electrict

 

 

ರಾತ್ರಿ ಸಮಯ ಗ್ರಾಮಕ್ಕೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ಕಂಬವನ್ನು ಮನೆಯ ಮೇಲೆ ಉರುಳಿಸಿದ ಘಟನೆ ಸಕಲೇಶಪುರ ಸಮೀಪ ನಡೆದಿದೆ. ಸಕಲೇಶಪುರ ತಾಲ್ಲೂಕಿನ ಶಿಡಗಳಲೆಯಲ್ಲಿ ಈ ಘಟನೆ ನಡೆದಿದೆ.

ಆನೆ ಮುಂಜಾನೆ ವೇಳೆ ಗ್ರಾಮಕ್ಕೆ ಬಂದಿದ್ದು, ಮಲ್ಲಿಕಾರ್ಜುನ್ ಎಂಬುವರ ಮನೆಯ ಮುಂಭಾಗ ಇದ್ದ ವಿದ್ಯುತ್ ಕಂಬದ ಮೇಲೆ ದಾಳಿ ಮಾಡಿದೆ. ಇದರಿಂದ 440 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಹಾಗೂ ಕಂಬ ಮನೆಯ ಮೇಲೆ ಬಿದ್ದಿದೆ. ಕಂಬ ಬೀಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಕಂಬ ಬಿದ್ದ ಶಬ್ದಕ್ಕೆ ಮಲ್ಲಿಕಾರ್ಜನ್ ಕುಟುಂಬಸ್ಥರು ಗಾಬರಿಗೊಂಡು ಮನೆಯ ಕಿಟಕಿಯಿಂದ ನೋಡಿದ್ದಾರೆ. ಈ ವೇಳೆ ಕಾಡಾನೆ ಮನೆಯ ಮುಂಭಾಗವೇ ನಿಂತಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ದೊಡ್ಡ ಗುಂಪು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡುವ ಜೊತೆಗೆ ವಾಸದ ಮನೆಗಳ ಮೇಲೂ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೇ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ