ಮೂಡಿಗೆರೆ ಜೇಸಿಐ ಸಂಸ್ಥೆಯ ವತಿಯಿಂದ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಸೌಹಾರ್ದ ಸಂಕ್ರಾಂತಿ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡಿಗೆರೆ ಜೇಸಿಐ ಸದಸ್ಯರು ಪಟ್ಟಣದ ಹಿರಿಯರಾದ ಜಮೀರ್ ಅವರ ಮನೆಗೆ ತೆರಳಿ ಅವರ ಮನೆಯವರಿಗೆ ಎಳ್ಳುಬೆಲ್ಲ ನೀಡಿ ಸಂಕ್ರಾಂತಿ ಶುಭ ಕೋರಿದರು ಮತ್ತು ಜಮೀರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷರಾದ ಸುಪ್ರೀತ್ ಮಾತನಾಡಿ ಸಂಕ್ರಾಂತಿ ಹಬ್ಬವು ನಮ್ಮ ಮನೆ, ಮನೆಗಳಲ್ಲಿ ಸಂತೋಷವನ್ನು ತಂದು ಕೊಡುವ ಅದ್ಭುತವಾದ ಹಬ್ಬ,ಈ ಹಬ್ಬವು ಸೂರ್ಯನು ಪಥ ಬದಲಿಸುವ ಸಂದರ್ಭದಲ್ಲಿ ಭೂಮಿಯಲ್ಲಿ ಉತ್ತಮ ಕೃಷಿ ಚಟುವಟಿಕೆಗಳಾದ ಸುಗ್ಗಿ ಕಾರ್ಯ,ಒಕ್ಕಲಾಟ,ಬೆಳೆ ಕಟಾವು ಮುಂತಾದ ಕೆಲಸಗಳಿಗೆ ಉತ್ತಮ ಸಮಯವಾಗಿದೆ ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಬೆಳೆಸುವಂತಹ ಹಬ್ಬ.

ಮೂಡಿಗೆರೆ ಜೇಸಿಐ ವತಿಯಿಂದ ಪ್ರತಿವರ್ಷ ಸೌಹಾರ್ದ ಸಂಕ್ರಾಂತಿಯನ್ನು ಆಚರಿಸಿಕೊಂಡು ಬಂದಿದ್ದು, ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು, ಸೌಹಾರ್ದತೆ ಎಲ್ಲರಲ್ಲೂ ಬೆಳೆಯಬೇಕು ಎಂಬ ಉದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರು.
ಈ ಸಂದರ್ಭದಲ್ಲಿ ಲೇಡಿ ಜೇಸಿ ಅಧ್ಯಕ್ಷರಾದ ದಿವ್ಯ ಸುಪ್ರೀತ್, ಪದಾಧಿಕಾರಿಗಳಾದ ಸುದೇವ್, ಆಕಾಶ್, ಸುನಿಲ್, ರವಿ.ಕೆ.ಎನ್, ಪ್ರಸಾದ್ ಉಪಸ್ಥಿತರಿದ್ದರು.



