rotary1

 

 

ಸಮಾಜ ಪರಿವರ್ತನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಬದಲಾವಣೆ ಕಾಣುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ರೋಟರಿ 3182 ಜಿಲ್ಲಾರಾಜ್ಯಪಾಲೆ ಬಿ.ಸಿ.ಗೀತಾ ನುಡಿದರು.

ಚಿಕ್ಕಮಗಳೂರು ರೋಟರಿ ಕ್ಲಬ್‍ಗೆ ನಿನ್ನೆ ಅಧಿಕೃತ ಗುರುವಾರ ಭೇಟಿ ನೀಡಿದ್ದ ಅವರು, ಸಂಜೆ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಭರವಸೆ ಮೂಡಿಸುವುದು, ಸಕಾರಾತ್ಮಕವಾದ ಪರಿವರ್ತನೆಯನ್ನು ತರುವುದು ರೋಟರಿ ಆಶಯ. ಈ ಹಿನ್ನಲೆಯಲ್ಲಿ ವಿವಿಧ ಯೋಜನೆಗಳನ್ನು ತಂದಿದ್ದು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆನೀಡಿದ ಗೀತಾ, ಈ ನಿಟ್ಟಿನಲ್ಲಿ ಜೀವನಸಂಧ್ಯಾ ವೃದ್ಧಾಶ್ರಮ ದೇಶದಲ್ಲೆ ಉತ್ತಮಯೋಜನೆ ಎಂದು ಶ್ಲಾಘಿಸಿದರು.

ಸಮಾಜದಲ್ಲಿ ಬದಲಾವಣೆ ಕಾಣಲು ಮೌಲ್ಯಧಾರಿತ ಶಿಕ್ಷಣ ಅಗತ್ಯ. ಸಮಾಜದಲ್ಲಿಂದು ಸಂಸ್ಕøತಿ, ಸಂಸ್ಕಾರ, ಸನ್ನಡತೆ, ಸದ್ಭಾವಗಳು ಕಡಿಮೆಯಾಗುತ್ತಿವೆ. ಹಿಂದೆ ಕಲಿಕೆಯಲ್ಲಿ ಇರುತ್ತಿದ್ದ ನೀತಿ ಬೋಧೆ ಈಗ ಇಲ್ಲ. ಶಿಕ್ಷಣಸಂಸ್ಥೆಗಳಿಗೆ ತೆರಳಿ ಉತ್ತಮಮೌಲ್ಯಗಳನ್ನು ಸ್ಮರಿಸುವ ಮೂಲಕ ಕೊಂಚ ಬದಲಾವಣೆ ತರಬಹುದೆಂಬ ಹಿನ್ನಲೆಯಲ್ಲಿ ಜಿಲ್ಲಾ ಯೋಜನೆಯಲ್ಲಿ ಇದಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಸುರಕ್ಷತಾ ಚಾಲನೆ, ಮಣ್ಣಿನ ಫಲವತತ್ತೆ, ಸಂರಕ್ಷಣೆ ಜೊತೆಗೆ ಇ-ತ್ಯಾಜ್ಯನಿರ್ವಹಣೆ ಈವರ್ಷದ ಜಿಲ್ಲಾಯೋಜನೆಯ ಪ್ರಮುಖ ಅಂಶ ಎಂದ ಗೀತಾ ಈ ನಿಟ್ಟಿನಲ್ಲಿ ಕ್ಲಬ್‍ಗಳು ಉತ್ತಮ ಸ್ಪಂದನೆ ಮಾಡಿವೆ ಎಂದರು.

ಜಿಲ್ಲೆಯಲ್ಲೆ ಪ್ರತಿಷ್ಠಿತ ಎನಿಸಿಕೊಂಡಿರುವ ಚಿಕ್ಕಮಗಳೂರು ರೋಟರಿಗೆ ಮಹಿಳಾ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಪಡಿಸಿದ ಗೀತಾ, ಶಿಸ್ತುಬದ್ಧತೆ ಅಚ್ಚುಕಟ್ಟುತನ, ದಾಖಲಾತಿಗಳ ಸಂರಕ್ಷಣೆ, ಜಿಲ್ಲಾಯೋಜನೆಗಳ ಸಮರ್ಪಕ ಜಾರಿ ನಿಟ್ಟಿನಲ್ಲಿ ಉತ್ತಮ ಸಾಧನೆಯಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಪಡೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ರೋಟರಿ ಜಿಲ್ಲಾ ಸಮ್ಮೇಳನ ‘ನಿಸರ್ಗ’ ಚಿಕ್ಕಮಗಳೂರಿನಲ್ಲಿ ಆಯೋಜಿಸುತ್ತಿದ್ದು, ಅದರ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದ ಗೀತಾ, ಕ್ಲಬ್ ಬುಲೆಟಿನ್ ‘ಕ್ರಿಸ್ಪ್’ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಶ್ರೀವತ್ಸವ್ ಸ್ವಾಗತಿಸಿ, 66ನೆಯ ವರ್ಷದಲ್ಲಿ ಮುನ್ನಡೆಯುತ್ತಿರುವ ಚಿಕ್ಕಮಗಳೂರು ರೋಟರಿ ಹಲವು ಸಮುದಾಯ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದೆ. ಶಾಲಾ ಸಬಲೀಕರಣ, ಆರೋಗ್ಯಸ್ವಚ್ಛತೆಗೆ ಆದ್ಯತೆ ನೀಡಿದ್ದು ಪ್ರತಿಭಾ ಸಂಭ್ರಮವನ್ನು ಉತ್ತಮವಾಗಿ ಸಂಘಟಿಸಲಾಗಿತ್ತೆಂದರು.

ಕಾರ್ಯದರ್ಶಿ ಎಂ.ಎಲ್.ಸುಜಿತ್ ಪವರ್‍ಪಾಯಿಂಟ್ ಮೂಲಕ ವಾರ್ಷಿಕವರದಿ ಪ್ರಸ್ತುತಪಡಿಸಿ ವಂದಿಸಿದರು. ‘ಕ್ರಿಸ್ಪ್’ ವಿವರಗಳನ್ನು ಸಂಪಾದಕ ಬಿ.ಎಚ್.ಸಂಮೃದ್ಧಪೈ ತಿಳಿಸಿದರು. ನಂದಿತಾಶ್ರೀವತ್ಸವ್ ಪ್ರಾರ್ಥಿಸಿ, ಶ್ರೇಯಸ್ ಅತಿಥಿ ಪರಿಚಯಿಸಿದರು. ರೋಟರಿ ಫೌಂಡೇಶನ್‍ಗೆ ಸದಸ್ಯರ ಕೊಡುಗೆಯನ್ನು ಟಿಆರ್‍ಎಫ್ ಛೇರ್ಮನ್ ಕೆ.ಪಿ.ಪ್ರವೀಣ್ ಹಸ್ತಾಂತರಿಸಿದರು. ನೂತನ ಸದಸ್ಯರನ್ನು ಎಂ.ಎಸ್. ಸುಧೀರ್ ಪರಿಚಯಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ