ್ಷರು ಸ್ಪಂದಿಸಲಿಲ್ಲ. ಯಾವುದೇ ವಿಷಯಗಳ ಚರ್ಚೆಗೆ ಅವಕಾಶ ನೀಡದೆ ಬಹುಮತವಿದೆ ಎಂದು ಪ್ರಕಟಿಸಿದ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಭೆಯನ್ನು ಅರ್ಧದಲ್ಲೇ ಮುಕ್ತಾಯಗೊಳಿಸಿ ಹೊರ ನಡೆದರು.
ಅಧ್ಯಕ್ಷರನ್ನು ಬೆಂಬಲಿಸಿ ಶಾಸಕರು ಹಾಗೂ ಕಾಂಗ್ರೆಸ್ ಸದಸ್ಯರು ತೆರಳಿದರು. ಅಧ್ಯಕ್ಷರ ಈ ವರ್ತನೆಯನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.
23 ಸದಸ್ಯರಲ್ಲಿ ಕೇವಲ 16 ಸದಸ್ಯರು ಅಧ್ಯಕ್ಷರ ಬೆಂಬಲಕ್ಕೆ ನಿಂತಿದ್ದು, ಬಹುಮತ ಇಲ್ಲದಿದ್ದರೂ ಅಧ್ಯಕ್ಷರು ಏಕಪಕ್ಷಿಯವಾಗಿ  ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ನಗರಸಭೆ ಅಧ್ಯಕ್ಷರಿಗೆ ಬೆಂಬಲವಾಗಿ ನಿಂತ ಶಾಸಕ ಎಚ್. ಡಿ. ತಮ್ಮಯ್ಯನವರ ಕ್ರಮವನ್ನು ಖಂಡಿಸಿದರು.
ನಗರ ಸಭೆಯ ಸುಮಾರು ಐದು ಕೋಟಿ ರೂ. ವೆಚ್ಚದ   ಕಾಮಗಾರಿಗಳನ್ನು ಅನುಮೋದನೆ ಇಲ್ಲದೆ ಕೈಗೆತ್ತಿಕೊಳ್ಳಲು ಹೊರಟ ಅಧ್ಯಕ್ಷರ ವರ್ತನೆಯನ್ನು ಆಕ್ಷೇಪಿಸಿದರು.
ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರ/ಕ್ರಮಬದ್ಧವಾಗಿ ಸಭೆ  ನಡೆಸದ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದರ ಜೊತೆಗೆ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಬಿ.ಜೆ.ಪಿ. ಸದಸ್ಯರಾದ ಎ. ಸಿ. ಕುಮಾರ್,  ಟಿ. ರಾಜಶೇಖರ್  ಎಚ್ಚರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ