ರಾಜ್ಯದ ನಿಗಮ ಮತ್ತು ಮಂಡಗಳಿಗೆ ಅಧ್ಯಕ್ಷರ ನೇಮಕದ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 35 ಶಾಸಕರಿಗೆ ನಿಗಮದ ಅಧ್ಯಕ್ಷತೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಎರಡನೇ ಪಟ್ಟಿಯಲ್ಲಿ 44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನಾ ನಿಗಮ, ಮಂಡಳಿ, ಅಕಾಡೆಮಿಗಳಲ್ಲಿ ಅವಕಾಶ ಒದಗಿಸಿದ್ದಾರೆ.
ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದರೆ, ಹಿಂದೆ ಮಹಿಳಾ ಆಯೋಗ ಅಧ್ಯಕ್ಷೆಯಾಗಿದ್ದ ನಾಗಲಕ್ಷ್ಮಿ ಚೌಧರಿ ಅವರಿಗೆ ಮತ್ತದೇ ಹುದ್ದೆಯನ್ನು ನೀಡಿ ಗೌರವಿಸಲಾಗಿದೆ.
ಹೊಸ ನೇಮಕಾತಿಯಲ್ಲಿ ರಾಜ್ಯ ಮಟ್ಟದ ಕೆಲವು ಜವಾಬ್ದಾರಿಗಳಿದ್ದರೆ, ಹೆಚ್ಚಿನವರು ಜಿಲ್ಲಾ ಮತ್ತು ನಗರ ಮಟ್ಟದ ಜವಾಬ್ದಾರಿ ಹೊಂದಿವೆ. ಹಲವು ನಗರಾಭಿವೃದ್ಧಿ ಪ್ರಾಧಿಕಾರಗಳಗೆ ಇಲ್ಲಿ ನೇಮಕಾತಿ ನಡೆದಿದೆ.
ಕಾಂತಾ ನಾಯ್ಕ ಅವರನ್ನು ಕೌಶಲಾಭಿವೃದ್ಧಿ ನಿಗಮಕ್ಕೆ, ಎಚ್.ಸಿ. ಸುಧೀಂದ್ರ ಅವರನ್ನು ತೆಂಗು ಅಭಿವೃದ್ಧಿ ಮಂಡಳಿ, ಮಮತಾ ಗಟ್ಟಿ ಅವರನ್ನು ಗೇರು ಅಭಿವೃದ್ಧಿ ಮಂಡಳಿ, ಜಯಸಿಂಹ ಅವರನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಕಾಂಗ್ರೇಸ್ ಮುಖಂಡರಿಗೆ ಈ ಬಾರಿಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಅವಕಾಶ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ. ಅಂಶುಮಂತ್ ಅವರನ್ನು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (Bhadra Command Area Development Authority) ಶಿವಮೊಗ್ಗ ಇದರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹಾಗೆಯೇ ಈ ಹಿಂದೆ ಜೆ.ಡಿ.ಎಸ್.ನಲ್ಲಿ ಇದ್ದ ನಂತರ ಕಾಂಗ್ರೇಸ್ ಪಕ್ಷ ಸೇರಿದ್ದ ಬಿ.ಹೆಚ್. ಹರೀಶ್ ಅವರನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನೂತನವಾಗಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಈ ಕೆಳಗಿನಂತಿದೆ.






