ಮೂಡಿಗೆರೆ ತಾಲ್ಲೂಕು, ಬಣಕಲ್ ಸುಭಾಷನಗರದ ನಿವಾಸಿ ಮಾಜಿ ಯೋಧ ಗಿರಿಯಪ್ಪ ಪೂಜಾರಿ (76) ಹೃದಯಾಘಾತದಿಂದ ಗುರುವಾರ ನಿಧನರಾದರು.
ಇವರು ಸೈನಿಕರಾಗಿ ಸಿಖಂದರಬಾದ್,ಮದ್ರಾಸ್ ಎಂಇಜಿ ಇಂಜಿನೀಯರ್ ವಿಭಾಗ,ಲೇ ಲಡಾಕ್,ಜಮ್ಮು ಕಾಶ್ಮೀರ್ ಹಾಗೂ ಭಾರತದ ಹಲವು ಕಡೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. 24 ವರ್ಷಗಳ ಕಾಲ ಯೋಧರಾಗಿ ಸೇವೆ ನೀಡಿ ಬೆಂಗಳೂರಿನಲ್ಲಿ ನಿವೃತ್ತಿಯಾಗಿದ್ದರು. ತದನಂತರ ಸಾಗರದ ಎಸ್ ಬಿಎಂ ಬ್ಯಾಂಕ್ ನಲ್ಲಿ ಸೆಕ್ಯುರಿಟಿಯಾಗಿ ಸೇವೆ ನೀಡಿ ನಂತರ ಮೂಡಿಗೆರೆ ಎಸ್ ಬಿಎಂ ಬ್ಯಾಂಕಿನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಸೇವೆ ನೀಡಿ ನಿವೃತ್ತಿಯಾಗಿದ್ದರು.
ಬಣಕಲ್ ನ ಸುಭಾಷನಗರದ ಮನೆಯಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ಬಣಕಲ್ ರುದ್ರಭೂಮಿಯಲ್ಲಿ ಸಕಲ ಗೌರವಗಳೊಂದಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


